ಬ್ರೇಕಿಂಗ್ ನ್ಯೂಸ್
04-04-23 01:55 pm Source: news18 ಸಿನಿಮಾ
ಪ್ರಭುದೇವ ಅವರ ಸ್ಪಷ್ಟ ಕನ್ನಡ
ಯಾರೇ ಆದರೂ ಪ್ರಭುದೇವ ಅವರ ಸಿನಿಮಾ, ಡ್ಯಾನ್ಸ್, ನಿರ್ದೇಶನವನ್ನು ನೋಡಿದ್ದರೆ ಅವರ ಪ್ರತಿಭೆಯನ್ನು ಮೆಚ್ಚುತ್ತಾರೆ. ಅವರ ಟ್ಯಾಲೆಂಟ್ಗೆ ಸಲಾಂ ಎನ್ನುತ್ತಾರೆ. ಆದರೆ ಅವರ ಕನ್ನಡ ಕೇಳಿದ್ರೆ ಕನ್ನಡಿಗರಂತೂ ಮೆಚ್ಚಿ ತಲೆದೂಗುತ್ತಾರೆ. ಇದರಲ್ಲಿ ಡೌಟೇ ಇಲ್ಲ.
ನೀವಿಷ್ಟು ಚಂದ ಕನ್ನಡ ಮಾತಾಡ್ತೀರಾ?
ಕಾಲಿವುಡ್ ನಟ ಪ್ರಭುದೇವ ಅವರು ವೀಕೆಂಡ್ ವಿತ್ ರಮೇಶ್ನಲ್ಲಿ ಎರಡನೇ ವಾರದ ಅತಿಥಿಯಾಗಿ ಭಾಗವಹಿಸಿದ್ದಾರೆ. ನಟನ ನಿರರ್ಗಳವಾಗಿ ಕನ್ನಡ ಮಾತನಾಡುವುದನ್ನು ಕೇಳಿದ ಕನ್ನಡ ಕಿರುತೆರೆ ಪ್ರೇಕ್ಷಕರು ಹಾಗೂ ವೀಕೆಂಡ್ ವಿತ್ ರಮೇಶ್ ಶೋ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇವರಿಗೆ ಇಷ್ಟೊಂದು ಚೆನ್ನಾಗಿ ಕನ್ನಡ ಮಾತನಾಡಲು ಬರುತ್ತದೆಯೇ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚಿಸುತ್ತಿದ್ದಾರೆ.

ವೀಕೆಂಡ್ ವಿತ್ ರಮೇಶ್ ನೋಡೋ ತನಕ ಈ ಸತ್ಯ ಗೊತ್ತಿರಲಿಲ್ಲ
ನಿಜ ಹೇಳ್ತೀವಿ ಕೇಳಿ. ವೀಕೆಂಡ್ ವಿತ್ ರಮೇಶ್ ಶೋ ನೋಡುವ ತನಕವೂ ಇವರು ಇಷ್ಟು ಚಂದ ಕನ್ನಡ ಮಾತನಾಡುತ್ತಾರೆ ಎನ್ನುವ ವಿಚಾರ ನಮಗೆ ಗೊತ್ತಿರಲಿಲ್ಲ ಎಂದು ನೆಟ್ಟಿಗರು ಪ್ರೋಮೋಗೆ ಕಮೆಂಟ್ ಮಾಡಿದ್ದಾರೆ. ಅಚ್ಚುಕಟ್ಟಾಗಿ ಕನ್ನಡ ಮಾತನಾಡಿದ್ದಕ್ಕೆ ಜನರು ಪ್ರಭುದೇವ ಅವರನ್ನು ಹೊಗಳುತ್ತಿದ್ದಾರೆ.

ಅಪ್ಪಟ ಕನ್ನಡದ ಕೂಸು
ಸ್ಯಾಂಡಲ್ವುಡ್ ನಿರ್ದೇಶಕ ಯೋಗರಾಜ್ ಭಟ್ ಅವರೂ ಈ ಶೋದಲ್ಲಿ ಬಂದಿದ್ದಾರೆ. ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭು ದೇವ ಅವರ ಕುರಿತು ಮಾತನಾಡಿದ್ದಾರೆ. ಮೂಗೂರಿನ ಅಪ್ಪಟ ಕನ್ನಡದ ಕೂಸು ಪ್ರಭು ದೇವ ಅನ್ನೋದನ್ನ ಕೂಡ ಹೇಳಿಕೊಂಡಿದ್ದಾರೆ.
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟುಬೇಕು ಅನ್ನುವ ಅಣ್ಣಾವ್ರ ಹಾಡಿಗೆ ಪ್ರಭು ದೇವ, ಮೂಗೂರು ಸುಂದರಂ, ರಮೇಶ್ ಅರವಿಂದ್ ಅವರು ಡ್ಯಾನ್ಸ್ ಮಾಡಿದ್ದಾರೆ. ತುಂಬಾ ವಿಶೇಷವಾಗಿ ಇಲ್ಲಿ ಇನ್ನೂ ಒಂದು ಘಟನೆಯ ಝಲಕ್ ಕೂಡ ಸಿಗುತ್ತದೆ.
ಮೊದಲ ಎಪಿಸೋಡ್ನಲ್ಲಿ ಟ್ರೋಲ್ ಆದ ರಮ್ಯಾ
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮೊದಲ ಅತಿಥಿಯಾಗಿದ್ದ ನಟಿ ರಮ್ಯಾ ಅವರು ಕಾರ್ಯಕ್ರಮದಲ್ಲಿ ಕನ್ನಡಕ್ಕಿಂತ ಹೆಚ್ಚು ಇಂಗ್ಲಿಷ್ ಬಳಸಿ ಟ್ರೋಲ್ ಆಗಿದ್ದರು. ಪ್ರೋಗ್ರಾಂ ನೋಡಿದವರೆಲ್ಲ ನಟಿಯನ್ನು ಟ್ರೋಲ್ ಮಾಡಿದ್ದರು. ಕನ್ನಡದವರೇ ಆದ ರಮ್ಯಾಗೆ ಕನ್ನಡ ಬರಲ್ವಾ ಎಂದು ಬಹಳಷ್ಟು ಜನರು ರಮ್ಯಾ ಅವರ ನಡೆಗೆ ವಿರೋಧ ವ್ಯಕ್ತಪಡಿಸಿದ್ದರು. ಈಗ ರಮ್ಯಾ ನಂತರ ಪ್ರಭುದೇವ ಅವರು ಕಾರ್ಯಕ್ರಮಕ್ಕೆ ಬಂದಿರುವುದು, ಅದರಲ್ಲೂ ನಟ ಕನ್ನಡ ಮಾತನಾಡಿರುವುದು ವ್ಯಾಪಕ ಮೆಚ್ಚುಗೆ ಗಳಿಸಿದೆ.
people surprised to see tamil actor prabhu deva speak in kannada fluently on weekend with ramesh show.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm