ಬ್ರೇಕಿಂಗ್ ನ್ಯೂಸ್
24-03-23 02:03 pm Source: news18 ಸಿನಿಮಾ
ಆದರೆ ಕಾಂತಾರ ಸಿನಿಮಾ ಯಾವ ರೀತಿ ವಿಮರ್ಶಾತ್ಮಕ ಮೆಚ್ಚುಗೆ ಪಡೆಯಿತೋ ಅದೇ ರೀತಿ ಕೆಲವೊಂದು ನೆಗೆಟಿವ್ ಪರಿಣಾಮಗಳನ್ನೂ ಕಂಡಿದೆ. ಸಿನಿಮಾ ರಿಲೀಸ್ ಆಗಿ ದೈವಾರಾಧವನೆ ವಿಚಾರ ಎಲ್ಲರಿಗೂ ತಿಳಿಯಿತು. ಆದರೆ ಹಿಂದೆ ಮುಂದೆ ನೋಡದೆ ಜನರು ಇದನ್ನು ತಮಗೆ ಬೇಕಾದಲ್ಲಿ, ಬೇಕಾದಂತೆ ಬಳಸಲು ಪ್ರಾರಂಭಿಸಿದ್ದಾರೆ. ಸಿನಿಮಾ ರಿಲೀಸ್ ಆದ ಆರಂಭದಲ್ಲಿಯೇ ಬಹಳಷ್ಟು ಜನರು ದೈವದ ಕೂಗನನ್ನು ಇಮಿಟೇಟ್ ಮಾಡಿದ್ದರು. ಆಗಲೇ ರಿಷಬ್ ಶೆಟ್ಟಿ ಅವರು ಈ ಬಗ್ಗೆ ಎಚ್ಚರಿಕೆ ಕೊಟ್ಟು ಆಟಕ್ಕಾಗಿ, ರೀಲ್ಸ್ಗಾಗಿ ಇದನ್ನು ಮಾಡಬೇಡಿ ಎಂದು ಕೂಡಾ ಹೇಳಿದ್ದರು. ಆದರೆ ಕಾಂತಾರದ ಕ್ರೇಜ್ ಜನರನ್ನು ಬೇಕಾದಂತೆ ವರ್ತಿಸಲು ಪ್ರೇರೇಪಿಸುತ್ತಿದೆ.
ಬೆಂಗಳೂರಿಗೆ ಗಂಗಮ್ಮ ತಾಯಿಗೆ ಪಂಜುರ್ಲಿ ಅಲಂಕಾರ
ಪ್ರತಿ ದೇವರಿಗೂ ಅಲಂಕಾರ ಮಾಡಲು ಆಯಾ ವಿಧಾನಗಳಿರುತ್ತವೆ. ಬಣ್ಣ, ಹೂಗಳು, ಬಟ್ಟೆ, ಆಭರಣ, ಆರತಿಗಳು ಎಲ್ಲರಲ್ಲೂ ಪ್ರತ್ಯೇಕತೆಗಳಿವೆ. ಹಾಗೆಯೇ ಕರಾವಳಿಯಲ್ಲಿ ದೈವದ ಅಲಂಕಾರವೂ ವಿಭಿನ್ನ. ಈ ಅಲಂಕಾರ ಪದ್ಧತಿಗಳು ಇಂದಿನದ್ದಲ್ಲ. ಹಿಂದಿನಿಂದಲೇ ನಡೆದುಕೊಂಡುಬಂದಿರುವುದು. ಅದನ್ನು ಬೇಕಾಬಿಟ್ಟಿ ಬಳಸುವ ಹಾಗಿಲ್ಲ. ಆದರೆ ಈ ಹಿಂದೆ ಈ ರೀತಿಯ ದೈವದ ಅಲಂಕಾರವನ್ನು ಬೇಕಾಬಿಟ್ಟಿಯಾಗಿ ಯಾರೂ ಮಾಡುತ್ತಿರಲಿಲ್ಲ. ಆದರೆ ಈಗ ಆ ಧೋರಣೆ ಬದಲಾಗಿದೆ.

ಗಂಗಮ್ಮ ತಾಯಿಗೆ ಪಂಜುರ್ಲಿ ಅಲಂಕಾರ ಯಾಕೆ?
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಗಂಗಮ್ಮ ಗುಡಿಯಲ್ಲಿ ಗಂಗಮ್ಮ ತಾಯಿಗೆ ಪಂಜುರ್ಲಿ ದೈವದ ಅಲಂಕಾರವನ್ನು ಮಾಡಲಾಗಿದೆ. ತೆಂಗಿನ ಎಳೆಯ ಗರಿಗಳಿಂದ ಮಾಡುವ ಅದೇ ಅಲಂಕಾರವನ್ನು ಇಲ್ಲಿ ಬಳಸಲಾಗಿದೆ. ಅಷ್ಟೇ ಅಲ್ಲದೆ ಕೈಯಲ್ಲಿ ದೀಟಿಗೆಯನ್ನೂ ಇಡಲಾಗಿದೆ. ತುಳುನಾಡಿನ ದೈವದ ಅದೇ ರೂಪವನ್ನು ಗಂಗಮ್ಮ ತಾಯಿಗೆ ಮಾಡಿದ್ದು ತೀವ್ರವಾಗಿ ಟೀಕೆ ಎದುರಾಗಿದೆ.
ರಿಷಬ್ ಶೆಟ್ಟಿ ಅವರೇ ಸಿನಿಮಾ ಮಾಡುವ ಮೊದಲು ಅನುಮತಿ ಪಡೆದಿದ್ದರು
ದೈವದ ಆಭರಣ ಮುಟ್ಟುವುಕ್ಕೂ, ಬಳಸುವುದಕ್ಕೂ, ಅಲಂಕಾರ ಮಾಡುವುದಕ್ಕೂ ವಿಧಾನಗಳಿವೆ. ಇನ್ನೂ ವಿಶೇಷವೆಂದರೆ ದೈವಗಳಿಗೆ ಮಾಡುವ ಅಲಂಕಾರ ದೈವಾರಾಧನೆ ಬಿಟ್ಟು ಬೇರೆ ಸಂದರ್ಭಗಳಲ್ಲಿ ಬಳಸುವ ಹಾಗಿಲ್ಲ.
ಹಾಗಾಗಿಯೇ ರಿಷಬ್ ಶೆಟ್ಟಿ ಈ ಬಗ್ಗೆ ಸಿನಿಮಾ ಮಾಡುವಾಗಲೂ ಧರ್ಮಸ್ಥಳಕ್ಕೆ ಹೋಗಿ ಅನುಮತಿ ಕೇಳಿಯೇ ಸಿನಿಮಾದಲ್ಲಿ ಕೂಡಾ ಬಳಸಿದ್ದರು. ಆದರೆ ಇದು ಬಹಳಷ್ಟು ಜನರಿಗೆ ಅರ್ಥವಾಗದೆ ತಮಗೆ ಬೇಕಾದಲ್ಲಿ ಬೇಕಾಬಿಟ್ಟಿಯಾಗಿ ಬಳಸುತ್ತಿರುವುದು ತುಳುನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ರಿಷಬ್ ಶೆಟ್ಟಿ ಬಗ್ಗೆ ತುಳು ಜನರ ವಿರೋಧ
ಇದೀಗ ಸೋಷಿಯಲ್ ಮಿಡಿಯಾದಲ್ಲಿ ಗಂಗಮ್ಮ ತಾಯಿಯ ಪಂಜುರ್ಲಿ ಅಲಂಕಾರ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಕಾಂತಾರ ಸಿನಿಮಾದ ಹಾಡನ್ನೂ ಕೂಡಾ ಬಳಸಲಾಗಿದೆ. ರೋಶನ್ ರೆನಾಲ್ಡ್ ಎನ್ನುವವರು ಶೇರ್ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ.
ಪಂಜುರ್ಲಿ ಅಲಂಕಾರ, ಗಂಗಮ್ಮ ಗುಡಿ, ಮಲ್ಲೇಶ್ವರಂ. ನಿಮ್ಮ ಹಣದಾಸೆಗೆ ಇಡೀ ತುಳುನಾಡ ಆರಾಧನೆಯನ್ನು ಎಲ್ಲಿ ತಲುಪಿಸಿದಿರಿ ರಿಷಬ್ ಶೆಟ್ಟಿ ಅವರೇ (ಪಂಜುರ್ಲಿ ಅಲಂಕಾರ, ಗಂಗಮ್ಮ ಗುಡಿ, ಮಲ್ಲೇಶ್ವರಂ
Rishab Shetty Films ಇಡೀ ತುಳುನಾಡ ಆರಾಧನೆ ಒಡೆ ಎತ್ತಾಯ ಮಾರಾಯ ನಿನ್ನ ಕಾಸ್ದ ಆಸೆಗ್) ಎಂದು ವಿಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

ಇವರಿಗೆಲ್ಲ ಏನಾಗಿದೆ? ತಲೆ ಸರಿ ಇಲ್ವಾ? ಕಾಂತಾರ 2 ರಿಲೀಸ್ ಆಗಬಾರದು. ಸಿನಿಮಾ ರಿಲೀಸ್ ಆದರೆ ಫ್ಲಾಪ್ ಆಗಬೇಕು. ಇದನ್ನು ನೋಡಿಯೇ ಈ ರೀತಿ ಅಪಚಾರ ಮಾಡುವ ಜನರಿಗೆ ಏನೆಂದು ಹೇಳುವುದು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಕಾಂತಾರ ಸಿನಿಮಾ ಮಾಡಿ ಇಷ್ಟೆಲ್ಲ ಮಾಡಿದರು. ಇನ್ನು ಕಾಂತಾರ 2 ಸಿನಿಮಾ ಬರಬೇಕೇ? ಇನ್ನಾದರೂ ತುಳುವ ಸಂಸ್ಕೃತಿಯನ್ನು ಉಳಿಸುವ ಎಂದಿದ್ದಾರೆ ನೆಟ್ಟಿಗರು.

ರಿಷಬ್ ಶೆಟ್ಟಿ ದೈವಕ್ಕೆ ಮರ್ಯಾದೆ ಇಲ್ಲದಂತೆ ಮಾಡಿದರು, ಇದಕ್ಕೆ ರಿಷಬ್ ಶೆಟ್ಟಿ ಅವರೇ ಟ್ವೀಟ್ ಮಾಡಿ ಪ್ರೋತ್ಸಾಹ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ನೆಟ್ಟಿಗರು. ವಿಡಿಯೋಗೆ ಕಮೆಂಟ್ ಮಾಡಿದ ಬಹಳಷ್ಟು ಜನರು ಕಾಂತಾರ 2 ಸಿನಿಮಾ ಬರಬಾರದು ಎಂದು ಹೇಳಿದ್ದಾರೆ.
kantara Rishab Shetty panjurli daiva look on gangamma devi malleshwaram bengaluru tulu people gives call to ban kantara 2.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
02-09-26 08:31 pm
HK News Staffer
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
ನೇಪಾಳ ದುರಂತ ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇ...
31-08-26 01:28 pm
02-09-26 10:51 pm
HK News Desk
UT Khader, Mangalore: ಸಚಿವರ ಹೆಸರಲ್ಲಿ ಕಮಿಷನ್...
02-09-26 10:30 pm
ಗಂಗೊಳ್ಳಿಯಲ್ಲಿ ಮತ್ತೆ ದೋಣಿ ಅವಘಡ ; 6 ಮೀನುಗಾರರ ರಕ...
02-09-26 08:44 pm
ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರ...
02-09-26 08:29 pm
ಆರೋಗ್ಯದ ವಿಚಾರದಲ್ಲಿ ರಾಜಿ ಇಲ್ಲ ; ಆಹಾರ ಸುರಕ್ಷತೆ...
02-09-26 07:09 pm
02-09-26 07:18 pm
HK News Staffer
ಓವರ್ಟೇಕ್ ವಿಚಾರದಲ್ಲಿ ಕಿರಿಕ್; ಕಾಲೇಜು ವಿದ್ಯಾರ್...
02-09-26 07:12 pm
ಕೇರಳಂ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನದ ಆಮಿಷ ; ತೆ...
02-09-26 10:37 am
ಸಿಬಿಐ ಅಧಿಕಾರಿ ಸೋಗಿನಲ್ಲಿ ದೇಶಾದ್ಯಂತ ವಂಚನಾ ಜಾಲ ;...
01-09-26 07:30 pm
ಧಾರವಾಡ ; ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡ...
01-09-26 02:58 pm