ಬ್ರೇಕಿಂಗ್ ನ್ಯೂಸ್
01-03-23 02:03 pm Source: news18 ಸಿನಿಮಾ
ಮುಂಬೈಯಲ್ಲಿ ದಾದಾ ಸಾಹೇಬ್ ಪಾಲ್ಕೆ ಅಕಾಡೆಮಿ ಪ್ರಶಸ್ತಿ ಪಡೆದು ಬಂದ ರಿಷಬ್ ಶೆಟ್ಟಿ, ಏರ್ಪೋರ್ಟ್ನಲ್ಲಿಯೇ ಮಾಧ್ಯಮಕ್ಕೂ ಮಾತನಾಡಿದ್ದರು. ಪ್ರಶಸ್ತಿ ಕುರಿತು ಹೇಳಿಕೊಂಡಿದ್ದರು. ಹೀಗೆ ದಿಢೀರನೆ ಮಾಧ್ಯಮವನ್ನ ವಿಮಾನ ನಿಲ್ದಾಣದಲ್ಲಿಯೇ ಮಾತನಾಡಿಸಿ ರಿಷಬ್ ಶೆಟ್ಟಿ ಹೋಗಿದ್ದು ಬೇರೆ ಎಲ್ಲೋ ಅಲ್ಲ. ತಮ್ಮ ಕಾಂತಾರ ಪ್ರಿಕ್ವೆಲ್ ಚಿತ್ರದ ಕೆಲಸದಲ್ಲಿ ತಲ್ಲೀನರಾಗಲು.
ಹೌದು, ರಿಷಬ್ ಶೆಟ್ಟಿ ಎಂದಿನಂತೆ ತಮ್ಮ ಕೆಲಸ ಮುಂದುವರೆಸಿದ್ದಾರೆ. ಯಾವುದೇ ರೀತಿಯ ಬೇರೆ ವಿಷಯಗಳನ್ನ ತಲೆಗೆ ಹಚ್ಚಿಕೊಳ್ಳದೇ ಧ್ಯಾನಸ್ಥ ಸ್ಥಿತಿಯಲ್ಲಿ ಕಾಂತಾರ ಪ್ರಿಕ್ವೆಲ್ ಕೆತ್ತಲು ಕುಳಿತಿದ್ದಾರೆ. ಆದರೆ ರಿಷಬ್ ಶೆಟ್ರಿಗೆ ಇನ್ನೂ ಒಂದು ಒತ್ತಡ ಇದ್ದೇ ಇದೆ. ಅದು ಗೆಲುವು, ಜನರ ನಿರೀಕ್ಷೆಯನ್ನ ಹುಸಿಗೊಳಿಸದೇ ಇರೋವಂತೆ ಕಥೆ ಮಾಡಬೇಕು ಅನ್ನುವ ಒತ್ತಡ.
ಕಾಂತಾರ ಚಿತ್ರವನ್ನ ಮೀರಿಸೋ ಚಿತ್ರ ಮಾಡೋ ಚಾಲೆಂಜ್!
ನಿಜ, ಕಾಂತಾರ ಚಿತ್ರಕ್ಕೆ ಸಾಮಾನ್ಯ ಗೆಲುವು ಸಿಕ್ಕಿಲ್ಲ. ನಿರೀಕ್ಷೆ ಮೀರಿ ಸಿಕ್ಕ ಗೆಲುವನ್ನ ಯಾರು ಬಿಡೋದಿಲ್ಲ. ಅದೇ ರೀತಿ ರಿಷಬ್ ಶೆಟ್ರು ಕಾಂತಾರ ಚಿತ್ರಕ್ಕಿಂತಲೂ ಹೆಚ್ಚಿನದ್ದೇನೋ ಮಾಡಬೇಕಿದೆ. ಅದಕ್ಕಾಗಿಯೇ ಶ್ರಮ ಪಡಲೇಬೇಕಿದೆ.
ಒತ್ತಡದಲ್ಲಿ ಏನು ಹುಟ್ಟುತ್ತದೆಯೋ ಏನೋ. ಆದರೆ ಪ್ರೀಕ್ವೆಲ್ ಇರಲಿ ಸೀಕ್ವೆಲ್ ಇರಲಿ, ಹಿಟ್ ಆಗಿರೋದು ಕಡಿಮೆ. ಹಾಗಂತ ಸೋಲಿದೆ ಅಂತ ಹೇಳೋದು ಸರಿ ಅಲ್ಲ. ಆಪ್ತಮಿತ್ರ ಚಿತ್ರ ಗೆದ್ಮೇಲೆ ಡೈರೆಕ್ಟರ್ ವಾಸು ಆಪ್ತರಕ್ಷಕ ಚಿತ್ರವನ್ನ ಗೆಲ್ಲಿಸಿ ತೋರಿಸಿದ್ರು.
ಕನ್ನಡದ ಕಾಂತಾರ ಪ್ರಿಕ್ವಲ್ಗೆ ಭಾರೀ ಬಜೆಟ್
ಅದೇ ಒತ್ತಡದಲ್ಲಿಯೆ ರಿಷಬ್ ಶೆಟ್ರು ಈಗ ಕೆಲಸ ಮಾಡುತ್ತಿದ್ದಾರೆ. ಕಾಂತಾರ ಚಿತ್ರದ ಪ್ರಿಕ್ವೆಲ್ ಸಿನಿಮಾದ ಬಜೆಟ್ ಹೆಚ್ಚಿದೆ ಅನ್ನುವ ಮಾಹಿತಿನೂ ಹರಿದಾಡುತ್ತಿದೆ. ಕಾಂತಾರ ಚಿತ್ರದಲ್ಲಿದ್ದ ಕಲಾವಿದರೆಲ್ಲ ಪ್ರೀಕ್ವೆಲ್ನಲ್ಲಿ ಇರ್ತಾರೆ ಅಂತಲೂ ಹೇಳೋಕೆ ಅಗೋದಿಲ್ಲ. ಪ್ರೀಕ್ವೆಲ್ನಲ್ಲಿ ಹೊಸ ಕಲಾವಿದರ ಎಂಟ್ರಿ ಆಗೋ ಸಾಧ್ಯತೆ ಇದೆ.
ಕಾಂತಾರ ಪ್ರಿಕ್ವೆಲ್ ಚಿತ್ರೀಕರಣ ಯಾವಾಗ?
ಇನ್ನು ರಿಷಬ್ ಶೆಟ್ರು ತಮ್ಮ ಈ ಸ್ಕ್ರಿಪ್ಟ್ ವರ್ಕ್ನ್ನ ಜೂನ್ ಇಲ್ಲವೇ ಜುಲೈ ಹೊತ್ತಿಗೆ ಪೂರ್ಣಗೊಳಿಸಲಿದ್ದಾರೆ. ಸ್ಕ್ರಿಪ್ಟ್ ವರ್ಕ್ ಪಕ್ಕಾ ಆದ್ಮೇಲೆ ಆಗಸ್ಟ್ ಹೊತ್ತಿಗೆ ಕಾಂತಾರ ಪ್ರಿಕ್ವೆಲ್ ಚಿತ್ರೀಕರಣ ಶುರು ಮಾಡೋ ಸಾಧ್ಯತೆ ಕೂಡ ಇದೆ.
ಆದರೆ ಕಾಂತಾರ ಪ್ರಿಕ್ವೆಲ್ ಸಿನಿಮಾ 2023 ರಲ್ಲಿ ಶೂಟಿಂಗ್ ಮುಗಿಸಿಕೊಳ್ಳುತ್ತದೆ. ಮುಂದಿನ ವರ್ಷ 2024 ಕ್ಕೇನೆ ತೆರೆಗೆ ಬರೋ ಚಾನ್ಸಸ್ ಇದೆ ಅನ್ನೋ ಮಾಹಿತಿ ಕೂಡ ಈಗ ಹರಿದಾಡುತ್ತಿದೆ.
ಇದರ ಬೆನ್ನಲ್ಲಿಯೇ ಒಂದು ಕುತೂಹಲ ಕೂಡ ಇದೆ. ಕಾಂತಾರ ಚಿತ್ರ ಅದ್ಭುತವಾಗಿಯೇ ಇತ್ತು. ಕಾಂತಾರ ಪ್ರಿಕ್ವೆಲ್ ನಲ್ಲಿ ಏನೆಲ್ಲ ಇರುತ್ತದೆ. ಕಾಂತಾರ ಪ್ರಿಕ್ವೆಲ್ನಲ್ಲಿ ರಿಷಬ್ ಹೇಗೆ ಕಾಣಿಸುತ್ತಾರೆ. ಸಪ್ತಮಿ ಗೌಡ ಈ ಚಿತ್ರದಲ್ಲೂ ಇರ್ತಾರಾ? ಈ ಎಲ್ಲ ಪ್ರಶ್ನೆಗಳೂ ಈಗ ಹುಟ್ಟಿಕೊಂಡಿವೆ.
Kantara Prequel movie latest update got viral.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 10:54 am
HK News Desk
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
ಅಮೆರಿಕನ್ ಕಂಪನಿಗಳನ್ನು ಬಹಿಷ್ಕರಿಸಲು ರಾಮದೇವ್ ಕರೆ...
01-09-25 01:06 pm
03-09-25 11:03 pm
Mangalore Correspondent
Kmc Attavar, Mangalore News: 43 ವರ್ಷದ ಮಹಿಳೆಗೆ...
03-09-25 10:52 pm
Sullia, Sampaje Accident: ಸಂಪಾಜೆ ಬಳಿ ಭೀಕರ ಅಪಘ...
03-09-25 08:09 pm
Sowjanya Case, SIT, Uday Jain: 13 ವರ್ಷಗಳ ಬಳಿಕ...
03-09-25 03:45 pm
College student Missing, Mangalore: ಮಂಗಳೂರಿನಲ...
03-09-25 11:53 am
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm