ಬ್ರೇಕಿಂಗ್ ನ್ಯೂಸ್
18-02-23 03:28 pm Source: news18 ಸಿನಿಮಾ
ಧನುಷ್ ಇತ್ತೀಚೆಗೆ ವೆಂಕಿ ಅಟ್ಲೂರಿ ನಿರ್ದೇಶನದ ದ್ವಿಭಾಷಾ ಸಿನಿಮಾ ಮಾಡಿದ್ದಾರೆ. ತಮಿಳಿನಲ್ಲಿ 'ವಾತಿ' ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಗೊಂಡಿದ್ದು, ತೆಲುಗಿನಲ್ಲಿ 'ಸಾರ್' ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿದೆ. ಟ್ರೇಲರ್ ಮತ್ತು ಟೀಸರ್ನಿಂದ ಕ್ರೇಜ್ ಕ್ರಿಯೇಟ್ ಮಾಡಿದ್ದ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಇದೀಗ ಸಿನಿಮಾ ಪ್ರಮೋಷನ್ ಹಿನ್ನೆಲೆ ತೆಲುಗು ರಾಜ್ಯಗಳ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಈ ಸಿನಿಮಾವನ್ನು ಉಚಿತವಾಗಿ ತೋರಿಸಲು ಚಿತ್ರತಂಡ ಮುಂದಾಗಿದೆ. ಈ ಉಚಿತ ಶೋಗಳು ಕೆಲವು ಆಯ್ದ ಪ್ರದೇಶಗಳಲ್ಲಿ ಇರಲಿದೆ.


ಇನ್ನು ಈ ಸಿನಿಮಾದ ಥಿಯೇಟ್ರಿಕಲ್ ಬ್ಯುಸಿನೆಸ್ ವಿಚಾರಕ್ಕೆ ಬಂದರೆ ತೆಲುಗಿನ ಈ ಸಿನಿಮಾ ಮೊದಲ ದಿನವೇ ಎಪಿ ತೆಲಂಗಾಣದಲ್ಲಿ ಒಟ್ಟು 5.5 ಕೋಟಿ ಬ್ಯುಸಿನೆಸ್ ಮಾಡಿದೆ. ಹೀಗಾಗಿ ಈ ಸಿನಿಮಾ ಹಿಟ್ ಆಗಬೇಕಾದರೆ 6 ಕೋಟಿ ಶೇರ್ ಬೇಕು. ತಮಿಳಿನಲ್ಲಿ 35 ಕೋಟಿ ವರೆಗೂ ವ್ಯಾಪಾರ ಮಾಡಿದೆ ಎನ್ನಲಾಗ್ತಿದೆ. ಧನುಷ್ ಸಿನಿಮಾ ಎರಡು ತೆಲುಗು ರಾಜ್ಯಗಳಲ್ಲಿ 415 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ನಮ್ಮ ದೇಶದಲ್ಲಿ ಶಿಕ್ಷಣ ಎನ್ನುವುದು ಲಾಭದಾಯಕವಲ್ಲದ ಸೇವೆ ಎಂಬ ಕಥೆಯನ್ನು ಆಧರಿಸಿದೆ. ಗುಣಮಟ್ಟದ ಶಿಕ್ಷಣ ಬೇಕಾದರೆ ಹಣ ಖರ್ಚು ಮಾಡಬೇಕು. ಹಣ ಇರುವವನು ಡಿಗ್ರಿ ಖರೀದಿಸುತ್ತಾರೆ. ಹಣ ಕಡಿಮೆ ಇರುವವನು ಸಾಲ ಮಾಡಿದರೂ ಸಿಗಲ್ಲ. ದೇಶದಾದ್ಯಂತ ಶಿಕ್ಷಣವನ್ನು ವ್ಯಾಪಾರವಾಗಿ ಪರಿವರ್ತಿಸಿದವರ ವಿರುದ್ಧ ಸಾಮಾನ್ಯ ಸ್ಕೂಟ್ ಟೀಚರ್ ಮತ್ತು ಕೆಲವು ಕಾರ್ಪೊರೇಟ್ಗಳ ನಡುವೆ ನಡೆಯುವ ಹೋರಾಟವಾಗಿದೆ.


ಇದೀಗ ಪ್ರಸ್ತುತ ಶಿಕ್ಷಣ ಶ್ರೀಮಂತರ ಆಸ್ತಿಯಾಗಿದೆ. ಸಾಮಾನ್ಯ ವ್ಯಕ್ತಿ ಇದನ್ನೆಲ್ಲಾ ಹೇಗೆಲ್ಲಾ ಎದುರಿಸುತ್ತಾನೆ ಎನ್ನುವ ಕಥೆಯನ್ನು ವಾತಿ ಸಿನಿಮಾವೊಳಗೊಂಡಿದೆ. ಈ ಸಿನಿಮಾದಲ್ಲಿ ಈಗಿನ ಟ್ರೆಂಡ್ ಝೀರೋ ಫೀ.. ಜೀರೋ ಎಜುಕೇಶನ್.. ಮೋರ್ ಫೀ.. ಹೆಚ್ಚು ಎಜುಕೇಶನ್ ಬಗ್ಗೆ ತೋರಿಸಲಾಗಿದೆ.
ದೇಶದ ಶಿಕ್ಷಣ ವ್ಯವಸ್ಥೆ ಮೇಲೆ ಈ ಸಿನಿಮಾ ಮಾಡಲಾಗಿದೆ. ನಮ್ಮಲ್ಲಿರುವ ಉತ್ತಮ ಉಪನ್ಯಾಸಕರನ್ನು ಸರ್ಕಾರಿ ಕಾಲೇಜಿಗೆ ಕಳುಹಿಸಿ ಎಂದು ‘ವಾತಿ’ ಸಿನಿಮಾದಲ್ಲಿ ತೋರಿಸಲಾಗಿತ್ತು. 1990ರ ದಶಕದಲ್ಲಿ ದೇಶದಲ್ಲಿ ಉದಾರೀಕರಣಗೊಂಡ ಆರ್ಥಿಕ ನೀತಿಗಳಿಂದಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಖಾಸಗಿ ಏಕಸ್ವಾಮ್ಯ ಹೆಚ್ಚಾಯಿತು.
ಕಾರ್ಪೊರೇಟ್ ಶಿಕ್ಷಣ ಸಂಸ್ಥೆಗಳು ಶಾಲೆಗಳನ್ನು ಹೇಗೆ ಆಳುತ್ತಿವೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.. ಈ ಕಾರ್ಪೊರೇಟ್ ಶಿಕ್ಷಣ ಸಂಸ್ಥೆಗಳ ವಿರುದ್ಧ ತಿರುಗಿ ಬಿದ್ದ ಒಬ್ಬ ಸಾಮಾನ್ಯ ಶಿಕ್ಷಕನ ಅನುಭವಗಳೇ ಈ ಸಿನಿಮಾದ ಕಥೆ. ಅದರಲ್ಲೂ ವಿದ್ಯೆ ಎಂಬುದು ದೇವರ ಗುಡಿಯಲ್ಲಿ ನೈವೇದ್ಯವಿದ್ದಂತೆ, ಆದ್ರೆ ಅದನ್ನು ಈಗ ಪಂಚತಾರಾ ಹೋಟೆಲಿನಲ್ಲಿರುವ ತಿನಿಸಿನಂತೆ ಮಾರುತ್ತಿದ್ದೇನೆ ಎಂದು ಧನುಷ್ ಹೇಳುವ ಡೈಲಾಗ್ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ.


ತೆಲುಗಿನಲ್ಲಿ ಧನುಷ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ತಿಲಕ್ ಎಂಬ ಉಪನ್ಯಾಸಕನ ಪಾತ್ರವನ್ನು ಧನುಷ್ ಬಾಲಗಂಗಾಧರ್ ಮಾಡಿದ್ದಾರೆ. ಒಟ್ಟಿನಲ್ಲಿ ಸಮಾಜದಲ್ಲಿ ಶಿಕ್ಷಣದ ಹೆಸರಿನಲ್ಲಿ ನಡೆಯುತ್ತಿರುವ ದರೋಡೆ ಬಗ್ಗೆ ಸಿನಿಮಾದಲ್ಲಿ ತೋರಿಸಿಕೊಟ್ಟಿದ್ದಾರೆ.
Dhanush Vaathi movie to be Screened freely to Government school teachers and students for Telugu states here are the Details.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
02-09-26 08:31 pm
HK News Staffer
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
ನೇಪಾಳ ದುರಂತ ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇ...
31-08-26 01:28 pm
02-09-26 10:51 pm
HK News Desk
UT Khader, Mangalore: ಸಚಿವರ ಹೆಸರಲ್ಲಿ ಕಮಿಷನ್...
02-09-26 10:30 pm
ಗಂಗೊಳ್ಳಿಯಲ್ಲಿ ಮತ್ತೆ ದೋಣಿ ಅವಘಡ ; 6 ಮೀನುಗಾರರ ರಕ...
02-09-26 08:44 pm
ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರ...
02-09-26 08:29 pm
ಆರೋಗ್ಯದ ವಿಚಾರದಲ್ಲಿ ರಾಜಿ ಇಲ್ಲ ; ಆಹಾರ ಸುರಕ್ಷತೆ...
02-09-26 07:09 pm
02-09-26 07:18 pm
HK News Staffer
ಓವರ್ಟೇಕ್ ವಿಚಾರದಲ್ಲಿ ಕಿರಿಕ್; ಕಾಲೇಜು ವಿದ್ಯಾರ್...
02-09-26 07:12 pm
ಕೇರಳಂ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನದ ಆಮಿಷ ; ತೆ...
02-09-26 10:37 am
ಸಿಬಿಐ ಅಧಿಕಾರಿ ಸೋಗಿನಲ್ಲಿ ದೇಶಾದ್ಯಂತ ವಂಚನಾ ಜಾಲ ;...
01-09-26 07:30 pm
ಧಾರವಾಡ ; ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡ...
01-09-26 02:58 pm