ಬ್ರೇಕಿಂಗ್ ನ್ಯೂಸ್
27-01-23 12:54 pm Source: Vijayakarnataka ಸಿನಿಮಾ
'ಸಿಂಹಪ್ರಿಯ' ಹರಿಪ್ರಿಯಾ ( Hariprriya ), ವಸಿಷ್ಠ ಸಿಂಹ ಅವರು ( Vasishta Simha ) ಇಂದು ( ಜನವರಿ 26 ) ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಗೆ ಸ್ಯಾಂಡಲ್‌ವುಡ್ ಕಲಾವಿದರು ಆಗಮಿಸಿ, ಶುಭ ಹಾರೈಸಿದ್ದಾರೆ.
ಶಿವಣ್ಣ, ಡಾಲಿ, ಅಮೃತಾ ಅಯ್ಯಂಗಾರ್ ಭಾಗಿ
ಶಿವರಾಜ್‌ಕುಮಾರ್, ಡಾಲಿ ಧನಂಜಯ, ಅಮೃತಾ ಅಯ್ಯಂಗಾರ್, ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಈ ಮದುವೆಗೆ ಬಂದು ನವಜೋಡಿಗೆ ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲದೆ ಅಮೃತಾ ಅಯ್ಯಂಗಾರ್, ಡಾಲಿ ಧನಂಜಯ್ ಅವರು ಒಂದೇ ಕಾರ್‌ನಲ್ಲಿ ಈ ಮದುವೆಗೆ ಆಗಮಿಸಿ, "ಚಿತ್ರರಂಗದಲ್ಲಿ ಇರುವವರು ಹೀಗೆ ಮದುವೆ ಆದ್ರೆ ಖುಷಿ ಆಗತ್ತೆ" ಎಂದಿದ್ದಾರೆ. ಡಾ ಶಿವರಾಜ್‌ಕುಮಾರ್ ಅವರು 'ವಸಿಷ್ಠ ಸಿಂಹ ನನಗೆ ಆತ್ಮೀಯ. ಇಬ್ಬರ ಜೀವನ ಒಳ್ಳೆಯದಾಗಲಿ' ಎಂದು ಹೇಳಿದ್ದಾರೆ.

ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಆರತಕ್ಷತೆ ಕಾರ್ಯಕ್ರಮವು ಜನವರಿ 28 ರಂದು ಸಂಜೆ 7 ಗಂಟೆಯಿಂದ ತುಮಕೂರು ರಸ್ತೆಯ ಗೋಲ್ಡನ್ ಪಾಮ್ಸ್ & ರೆಸಾರ್ಟ್‌ನಲ್ಲಿ ನಡೆಯಲಿದೆ. ಈಗಾಗಲೇ ಈ ಜೋಡಿ ಕ್ರೇಜಿ ಸ್ಟಾರ್ ರವಿಚಂದ್ರನ್, 'ಗೋಲ್ಡನ್ ಸ್ಟಾರ್' ಗಣೇಶ್, ಕಿಚ್ಚ ಸುದೀಪ್, 'ರಿಯಲ್ ಸ್ಟಾರ್' ಉಪೇಂದ್ರ, ಡಾಲಿ ಧನಂಜಯ್, ಡಾ ಶಿವರಾಜ್‌ಕುಮಾರ್, ಧ್ರುವ ಸರ್ಜಾ, ನೆನಪಿರಲಿ ಪ್ರೇಮ್, ಜಗ್ಗೇಶ್, ಅನಂತ್ ನಾಗ್, ರಿಷಬ್ ಶೆಟ್ಟಿ, ಮಾಲಾಶ್ರೀ, ಗುರುಕಿರಣ್, ಶ್ರುತಿ, ಸೃಜನ್ ಲೋಕೇಶ್, ಅಮೃತಾ ಅಯ್ಯಂಗಾರ್ ಸೇರಿದಂತೆ ಸಾಕಷ್ಟು ಸ್ಯಾಂಡಲ್‌ವುಡ್ ಕಲಾವಿದರಿಗೆ ಹರಿಪ್ರಿಯಾ ಹಾಗೂ ವಸಿಷ್ಠ ಅವರು ಆಹ್ವಾನ ನೀಡಿದ್ದಾರೆ. ಇವರೆಲ್ಲರೂ ಆರತಕ್ಷತೆ ಕಾರ್ಯಕ್ರಮಕ್ಕೆ ಹಾಜರಾಗುವ ಸಾಧ್ಯತೆಯಿದೆ.

ನಿಶ್ಚಿತಾರ್ಥದ ನಂತರ ಅಧಿಕೃತ ಹೇಳಿಕೆ
ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯವಾಗಿರುವ ವಸಿಷ್ಠ ಸಿಂಹ ಹಾಗೂ ಹರಿಪ್ರಿಯ ಅವರು ಸಾಕಷ್ಟು ವರ್ಷಗಳಿಂದ ಪರಿಚಿತರು. ಆದರೆ ಕಳೆದ ಒಂದು ವರ್ಷದಿಂದ ಇವರಿಬ್ಬರು ಪ್ರೀತಿ ಮಾಡುತ್ತಿದ್ದರು. ಇತ್ತೀಚೆಗೆ ಈ ಜೋಡಿ ದುಬೈನಲ್ಲಿ ಓಡಾಡುತ್ತಿದ್ದ ಫೋಟೋ ವೈರಲ್ ಆಗಿತ್ತು. ಆ ನಂತರದಲ್ಲಿ ಅವರಿಬ್ಬರು ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ನಂತರದಲ್ಲಿ ಈ ವಿಷಯವನ್ನು ಅಧಿಕೃತಪಡಿಸಿದ್ದರು. ಸುದ್ದಿಗೋಷ್ಠಿ ಕರೆದು ಇವರಿಬ್ಬರು ಪ್ರೀತಿಯ ಬಗ್ಗೆ ಹಂಚಿಕೊಂಡಿದ್ದರು. 'ನಮ್ಮ ಸಿಂಹಿಣಿಯನ್ನು ಚೆನ್ನಾಗಿ ನೋಡ್ಕೋಬೇಕು, ಅದೇ ನನ್ನ ದೊಡ್ಡ ಜವಾಬ್ದಾರಿ...'- ನಟ ವಸಿಷ್ಠ ಸಿಂಹ
Actor Vasishta Simha Haripriya Got Married At Mysuru.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
02-09-26 08:31 pm
HK News Staffer
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
ನೇಪಾಳ ದುರಂತ ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇ...
31-08-26 01:28 pm
02-09-26 10:51 pm
HK News Desk
UT Khader, Mangalore: ಸಚಿವರ ಹೆಸರಲ್ಲಿ ಕಮಿಷನ್...
02-09-26 10:30 pm
ಗಂಗೊಳ್ಳಿಯಲ್ಲಿ ಮತ್ತೆ ದೋಣಿ ಅವಘಡ ; 6 ಮೀನುಗಾರರ ರಕ...
02-09-26 08:44 pm
ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರ...
02-09-26 08:29 pm
ಆರೋಗ್ಯದ ವಿಚಾರದಲ್ಲಿ ರಾಜಿ ಇಲ್ಲ ; ಆಹಾರ ಸುರಕ್ಷತೆ...
02-09-26 07:09 pm
02-09-26 07:18 pm
HK News Staffer
ಓವರ್ಟೇಕ್ ವಿಚಾರದಲ್ಲಿ ಕಿರಿಕ್; ಕಾಲೇಜು ವಿದ್ಯಾರ್...
02-09-26 07:12 pm
ಕೇರಳಂ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನದ ಆಮಿಷ ; ತೆ...
02-09-26 10:37 am
ಸಿಬಿಐ ಅಧಿಕಾರಿ ಸೋಗಿನಲ್ಲಿ ದೇಶಾದ್ಯಂತ ವಂಚನಾ ಜಾಲ ;...
01-09-26 07:30 pm
ಧಾರವಾಡ ; ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡ...
01-09-26 02:58 pm