ಬ್ರೇಕಿಂಗ್ ನ್ಯೂಸ್
24-01-23 01:28 pm Source: news18 ಸಿನಿಮಾ
ರಿಯಲ್ ಸ್ಟಾರ್ ಸಿನಿಮಾ ಪವರ್ ಸ್ಟಾರ್ ಜನ್ಮ ದಿನದಂದು ರಿಲೀಸ್ ಆಗುತ್ತಿದೆ. ನಿಜಕ್ಕೂ ಈ ಒಂದು ಮಾತು ಸ್ಪೆಷಲ್ ಆಗಿದೆ ನೋಡಿ. ಈ ರೀತಿ ನಿರ್ಧಾರವನ್ನ ಎಲ್ಲರೂ ತೆಗೆದುಕೊಳ್ಳುವುದಿಲ್ಲ. ಆದರೆ ಕಬ್ಜ ಚಿತ್ರದ ನಿರ್ದೇಶಕರು ಈ ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ.
ನಿರ್ಮಾಪಕ-ನಿರ್ದೇಶಕ ಆರ್. ಚಂದ್ರು ಅವರ ಈ ಒಂದು ನಿರ್ಧಾರಕ್ಕೆ ಎಲ್ಲ ಭಾಷೆಯ ವಿತರಕರೂ ಸಾಥ್ ಕೊಟ್ಟಿದ್ದಾರೆ. ದೊಡ್ಡ ಬಜೆಟ್ನ ಸಿನಿಮಾ ಆಗಿರೋದರಿಂದ ಎಲ್ಲರ ಸಪೋರ್ಟ್ ಕೂಡ ಬೇಕಾಗುತ್ತದೆ. ಅದಕ್ಕೆ ನಿರ್ಮಾಪಕ ಆರ್.ಚಂದ್ರು ಅವರಿಗೆ ಎಲ್ಲರೂ ಈಗ ಸಾಥ್ ಕೊಟ್ಟಿದ್ದಾರೆ.


ಅಪ್ಪು ಜನ್ಮ ದಿನಕ್ಕೆ ಉಪ್ಪಿ ಸಿನಿಮಾ ರಿಲೀಸ್ ಯಾಕೆ ?
ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾಗಳು ಅಂದ್ರೆ ಎಲ್ಲರಿಗೂ ಇಷ್ಟ ಆಗುತ್ತವೆ. ಅದೇ ರೀತಿ ಉಪ್ಪಿಯ ಕಬ್ಜ ಚಿತ್ರದ ಎಲ್ಲ ಹಂತಗಳನ್ನೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನೋಡಿಕೊಂಡು ಬಂದಿದ್ದರು. ಸಿನಿಮಾದ ಪ್ರತಿ ವಿಷಯವನ್ನು ಆರ್.ಚಂದ್ರು ಅವರಿಂದ ತಿಳಿದುಕೊಂಡಿದ್ದರು.
ತೆರೆ ಹಿಂದಿನ ಈ ವಿಷಯವನ್ನ ಡೈರೆಕ್ಟರ್ ಆರ್.ಚಂದ್ರು ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದಾರೆ. ನಮ್ಮ ಚಿತ್ರದ ಪ್ರತಿ ಹಂತವನ್ನೂ ಅಪ್ಪು ಸರ್ ಗಮನಿಸಿದ್ದಾರೆ. ದೊಡ್ಡ ಸಿನಿಮಾ ಮಾಡುತ್ತಿದ್ದೀರಾ, ಬಜೆಟ್ ಕೂಡ ದೊಡ್ಡದೇ ಇದೆ. ಚಿತ್ರವನ್ನ ನೋಡಿಕೊಂಡು ಮಾಡಿ, ಹುಷಾರಾಗಿ ಮಾಡಿ ಅಂತಲೂ ಆರ್.ಚಂದ್ರು ಅವರಿಗೆ ಅಪ್ಪು ಹೇಳಿದ್ದರು.

ಚಿತ್ರದ ಮೋಷನ್ ಪೋಸ್ಟರ್, ಪೋಸ್ಟರ್ ಹೀಗೆ ಚಿತ್ರದ ಪ್ರತಿ ವಿಷಯವನ್ನ ಪುನೀತ್ ಗಮನಿಸಿದ್ದಾರೆ. ಅದನ್ನ ಅಷ್ಟೇ ಖುಷಿಯಿಂದಲೂ ಮೆಚ್ಚಿಕೊಂಡು ಆರ್.ಚಂದ್ರು ಅವರಿಗೆ ಹೇಳಿದ್ದಾರೆ. ಅದೇ ಒಂದು ಪ್ರೀತಿಯಿಂದಲೇ ಅಪ್ಪು ಅವರ ಮೇಲಿನ ಗೌರವದಿಂದಲೇ ಆರ್ ಚಂದ್ರು ತಮ್ಮ ಕಬ್ಜ ಚಿತ್ರವನ್ನ ಪುನೀತ್ ಜನ್ಮ ದಿನಕ್ಕೆ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ.


ಮಾರ್ಚ್-17 ರಂದು ಕಬ್ಜ ಸಿನಿಮಾ ರಿಲೀಸ್
ರಿಯಲ್ ಸ್ಟಾರ್ ಉಪೇಂದ್ರ ಅವರ ಕಬ್ಜ ಚಿತ್ರ ಮಾರ್ಚ್-17 ರಂದು ರಿಲೀಸ್ ಆಗುತ್ತಿದೆ. ಅಪ್ಪು ಜನ್ಮ ದಿನಕ್ಕೆ ಈ ಒಂದು ಚಿತ್ರ ರಿಲೀಸ್ ಮಾಡುತ್ತಿದ್ದೇವೆ. ಅಪ್ಪು ಅವರಿಗೆ ಈ ಮೂಲಕ ಗೌರವ ಸಲ್ಲಿಸುತ್ತಿದ್ದೇವೆ ಎಂದು ಚಿತ್ರದ ನಿರ್ದೇಶಕ-ನಿರ್ಮಾಪಕ ಆರ್.ಚಂದ್ರು ಹೇಳಿದ್ದಾರೆ.
ರಿಯಲ್ ಸ್ಟಾರ್ ಉಪ್ಪಿ ಅವರ ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಕನ್ನಡದ ಕಾಂತಾರ ಚಿತ್ರ ಆದ್ಮೇಲೆ ಸದ್ಯಕ್ಕೆ ಯಾವುದೇ ದೊಡ್ಡ ಚಿತ್ರ ಪ್ಯಾನ್ ಇಂಡಿಯಾ ಲೆವಲ್ಗೆ ರಿಲೀಸ್ ಆಗುತ್ತಿಲ್ಲ ಅಂತಲೇ ಹೇಳಬಹುದು.

ಕಬ್ಜ ರಿಲೀಸ್ ಬಗ್ಗೆ ಆರ್.ಚಂದ್ರು ಏನ್ ಹೇಳ್ತಾರೆ?
ರಿಯಲ್ ಸ್ಟಾರ್ ಉಪೇಂದ್ರ ಅವರ ಕಬ್ಜ ಚಿತ್ರ ಮಾರ್ಚ್-17 ರಂದು ರಿಲೀಸ್ ಆಗುತ್ತಿದೆ. ಅಪ್ಪು ಜನ್ಮ ದಿನಕ್ಕೆ ಈ ಒಂದು ಚಿತ್ರ ರಿಲೀಸ್ ಮಾಡುತ್ತಿದ್ದೇವೆ. ಅಪ್ಪು ಅವರಿಗೆ ಈ ಮೂಲಕ ಗೌರವ ಸಲ್ಲಿಸುತ್ತಿದ್ದೇವೆ. ಅವರು ಕನ್ನಡ ಚಿತ್ರರಂಗದ ದೇವರೇ ಆಗಿದ್ದಾರೆ ಎಂದು ಚಂದ್ರು ಹೇಳ್ತಾರೆ.
ಅಪ್ಪು ಅವರ ಜನ್ಮ ದಿನದಂದು ರಿಲೀಸ್ ಮಾಡೋ ನಿರ್ಧಾರ ತೆಗೆದುಕೊಂಡಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಎಲ್ಲ ಕೆಲಸಗಳು ನಡೆಯುತ್ತಿವೆ. ಯಾವುದು ಬಾಕಿ ಉಳಿದಿಲ್ಲ. ಇತರ ಕೆಲಸಗಳು ವೇಗದಲ್ಲಿಯೇ ಆಗುತ್ತಿವೆ ಅಂತಲೂ ಆರ್ ಚಂದ್ರು ಹೇಳುತ್ತಾರೆ.
ಕಬ್ಜ ಚಿತ್ರ ಈಗಾಗಲೇ ತನ್ನ ಮೇಕಿಂಗ್ನಿಂದಲೇ ಹೆಚ್ಚು ಗಮನ ಸೆಳೆದಿದೆ. ಚಿತ್ರದ ಪೋಸ್ಟರ್ ಮತ್ತು ಟೀಸರ್ ಅತಿ ಹೆಚ್ಚು ನಿರೀಕ್ಷೆ ಮೂಡಿಸಿದೆ. ಕೆಜಿಎಫ್ ರೀತಿನೆ ಈ ಚಿತ್ರವೂ ಇದೆ ಅಂತಲೇ ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನುಳಿದಂತೆ ಕಬ್ಜ ಕೂಡ ಕನ್ನಡದ ಮತ್ತೊಂದು ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ. ಬಾಲಿವುಡ್ನಲ್ಲಿ ಈಗಾಗಲೇ ಕಬ್ಜ ಸದ್ದು ಮಾಡುತ್ತಲೇ ಇದೆ.
Kabzaa movie going to release on Puneeth Birthday rvj.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
02-09-26 08:31 pm
HK News Staffer
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
ನೇಪಾಳ ದುರಂತ ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇ...
31-08-26 01:28 pm
02-09-26 10:51 pm
HK News Desk
UT Khader, Mangalore: ಸಚಿವರ ಹೆಸರಲ್ಲಿ ಕಮಿಷನ್...
02-09-26 10:30 pm
ಗಂಗೊಳ್ಳಿಯಲ್ಲಿ ಮತ್ತೆ ದೋಣಿ ಅವಘಡ ; 6 ಮೀನುಗಾರರ ರಕ...
02-09-26 08:44 pm
ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರ...
02-09-26 08:29 pm
ಆರೋಗ್ಯದ ವಿಚಾರದಲ್ಲಿ ರಾಜಿ ಇಲ್ಲ ; ಆಹಾರ ಸುರಕ್ಷತೆ...
02-09-26 07:09 pm
02-09-26 07:18 pm
HK News Staffer
ಓವರ್ಟೇಕ್ ವಿಚಾರದಲ್ಲಿ ಕಿರಿಕ್; ಕಾಲೇಜು ವಿದ್ಯಾರ್...
02-09-26 07:12 pm
ಕೇರಳಂ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನದ ಆಮಿಷ ; ತೆ...
02-09-26 10:37 am
ಸಿಬಿಐ ಅಧಿಕಾರಿ ಸೋಗಿನಲ್ಲಿ ದೇಶಾದ್ಯಂತ ವಂಚನಾ ಜಾಲ ;...
01-09-26 07:30 pm
ಧಾರವಾಡ ; ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡ...
01-09-26 02:58 pm