ಬ್ರೇಕಿಂಗ್ ನ್ಯೂಸ್
13-01-23 05:03 pm Source: news18 ಸಿನಿಮಾ
ಕನ್ನಡದ ಕಾಂತಾರ ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡಿದ ಮೇಲೆ ಕಾಂತಾರ ನಟ-ನಟಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕಾಂತಾರ ನಟಿ ಸಪ್ತಮಿ ಗೌಡ ಇದೀಗ ಬಾಲಿವುಡ್ಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ.
ಕಾಂತಾರ್ ಹಿಟ್ ಬಳಿಕ ನಟಿ ಸಪ್ತಮಿ ಗೌಡ ಸಹ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ. ಸಾಲು ಸಾಲು ಸಿನಿಮಾಗಳೂ ಕೂಡ ಸಪ್ತಮಿ ಗೌಡ ಅವರನ್ನು ಕೈ ಬೀಸಿ ಕರೆಯುತ್ತಿದೆ. ಕಾಂತಾರ ಕಂಪು ಬಾಲಿವುಡ್ನಲ್ಲಿ ಹರಡಿದ್ದು, ಸಪ್ತಮಿ ಗೌಡಗೆ ಸಖತ್ ಚಾನ್ಸ್ ಸಿಕ್ಕಿದೆ. ಬಾಲಿವುಡ್ಗೆ ಹಾರಲು ಕಾಂತಾರ ಲೀಲಾ ರೆಡಿಯಾಗಿದ್ದಾರೆ. ಸ್ಟಾರ್ ನಿರ್ದೇಶಕರ ಜೊತೆ ಕೆಲಸ ಮಾಡುವ ಅವಕಾಶ ಸಪ್ತಮಿ ಗೌಡಗೆ ಒಲಿದು ಬಂದಿದೆ.
![]()
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶನ ಮಾಡಿದ್ದ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರ ಹೊಸ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸಲಿದ್ದಾರೆ. ಈ ಮೂಲಕ ಬಾಲಿವುಡ್ಗೆ ನಟಿ ಸಪ್ತಮಿ ಎಂಟ್ರಿ ಕೊಡ್ತಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರ ಹೊಸ ಸಿನಿಮಾ ‘ದಿ ವ್ಯಾಕ್ಸಿನ್ ವಾರ್’ (The Vaccine War) ಸಿನಿಮಾದಲ್ಲಿ ನಟಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ದಿ ವ್ಯಾಕ್ಸಿನ್ ವಾರ್ ಸಿನಿಮಾ ಶೂಟಿಂಗ್ ಸಹ ಶುರುವಾಗಿದ್ದು, ಹೈದರಾಬಾದ್ ನಲ್ಲಿ ನಡೆಯಲಿರುವ ಚಿತ್ರೀಕರಣದಲ್ಲಿ ಸಪ್ತಮಿ ಗೌಡ ಭಾಗಿ ಆಗಲಿದ್ದಾರಂತೆ
![]()
ವಿವೇಕ್ ಅಗ್ನಿಹೋತ್ರಿ ಅವರ ಕೊರೊನಾ ವಾಕ್ಸಿನ್ ಸಿನಿಮಾದಲ್ಲಿ ನಾನಾ ಪಾಟೇಕರ್, ಅನುಪಮ್ ಖೇರ್, ಪಲ್ಲವಿ ಜೋಶಿ ಮುಂತಾದವರು ಅಭಿನಯಿಸುತ್ತಿದ್ದಾರೆ. ಆ ಎಲ್ಲ ಕಲಾವಿದರ ಜೊತೆ ನಟಿಸುವ ಚಾನ್ಸ್ ಸಪ್ತಮಿ ಗೌಡಗೆ ಸಿಕ್ಕಿದೆ.
ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ನಟಿ ಸಪ್ತಮಿ ಗೌಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ನಟ ಡಾಲಿ ಧನಂಜಯ್ ಜೊತೆ ತೆರೆ ಹಂಚಿಕೊಂಡಿದ್ದರು. 2ನೇ ಸಿನಿಮಾ ಕಾಂತಾರ ದಲ್ಲಿ ನಟ ರಿಷಬ್ ಶೆಟ್ಟಿಗೆ ಜೋಡಿಯಾಗಿ ನಟಿಸಿದ ಬಳಿಕ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅಭಿಷೇಕ್ ಅಂಬರೀಷ್ ಸಿನಿಮಾ ‘ಕಾಳಿ’ ಚಿತ್ರದಲ್ಲಿ ಸಪ್ತಮಿ ಗೌಡ ಅಭಿನಯಿಸುತ್ತಿದ್ದು, ಇದೀಗ ಸಪ್ತಮಿ ಗೌಡ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ.
Sandalwood actress Sapthami Gowda selected for bollywood movie.
11-12-25 10:57 pm
Bangalore Correspondent
Kalaburgi Accident, Three Killed: ರಾಜ್ಯದಲ್ಲಿ...
11-12-25 10:47 pm
ಗಾಂಜಾಕ್ಕಾಗಿ ಕಾರವಾರ ಜೈಲಿನಲ್ಲಿ ಕೈದಿಗಳ ಗಲಾಟೆ ; ಜ...
11-12-25 08:03 pm
Padubidri, Accident: ಪಡುಬಿದ್ರಿಯಲ್ಲಿ ಮತ್ತೊಂದು...
11-12-25 03:29 pm
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪರೀಕ್ಷೆ ಬರೆದ ವಿದ್ಯಾರ...
11-12-25 12:44 pm
11-12-25 04:24 pm
HK News Desk
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
ಭಾರತೀಯರಿಗೆ ಸಂತಸದ ಸುದ್ದಿ ; ಯುನೆಸ್ಕೋ ಪಟ್ಟಿಗೆ ದೀ...
10-12-25 01:17 pm
11-12-25 10:55 pm
Mangalore Correspondent
ದೈವದ ಚಾಕರಿ ಮಾಡುವವರಿಗೆ ಮಾಸಾಶನ, ಸರ್ಕಾರಿ ಸವಲತ್ತು...
11-12-25 04:21 pm
ದ್ವೇಷ ಭಾಷಣ ಪ್ರಕರಣ ; ಕಡೆಗೂ ಆರೆಸ್ಸೆಸ್ ಮುಖಂಡ ಪ್ರ...
10-12-25 11:04 pm
ಮಂಗಳೂರಿನಲ್ಲಿ ಆರು ತಿಂಗಳಿನಿಂದ ಡ್ರಗ್ಸ್ ಬೇಟೆ ; ಕಾ...
10-12-25 10:51 pm
Bharath Kumdel, Instagram, Target Group: ಭರತ್...
10-12-25 08:45 pm
11-12-25 09:53 pm
HK News Desk
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am