ಬ್ರೇಕಿಂಗ್ ನ್ಯೂಸ್
26-12-22 12:03 pm Source: Vijayakarnataka ಸಿನಿಮಾ
ಧಾರಾವಾಹಿ ಶೂಟಿಂಗ್ ವೇಳೆ ಮೇಕಪ್ ವ್ಯಾನ್‌ನಲ್ಲಿ ಆತ್ಮಹತ್ಯೆಗೆ ಶರಣಾದ ಕಿರುತೆರೆಯ ಜನಪ್ರಿಯ ನಟಿ ತುನಿಶಾ ಶರ್ಮಾ (20) ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಸದ್ಯ ತುನಿಶಾ ಶರ್ಮಾ (Tunisha Sharma ) ಅವರ ಸಹ ನಟ ಹಾಗೂ ಮಾಜಿ ಪ್ರೇಮಿ ಎನ್ನಲಾಗಿರುವ ಶೀಜಾನ್ ಮೊಹಮ್ಮದ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ, ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ರಾಮ್ ಕದಮ್ (BJP MLA Ram Kadam), ‘ಲವ್ ಜಿಹಾದ್ (Love Jihad) ಸಂಚು ಕಾರಣ ಇರಬಹುದು..' ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ತುನಿಶಾ ಕುಟುಂಬಕ್ಕೆ ನ್ಯಾಯ ಸಿಗಬೇಕು
ಈ ಬಗ್ಗೆ ಭಾನುವಾರ (ಡಿ.25) ಪ್ರತಿಕ್ರಿಯೆ ನೀಡರುವ ಬಿಜೆಪಿ ಶಾಸಕ ರಾಮ್ ಕದಮ್, 'ಆತ್ಮಹತ್ಯೆ ನಡೆದಿದೆ ಸರಿ, ಆದರೆ ಕಾರಣ ಏನು? ಲವ್ ಜಿಹಾದ್ ಇರಬಹುದೇ? ಎಲ್ಲಆಯಾಮದಲ್ಲಿ ತನಿಖೆ ನಡೆದು ತುನಿಶಾ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸುವೆ. ಲವ್ ಜಿಹಾದ್ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕರೆ , ಸಂಚಿನ ಹಿಂದಿರುವ ಸಂಘಟನೆ ಬಗ್ಗೆಯೂ ಶೀಘ್ರವೇ ಮಾಹಿತಿ ಬಯಲಾಗಲಿದೆ..' ಎಂದಿದ್ದಾರೆ.
ತುನಿಶಾ ತೀವ್ರ ಮಾನಸಿಕ ಒತ್ತಡದಲ್ಲಿದ್ದರು
ತುನಿಶಾ ಅವರ ಸಹ ನಟ ಹಾಗೂ ಮಾಜಿ ಪ್ರೇಮಿ ಎನ್ನಲಾಗಿರುವ ಶೀಜಾನ್ ಮೊಹಮ್ಮದ್ ಖಾನ್‌ನನ್ನು ಕೇಸ್ ಸಂಬಂಧ ಬಂಧಿಸಿರುವ ಮುಂಬಯಿ ಪೊಲೀಸರು ವಸಾಯ್ ಕೋರ್ಟ್‌ಗೆ ಹಾಜರುಪಡಿಸಿ ನಾಲ್ಕು ದಿನಗಳವರೆಗೆ ವಶಕ್ಕೆ ಪಡೆದುಕೊಂಡಿದ್ದಾರೆ. ಸಾವಿಗೂ 15 ದಿನಗಳ ಮುನ್ನ ತುನಿಶಾ- ಶೀಜಾನ್ ನಡುವೆ ಜಗಳವಾಗಿತ್ತು. ಪ್ರೇಮ ಸಂಬಂಧವನ್ನು ಮುರಿದುಕೊಳ್ಳಲು ನಿರ್ಧರಿಸಲಾಗಿತ್ತು. ಇದರಿಂದ ತುನಿಶಾ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ದಾಖಲಿಸಿದ್ದಾರೆ.
ತುನಿಶಾ ಶರ್ಮಾ ಗರ್ಭಿಣಿ ಆಗಿರಲಿಲ್ಲ
ಮುಂಬಯಿನ ಜೆಜೆ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯಾಹ್ನ ವೇಳೆಗೆ ತುನಿಶಾ ಶರ್ಮಾ ಅವರ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ಪೊಲೀಸರಿಗೆ ನೀಡಲಾಗಿರುವ ವರದಿಯಲ್ಲಿ ಆಕೆಯು ಗರ್ಭಿಣಿ ಆಗಿರಲಿಲ್ಲ ಎಂದು ಉಲ್ಲೇಖಿಸಲಾಗಿದೆ. ಕತ್ತಿಗೆ ಬಿಗಿಯಾದ ದಾರ ಅಥವಾ ಬಟ್ಟೆಯ ಬಿಗಿತದಿಂದ ಉಸಿರುಗಟ್ಟಿ ಸತ್ತಿದ್ದಾರೆ ಎಂದು ವರದಿ ಹೇಳಿದೆ. ಡಿ.26ರ ಸಂಜೆ ತುನಿಶಾ ಕುಟುಂಬಸ್ಥರು ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಿದ್ದಾರೆ.
ಅಂದಹಾಗೆ, 20 ವರ್ಷದ ತುನಿಶಾ ಶರ್ಮಾ ಹಲವು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರು. ಐತಿಹಾಸಿಕ ಧಾರಾವಾಹಿ 'ಭಾರತ್ ಕಾ ವೀರ್ ಪುತ್ರ-ಮಹಾರಾಣಾ ಪ್ರತಾಪ' ಮೂಲಕ ನಟನೆ ಆರಂಭಿಸಿದ್ದ ಅವರು, 'ಚಕ್ರವರ್ತಿ ಅಶೋಕ್ ಸಾಮ್ರಾಟ್', 'ಗಬ್ಬರ್ ಪೂಂಚವಾಲಾ', 'ಶೀರ್ ಇ ಪಂಜಾಬ್; ಮಹಾರಾಜ ರಂಜಿತ್ ಸಿಂಗ್', 'ಇಂಟರ್‌ನೆಟ್ ವಾಲಾ ಲವ್', 'ಇಶ್ಕ್ ಸುಬಾನ್ ಅಲ್ಲಾ' ಮುಂತಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ 'ಫಿತೂರ್', 'ಬಾರ್ ಬಾರ್ ದೆಖೋ', 'ಕಹಾನಿ 2; ದುರ್ಗ ರಾಣಿ ಸಿಂಗ್', 'ದಬಂಗ್ 3' ಸಿನಿಮಾಗಳಲ್ಲೂ ತುನಿಶಾ ಬಣ್ಣ ಹಚ್ಚಿದ್ದರು.
Tunisha Sharma Bjp Mla Ram Kadam Claims Love Jihad Angle In Actress Death.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am