ಬ್ರೇಕಿಂಗ್ ನ್ಯೂಸ್
24-12-22 02:10 pm Source: Vijayakarnataka ಸಿನಿಮಾ
ವರ್ಷದ ಕೊನೆಯ ಹಬ್ಬ ಕ್ರಿಸ್‌ಮಸ್‌ಗೆ ತಾರಾ ಲೋಕ ಸಜ್ಜಾಗಿದೆ. ಈ ತಿಂಗಳಿನ ಆರಂಭದಿಂದಲೇ ಈ ಹಬ್ಬದ ವಿವಿಧ ತಯಾರಿಯಲ್ಲಿ ನಿರತರಾಗಿರುವ ಕೆಲವು ನಟ, ನಟಿಯರು ತಮ್ಮದೇ ರೀತಿಯಲ್ಲಿ ಹಬ್ಬ ಆಚರಿಸಲು ನಿರ್ಧರಿಸಿದ್ದಾರೆ. ಕೆಲವರು ತಮ್ಮ ಕ್ರಿಸ್‌ಮಸ್ ಸಿದ್ಧತೆಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರೆ, ಇನ್ನು ಕೆಲವರು ತಮ್ಮ ಕ್ರಿಸ್‌ಮಸ್ ಲುಕ್ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಕ್ರಿಸ್‌ಮಸ್ ವೆಕೇಶನ್‌ಗೆ ಹೋಗಲು ನಿರ್ಧರಿಸಿದ್ದು, ಇನ್ನು ಕೆಲವರು ಹಬ್ಬದ ಮೊದಲೇ ಫ್ಯಾಮಿಲಿ ಗೆಟ್‌ಟುಗೇದರ್ ಮತ್ತು ಡಿನ್ನರ್‌ಗಳನ್ನು ಆಯೋಜಿಸಿದ್ದಾರೆ. ವಿವಿಧ ತಾರೆಯರ ಕ್ರಿಸ್‌ಮಸ್ ತಯಾರಿಯ ಝಲಕ್ ಹೀಗಿದೆ.


ಫೆಸ್ಟಿವಲ್ ವೆಕೇಶನ್
ಕ್ರಿಸ್‌ಮಸ್ ಸೀಸನ್ ರಜಾ ಸಮಯವೂ ಆಗಿರುವುದರಿಂದ ಕೆಲವು ತಾರೆಯರು ಈ ಸಂದರ್ಭದಲ್ಲಿ ಪ್ರವಾಸ ಹೋಗಿ ಕ್ರಿಸ್‌ಮಸ್ ಆಚರಿಸುತ್ತಾರೆ. ಈ ನಿಟ್ಟಿನಲ್ಲಿಈಗಾಗಲೇ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪುತ್ರಿ ಮಾಲತಿ ಜತೆಗೆ ಕ್ರಿಸ್‌ಮಸ್ ವೆಕೇಶನ್‌ಗೆ ಹೋಗಿದ್ದಾರೆ. ಈ ಕುರಿತ ಫೋಟೊ ಶೇರ್ ಮಾಡಿರುವ ಅವರು ತಮ್ಮ ಪುಟ್ಟ ಮಗಳ ಮೊದಲ ಕ್ರಿಸ್‌ಮಸ್ ಹಬ್ಬವನ್ನು ಪ್ರವಾಸ ತಾಣದಲ್ಲಿಎಂಜಾಯ್ ಮಾಡಲಿದ್ದಾರೆ. ಇದೇ ರೀತಿ ನಟ ಹೃತಿಕ್ ರೋಷನ್ ತಮ್ಮ ಗಲ್‌ರ್ ಫ್ರೆಂಡ್ ಸಾಬಾ ಅಜಾದ್ ಮತ್ತು ಮಕ್ಕಳೊಂದಿಗೆ ಕ್ರಿಸ್‌ಮಸ್ ವೆಕೇಶನ್‌ಗೆ ತೆರಳಿದ್ದಾರೆ. ನಟಿ ಸನ್ನಿ ಲಿಯೋನ್ ಕೂಡ ತಮ್ಮ ಕುಟುಂಬದ ಜತೆಗೆ ಕ್ರಿಸ್‌ಮಸ್ ವೆಕೇಶನ್ ಹೋಗಿದ್ದಾರೆ.


ರೆಡ್ ಲುಕ್
ಕೆಲವು ತಾರೆಯರು ಕ್ರಿಸ್‌ಮಸ್‌ಗೆ ಸೂಕ್ತವಾಗುವ ಕೆಂಪು ಬಣ್ಣದ ಉಡುಪುಗಳಲ್ಲಿ ಫೋಟೊಶೂಟ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಲ್ಲಿಹಬ್ಬದ ಸಂಭ್ರಮ ಮೂಡಿಸಿದ್ದಾರೆ. ನಟಿ ಡಯಾನಾ ಪೆಂಟಿ ಕೆಂಪು ಬಣ್ಣದ ಜೆರ್ಸಿ ಧರಿಸಿ, ಕೂದಲಿಗೆ ಕೆಂಪು ಹೇರ್ ಬ್ಯಾಂಡ್ ಹಾಕಿಕೊಂಡು ಕ್ರಿಸ್‌ಮಸ್ ಟ್ರೀ ಎದುರು ಫೋಟೊ ತೆಗೆಸಿಕೊಂಡಿದ್ದಾರೆ. ನಟಿ ಪ್ರೀತಿ ಝಿಂಟಾ ತಮ್ಮ ಮನೆಯನ್ನು ಕ್ರಿಸ್‌ಮಸ್ ಟ್ರೀಯಿಂದ ಅಲಂಕರಿಸಿ ತಾವು ಕೂಡ ಸಾಂತಾಕ್ಲಾಸ್‌ನ ಕಾಸ್ಟ್ಯೂಮ್ ಧರಿಸಿರುವ ವಿಡಿಯೊ ಶೇರ್ ಮಾಡಿದ್ದಾರೆ. ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಾಂತಾ ಕ್ಲಾಸ್‌ನಂಥ ಉಡುಪು ಧರಿಸಿ ತಮ್ಮ ಅಭಿಮಾನಿಗಳಿಗೆ ಕ್ರಿಸ್‌ಮಸ್ ಶುಭಾಶಯ ಕೋರಿದ್ದಾರೆ.
ಗೆಟ್ ಟುಗೇದರ್
ಟಾಲಿವುಡ್ ಸ್ಟಾರ್‌ಗಳಾದ ಅಲ್ಲುಅರ್ಜುನ್ ಮತ್ತು ರಾಮ್ ಚರಣ್ ತೇಜ ಕ್ರಿಸ್‌ಮಸ್‌ಗೆ ಪೂರ್ವಭಾವಿಯಾಗಿ ಫ್ಯಾಮಿಲಿ ಗೆಟ್‌ಟುಗೇದರ್ ಮಾಡಿದ್ದಾರೆ. ತಮ್ಮ ಮನೆಯನ್ನು ಕ್ರಿಸ್‌ಮಸ್ ಥೀಮ್‌ನಲ್ಲಿ ಅಲಂಕರಿಸಿರುವ ಅವರ ಕೆಲವು ಕುಟುಂಬ ಸದಸ್ಯರು ಕೆಂಪು ಬಣ್ಣದ ಉಡುಪುಗಳಲ್ಲಿ ಕಂಗೊಳಿಸಿದ್ದಾರೆ. ನಟಿ ರಕುಲ್ ಪ್ರೀತ್ ಮುಂತಾದವರು ಕ್ರಿಸ್‌ಮಸ್ ಹಬ್ಬದ ತಿನಿಸು ತಯಾರಿಸುತ್ತಿರುವ ವಿಡಿಯೊ ಶೇರ್ ಮಾಡಿದ್ದಾರೆ.
Merry Christmas 2022 Indian Film Industry Artist Celebration.
11-12-25 10:57 pm
Bangalore Correspondent
Kalaburgi Accident, Three Killed: ರಾಜ್ಯದಲ್ಲಿ...
11-12-25 10:47 pm
ಗಾಂಜಾಕ್ಕಾಗಿ ಕಾರವಾರ ಜೈಲಿನಲ್ಲಿ ಕೈದಿಗಳ ಗಲಾಟೆ ; ಜ...
11-12-25 08:03 pm
Padubidri, Accident: ಪಡುಬಿದ್ರಿಯಲ್ಲಿ ಮತ್ತೊಂದು...
11-12-25 03:29 pm
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪರೀಕ್ಷೆ ಬರೆದ ವಿದ್ಯಾರ...
11-12-25 12:44 pm
11-12-25 04:24 pm
HK News Desk
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
ಭಾರತೀಯರಿಗೆ ಸಂತಸದ ಸುದ್ದಿ ; ಯುನೆಸ್ಕೋ ಪಟ್ಟಿಗೆ ದೀ...
10-12-25 01:17 pm
11-12-25 10:55 pm
Mangalore Correspondent
ದೈವದ ಚಾಕರಿ ಮಾಡುವವರಿಗೆ ಮಾಸಾಶನ, ಸರ್ಕಾರಿ ಸವಲತ್ತು...
11-12-25 04:21 pm
ದ್ವೇಷ ಭಾಷಣ ಪ್ರಕರಣ ; ಕಡೆಗೂ ಆರೆಸ್ಸೆಸ್ ಮುಖಂಡ ಪ್ರ...
10-12-25 11:04 pm
ಮಂಗಳೂರಿನಲ್ಲಿ ಆರು ತಿಂಗಳಿನಿಂದ ಡ್ರಗ್ಸ್ ಬೇಟೆ ; ಕಾ...
10-12-25 10:51 pm
Bharath Kumdel, Instagram, Target Group: ಭರತ್...
10-12-25 08:45 pm
11-12-25 09:53 pm
HK News Desk
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am