ಬ್ರೇಕಿಂಗ್ ನ್ಯೂಸ್
16-12-22 01:57 pm Source: Vijayakarnataka ಸಿನಿಮಾ
ಕಾಲಿವುಡ್‌ನ ಸ್ಟಾರ್ ವಿಶಾಲ್ ( Vishal ) ಅಭಿನಯದ ಹೊಸ ಚಿತ್ರ 'ಲಾಠಿ' ( Lathi ) ವಿಶ್ವದಾದ್ಯಂತ ಡಿ.22ಕ್ಕೆ ಬೆಳ್ಳಿಪರದೆಗೆ ಅಪ್ಪಳಿಸುತ್ತಿದೆ. 'ಲಾಠಿ' ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಚಿತ್ರದ ಪ್ರೊಮೋಷನ್‌ಗೆ ನಟ ವಿಶಾಲ್ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಸಿನಿಮಾ ಕುರಿತ ಮಾಹಿತಿಯನ್ನ ಹಂಚಿಕೊಂಡ್ರು.
ಈ ಚಿತ್ರದಲ್ಲಿ ವಿಶಾಲ್ ಪೊಲೀಸ್ ಕಾನ್ ಸ್ಟೇಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನೋದ್ ಕುಮಾರ್ ನಿರ್ದೇಶನವಿರುವ ಚಿತ್ರಕ್ಕೆ ಯುವನ್ ಶಂಕರ್ ರಾಜಾ ಸಂಗೀತ ಸಂಯೋಜಿಸಿದ್ದಾರೆ.
"ಚಿತ್ರ ಉತ್ತಮ ಕಥಾಹಂದರ ಹೊಂದಿದೆ. ಈವರೆಗೂ ಮಾಡಿರದ ವಿಭಿನ್ನ ಪಾತ್ರದಲ್ಲಿ ನಟಿಸಿದ್ದು ಸಂತಸ ತಂದಿದೆ. ಅಭಿಮಾನಿಗಳಿಗೆ ತಮ್ಮ ನಟನೆ ಸಿಕ್ಕಾಪಟ್ಟೆ ಖುಷಿ ಕೊಡಲಿದೆ" ಅಂತ ವಿಶಾಲ್ ತಿಳಿಸಿದ್ದಾರೆ.
ಕನ್ನಡ ಸಿನಿಮಾ ತಂದೆ ಕನಸು..!
ವಿಶಾಲ್ ಅವರು ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುವ ಕನಸು ಹೊಂದಿದ್ದಾರೆ. ಕನ್ನಡ ಸಿನಿಮಾದಲ್ಲಿ ಅಭಿನಯಿಸಬೇಕು ಅನ್ನೋದು ನನ್ನ ತಂದೆಯ ಕನಸು. ಕನ್ನಡ ಭಾಷೆಯ ಚಿತ್ರದಲ್ಲಿ ನಟಿಸಲು ನಾನು ಸಿದ್ಧನಿದ್ದೇನೆ. ನನ್ನ ತಂದೆ ಕನ್ನಡಿಗರಾಗಿರುವುದರಿಂದ ಈ ಆಸೆ ಪಡುತ್ತಿದ್ದಾರೆ. ಅವರ ಆಸೆ ಈಡೇರಿಸಲು ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತೇನೆ. ಕನ್ನಡ ಚಿತ್ರರಂಗದಿಂದ ಈಗಾಗಲೇ ನನಗೆ ಆಫರ್ ಬಂದಿದೆ. 2023ರಲ್ಲಿ ನಾನು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಲಿದ್ದೇನೆ. 2024ರಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸುತ್ತೇನೆ’ ಎಂದು ವಿಶಾಲ್ ತಿಳಿಸಿದ್ರು.

ಶಕ್ತಿಧಾಮದ ಸ್ವಯಂಸೇವಕ..!
ಡಾ.ರಾಜ್ ಕುಟುಂಬ ಶಕ್ತಿಧಾಮವನ್ನ ಚೆನ್ನಾಗಿ ನೋಡಿಕೊಳ್ಳುತ್ತಿದೆ. ಶಕ್ತಿಧಾಮದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿದೆ. ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅವರ ಕಾರ್ಯವನ್ನು ಅವರ ಕುಟುಂಬ ಮುಂದುವರೆಸಿದೆ, 1800 ಮಕ್ಕಳಿಗೆ ಬೆಳಕಾಗಿದೆ. ಅವರಿಗೆ ನೆರವಾಗಲು ಸದಾ ಸಿದ್ಧ. ಶಕ್ತಿಧಾಮದ ಮಕ್ಕಳನ್ನು ದತ್ತು ಪಡೆಯಲು ನಾನು ಸದಾ ಸಿದ್ಧನಿದ್ದೇನೆ ಎಂದು ವಿಶಾಲ್ ಹೇಳಿದ್ರು.
ಡಾ. ರಾಜ್‌ಕುಮಾರ್ ಕುಟುಂಬದವರ ಒಪ್ಪಿಗೆಗಾಗಿ ಕಾಯುತ್ತಿದ್ದೇನೆ. ಶಕ್ತಿಧಾಮದ ಸ್ವಯಂಸೇವಕನಾಗಿ ದುಡಿಯಲು ಉತ್ಸುಕನಾಗಿದ್ದೇನೆ. ವಿಶ್ವದ ಯಾವುದೇ ಮೂಲೆಯಲ್ಲಿ ಇದ್ದರೂ ನಾನು ಇಲ್ಲಿಗೆ ಬರುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ ಶಕ್ತಿಧಾಮಕ್ಕೆ ಸಹಾಯದ ಅವಶ್ಯಕತೆ ಇಲ್ಲ. ಅವಶ್ಯಕತೆ ಇದ್ದಾಗ ನಾನು ಶಕ್ತಿಧಾಮದ ಜೊತೆಗಿರುತ್ತೇನೆ ಎಂದು ಹೇಳಿದ್ರು .
ಹಾಗೆಯೇ ನಟ ಪ್ರಕಾಶ್ ರಾಜ್ ಆರಂಭಿಸಿರುವ 'ಪುನೀತ್ ಆಂಬ್ಯುಲೆನ್ಸ್ ' ಯೋಜನೆಗಾಗಿ ಐದು ವಾಹನ ನೀಡುವುದಕ್ಕೆ ಒಪ್ಪಿದ್ದೇನೆ ಅಂದ್ರು ವಿಶಾಲ್.ದಕ್ಷಿಣ ಚಿತ್ರರಂಗದ
ಪಾರುಪತ್ಯ..!
ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳು ದೇಶದಲ್ಲಿ ದೊಡ್ಡ ಹೆಸರು ಮಾಡುತ್ತಿವೆ. ಸ್ಯಾಂಡಲ್‌ವುಡ್‌ನಲ್ಲಿ ‘ಕೆಜಿಎಫ್’ ನಂತರ ‘ಕಾಂತಾರ’ ಸಹ ಒಳ್ಳೆಯ ಸಿನಿಮಾ ಆಗಿದೆ. ನಾನು ಕೂಡ ಈ ಚಿತ್ರವನ್ನು ನೋಡಿದ್ದೇನೆ, ಬಹಳ ಚೆನ್ನಾಗಿದೆ. ರಿಷಬ್ ಶೆಟ್ಟಿಗೆ ಕರೆ ಮಾಡಿ ಸಿನಿಮಾ ಚೆನ್ನಾಗಿದೆ ಅಂತ ತಿಳಿಸಿದ್ದೇನೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಇಲ್ಲಿನ ಕಲೆ ಸಂಸ್ಕೃತಿ ಅನಾವರಣ ಆಗುತ್ತಿದೆ. ಉತ್ತರ ಭಾರತದವರಿಗೆ ಇದು ಇಷ್ಟವಾಗ್ತಿದೆ. ದಕ್ಷಿಣ ಭಾರತ, ಉತ್ತರ ಭಾರತದ ಸಿನಿಮಾ ಎಂಬ ಭೇದ ಇಲ್ಲ. ಎಲ್ಲವೂ ಭಾರತದ ಸಿನಿಮಾ ಎಂದು ವಿಶಾಲ್ ತಿಳಿಸಿದರು.
Tamil Actor Vishal Speaks About Lathi Movie Release And Shakthidhama.
23-10-25 03:42 pm
HK News Desk
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅರ್ಹ ವ್ಯಕ್ತಿ ;...
22-10-25 08:12 pm
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
23-10-25 03:39 pm
HK News Desk
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
24-10-25 11:57 am
Mangalore Correspondent
ಎಸ್ ಸಿಎಸ್ ಆಸ್ಪತ್ರೆಯ 38ನೇ ವರ್ಷದ ಸಂಭ್ರಮಾಚರಣೆ ;...
23-10-25 10:52 pm
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾ...
23-10-25 07:35 pm
ಜಾನುವಾರು ಸಾಗಾಟಕ್ಕೆ ಪೊಲೀಸರ ತಡೆ ; ಲಾರಿಯಿಂದ ಹಗ್ಗ...
22-10-25 09:55 pm
24-10-25 10:07 am
Mangalore Correspondent
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm