ಬ್ರೇಕಿಂಗ್ ನ್ಯೂಸ್
08-12-22 02:03 pm Source: Vijayakarnataka ಸಿನಿಮಾ
2022 ನಿನ್ನೆ ಮೊನ್ನೆ ಶುರುವಾದಂತೆ ಇತ್ತು. ಆದ್ರೀಗ 2022ಕ್ಕೆ ಗುಡ್ ಬೈ ಹೇಳುವ ಸಮಯ ಬಂದೇಬಿಟ್ಟಿದೆ. 2022ಕ್ಕೆ ವಿದಾಯ ಹೇಳುವ ಮುನ್ನ.. ಒಮ್ಮೆ ಫ್ಲ್ಯಾಶ್ ಬ್ಯಾಕ್‌ಗೆ ಹೋಗಿ ಬರೋಣ. 2022 ಸ್ಯಾಂಡಲ್‌ವುಡ್ ಪಾಲಿಗೆ ಲಕ್ಕಿ ವರ್ಷ. ಈ ವರ್ಷ ಕನ್ನಡದ ಸಿನಿಮಾಗಳು ಸಿಕ್ಕಾಪಟ್ಟೆ ಸೌಂಡ್ ಮಾಡಿದವು. ಕಳೆದ 11 ತಿಂಗಳಿನಲ್ಲಿ ಕನ್ನಡ ಚಿತ್ರರಂಗ ಚಿನ್ನದ ಬೆಳೆಯನ್ನೇ ತೆಗೆಯಿತು. ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾತ್ರವಲ್ಲ.. ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆಯಿತು.
ಕೋವಿಡ್-19 ನಿಂದ ಸೊರಗಿದ್ದ ಸ್ಯಾಂಡಲ್‌ವುಡ್ 2022 ರಲ್ಲಿ ಚೇತರಿಸಿಕೊಂಡಿತು. ಈ ವರ್ಷ ಇಲ್ಲಿಯವರೆಗೂ 80ಕ್ಕೂ ಅಧಿಕ ಸಿನಿಮಾಗಳು ತೆರೆಗೆ ಬಂದಿವೆ. ‘ಹೋಮ್ ಮಿನಿಸ್ಟರ್’, ‘ಲವ್ ಮಾಕ್ಟೇಲ್ 2’, ‘ಏಕ್ ಲವ್ ಯಾ’, ‘ಗಾಳಿಪಟ 2’ ಸೇರಿದಂತೆ ಅನೇಕ ಚಿತ್ರಗಳು ಹೈಪ್ ಕ್ರಿಯೇಟ್ ಮಾಡಿದ್ದವು. ಆದರೆ, ಪ್ರೇಕ್ಷಕರ ನಿರೀಕ್ಷೆ ಮಟ್ಟ ತಲುಪಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು ಬೆರಳೆಣಿಕೆಯ ಚಿತ್ರಗಳು ಮಾತ್ರ.
ಈ ವರ್ಷ ಅತೀ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ಪರಭಾಷೆಗೆ ಪ್ರಬಲ ಪೈಪೋಟಿ ನೀಡಿದ ಕನ್ನಡ ಚಿತ್ರಗಳ ಪಟ್ಟಿ ಇಲ್ಲಿದೆ ನೋಡಿ..
ಕೆಜಿಎಫ್: ಚಾಪ್ಟರ್ 2

ಇಡೀ ಭಾರತೀಯ ಚಿತ್ರರಂಗ… ಕನ್ನಡ ಚಿತ್ರರಂಗದತ್ತ ತಿರುಗಿ ನೋಡಿ ಚಪ್ಪಾಳೆ ತಟ್ಟುವಂತೆ ಮಾಡಿದ್ದು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ. ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್: ಚಾಪ್ಟರ್ 2’ ಚಿತ್ರದಲ್ಲಿ ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್ ಮುಂತಾದವರು ಅಭಿನಯಿಸಿದ್ದರು. ಸುಮಾರು 100 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿದ್ದ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 1200 - 1250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಆ ಮೂಲಕ 2022ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾ ಎಂದೆನಿಸಿಕೊಳ್ತು ‘ಕೆಜಿಎಫ್: ಚಾಪ್ಟರ್ 2’.
ಕಾಂತಾರ

ಈ ವರ್ಷ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಚಿತ್ರಗಳ ಪೈಕಿ ‘ಕಾಂತಾರ’ ಎರಡನೇ ಸ್ಥಾನ ಪಡೆದುಕೊಂಡಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಸಿನಿಮಾ ‘ಕಾಂತಾರ’. ಕರಾವಳಿಯ ಸಂಪ್ರದಾಯ ಮತ್ತು ಭೂತಕೋಲ ಕುರಿತಾದ ಕಥಾಹಂದರ ಹೊಂದಿದ್ದ ‘ಕಾಂತಾರ’ ಚಿತ್ರ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ‘ಕಾಂತಾರ’ ಚಿತ್ರದಲ್ಲಿ ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಶೈನ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ.
ವಿಕ್ರಾಂತ್ ರೋಣ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಸಿನಿಮಾ ‘ವಿಕ್ರಾಂತ್ ರೋಣ’. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ವಿಕ್ರಾಂತ್ ರೋಣ’ ಚಿತ್ರ 150 - 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಮುಂತಾದವರು ಮಿಂಚಿದ್ದರು. ಈ ವರ್ಷ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಚಿತ್ರಗಳ ಪೈಕಿ ‘ವಿಕ್ರಾಂತ್ ರೋಣ’ ಮೂರನೇ ಸ್ಥಾನ ಪಡೆದಿದೆ.
‘ಜೇಮ್ಸ್’

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕರಾಗಿ ಅಭಿನಯಿಸಿದ್ದ ಕಡೆಯ ಸಿನಿಮಾ ‘ಜೇಮ್ಸ್’. ಚೇತನ್ ಕುಮಾರ್ ನಿರ್ದೇಶನದ ‘ಜೇಮ್ಸ್’ ಚಿತ್ರ 151 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ವರ್ಷ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಚಿತ್ರಗಳ ಪೈಕಿ ‘ಜೇಮ್ಸ್’ ಸಿನಿಮಾ 4ನೇ ಸ್ಥಾನ ಪಡೆದುಕೊಂಡಿದೆ. ‘ಜೇಮ್ಸ್’ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆಗೆ ಪ್ರಿಯಾ ಆನಂದ್, ಶ್ರೀಕಾಂತ್ ಮುಂತಾದವರು ಅಭಿನಯಿಸಿದ್ರು.
777 ಚಾರ್ಲಿ

ಮನುಷ್ಯ ಹಾಗೂ ಶ್ವಾನದ ನಡುವಿನ ಅನ್ಯೋನ್ಯ ಅನುಬಂಧವನ್ನು ಸಾರಿದ ಸಿನಿಮಾ 777 ಚಾರ್ಲಿ. ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಾಣದ ‘777 ಚಾರ್ಲಿ’ ಚಿತ್ರಕ್ಕೆ ಕಿರಣ್ ರಾಜ್ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ಶ್ವಾನ ಚಾರ್ಲಿ, ಸಂಗೀತಾ ಶೃಂಗೇರಿ ಮುಂತಾದವರು ಅಭಿನಯಿಸಿದ್ದರು.
ಹೈಪ್ ಸೃಷ್ಟಿಸಿದ್ದ ಸಿನಿಮಾಗಳು

ಡಾರ್ಲಿಂಗ್ ಕೃಷ್ಣ ಅಭಿನಯದ ‘ಲವ್ ಮಾಕ್ಟೇಲ್ 2’, ರಾಣಾ ನಟನೆಯ ‘ಏಕ್ ಲವ್ ಯಾ’, ಉಪೇಂದ್ರ ನಟನೆಯ ‘ಹೋಮ್ ಮಿನಿಸ್ಟರ್’, ಶರಣ್ ನಟನೆಯ ‘ಅವತಾರ ಪುರುಷ’, ಶಿವರಾಜ್ ಕುಮಾರ್ ಅಭಿನಯದ ‘ಬೈರಾಗಿ’, ರವಿಚಂದ್ರನ್ ನಟನೆಯ ‘ರವಿ ಬೋಪಣ್ಣ’, ಗಣೇಶ್ ನಟನೆಯ ‘ಗಾಳಿಪಟ 2’, ಧೀರೇನ್ ರಾಮ್‌ಕುಮಾರ್ ನಟನೆಯ ‘ಶಿವ 143’, ಧನಂಜಯ ನಟನೆಯ ‘ಹೆಡ್ ಬುಷ್’ ಮುಂತಾದ ಸಿನಿಮಾಗಳು ಸಿಕ್ಕಾಪಟ್ಟೆ ಹೈಪ್ ಸೃಷ್ಟಿಸಿದ್ದವು.
Year End Report 2022 List Of Highest Grossing Kannada Films This Year.
13-12-25 08:38 pm
HK News Desk
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
ಅಧಿವೇಶನ ಮುಗಿದ ತಕ್ಷಣವೇ ಡಿಕೆಶಿ ಮುಖ್ಯಮಂತ್ರಿಯಾಗುತ...
12-12-25 03:18 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 04:36 pm
Mangalore Correspondent
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
Mangalore Jail Inmate, Death: ಎದೆನೋವು ; ಉಡುಪಿ...
11-12-25 10:55 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm