ಬ್ರೇಕಿಂಗ್ ನ್ಯೂಸ್
02-12-22 01:23 pm Source: Vijayakarnataka ಸಿನಿಮಾ
ಸ್ಯಾಂಡಲ್ವುಡ್ನಲ್ಲೀಗ ಮದುವೆಗಳದ್ದೇ ಸುದ್ದಿ. ಮೊನ್ನೆಯಷ್ಟೇ ಅದಿತಿ ಪ್ರಭುದೇವ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರೂ ಇನ್ನೇನು ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಅದಕ್ಕಿಂತಲೂ ಮುನ್ನ ಹಲವು ಕಿರುತೆರೆ ನಟ ನಟಿಯರು ವಿವಾಹವಾಗಿದ್ದಾರೆ.
ಈಗ ಮತ್ತೊಂದು ಜೋಡಿ ಮದುವೆಯಾಗಲು ಸಿದ್ಧವಾಗಿದೆ. ರೆಬಲ್ ಸ್ಟಾರ್ ಅಂಬರೀಶ್ ( Abhishek Ambareesh ) ಮತ್ತು ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಈಗ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಮೂಲಗಳ ಪ್ರಕಾರ ಡಿಸೆಂಬರ್ 11ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ನಿಶ್ಚಿತಾರ್ಥ ನಡೆಯಲಿದೆ. ರೆಬಲ್ ಸ್ಟಾರ್ ಅವರ ಮುದ್ದಿನ ಪುತ್ರ ಅಭಿ ವಿವಾಹವಾಗುತ್ತಿದ್ದಾರೆ ಎಂದರೆ ವಧು ಯಾರು ಎಂಬ ಕುತೂಹಲ ಎಲ್ಲರಿಗೂ ಇದೆ. ಆ ಹುಡುಗಿ ಬೇರೆ ಯಾರೂ ಅಲ್ಲ, ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ( Aviva Bidapa ).

ಲವಲvkಯ ಆಪ್ತ ಮೂಲವೊಂದು ಈ ವಿಷಯವನ್ನು ಖಚಿತಪಡಿಸಿದ್ದು, ಡಿಸೆಂಬರ್ 11ರಂದು ಎರಡೂ ಕುಟುಂಬದವರ ಸಮ್ಮುಖದಲ್ಲಿ ಜೋಡಿ ಉಂಗುರ ಬದಲಾಯಿಸಿಕೊಳ್ಳಲಿದೆ. ಅಭಿ ಮತ್ತು ಅವಿವಾ ವಿವಾಹದ ಸುದ್ದಿಯನ್ನು ಕುಟುಂಬದ ವತಿಯಿಂದ ಡಿಸೆಂಬರ್ 8ರಂದು ಅಧಿಕೃತವಾಗಿ ಅನೌನ್ಸ್ ಮಾಡಲಿದ್ದಾರಂತೆ. 1991ರ ಡಿಸೆಂಬರ್ 8ರಂದು ಸುಮಲತಾ ಮತ್ತು ಅಂಬಿ ವಿವಾಹವಾಗಿದ್ದರು. ಆ ಕಾರಣಕ್ಕಾಗಿ ಅಂದು ಅಧಿಕೃತವಾಗಿ ಅನೌನ್ಸ್ ಮಾಡಬೇಕು ಎಂದು ಕುಟುಂಬ ನಿರ್ಧರಿಸಿದೆಯಂತೆ.
ಅವಿವಾ ಮತ್ತು ಅಭಿ ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ನಾಲ್ಕು ವರ್ಷಗಳಿಂದಲೂ ಬಹಳ ಗುಪ್ತವಾಗಿದ್ದ ವಿಷಯ ಎಂಗೇಜ್ಮೆಂಟ್ ವಿಷಯ ಹೊರಬಂದ ಕೂಡಲೇ ಸುದ್ದಿಯಾಗುತ್ತಿದೆ. ಈ ಬಗ್ಗೆ ಅಭಿಷೇಕ್ ಕುಟುಂಬ ಮತ್ತು ಅವಿವಾ ಕುಟುಂಬದ ಕಡೆಯಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪೋನ್ ಸಂಪರ್ಕಕ್ಕೂ ಸಹ ಈ ಎರಡೂ ಕುಟುಂಬದವರು ಮಾಧ್ಯಮಗಳಿಗೆ ಸಿಕ್ಕಿಲ್ಲ. ಅಭಿಷೇಕ್ ಅಂಬರೀಶ್ ಸದ್ಯ ಒಂದರ ಹಿಂದೆ ಒಂದು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಮೊನ್ನೆಯಷ್ಟೇ ಅವರ ‘ಕಾಳಿ’ ಸಿನಿಮಾದ ಮುಹೂರ್ತ ನಡೆದಿದೆ. ಇದಾದ ಮೇಲೆ ಮಹೇಶ್ ಕುಮಾರ್ ನಿರ್ದೇಶನದ ಹೆಸರಿಡದ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಈಗ ದುನಿಯಾ ಸೂರಿಯವರ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಚಿತ್ರೀಕರಣದಲ್ಲಿ ಬಿಡುವಿಲ್ಲದಂತೆ ಅಭಿ ತೊಡಗಿಸಿಕೊಂಡಿದ್ದಾರೆ. ಅವಿವಾ ಬಿದ್ದಪ್ಪ ತನ್ನ ತಂದೆಯಂತೆ ಫ್ಯಾಷನ್ ಕ್ಷೇತ್ರದಲ್ಲಿದ್ದು, ಫ್ಯಾಷನ್ ಮ್ಯಾನೇಜ್ಮೆಂಟ್ ಕಂಪನಿಯೊಂದರ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ.
Abhishek Ambareesh And Aviva Bidapa Engagement On December 11.
13-12-25 08:38 pm
HK News Desk
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
ಅಧಿವೇಶನ ಮುಗಿದ ತಕ್ಷಣವೇ ಡಿಕೆಶಿ ಮುಖ್ಯಮಂತ್ರಿಯಾಗುತ...
12-12-25 03:18 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 04:36 pm
Mangalore Correspondent
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
Mangalore Jail Inmate, Death: ಎದೆನೋವು ; ಉಡುಪಿ...
11-12-25 10:55 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm