ಬ್ರೇಕಿಂಗ್ ನ್ಯೂಸ್
30-11-22 12:37 pm Source: Vijayakarnataka ಸಿನಿಮಾ
"ವ್ಯಕ್ತಿಯೊಬ್ಬರು ಕೃತಿ ಸನೋನ್ ಅವರನ್ನು ( Kriti Sanon ) ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಆ ವ್ಯಕ್ತಿ ಮುಂಬೈನಲ್ಲಿ ಇರೋದಿಲ್ಲ, ಈಗ ದೀಪಿಕಾ ಪಡುಕೋಣೆ ಜೊತೆ ಸಿನಿಮಾ ಶೂಟಿಂಗ್ ಮಾಡುತ್ತಿದ್ದಾರೆ" ಎಂದು ಇತ್ತೀಚೆಗೆ ರಿಯಾಲಿಟಿ ಶೋನಲ್ಲಿ ವರುಣ್ ಧವನ್ ಅವರು ಹೇಳಿದರು. ಹೀಗಂದಿದ್ದೇ ತಡ ಪ್ರಭಾಸ್ ಅವರು ( Prabhas ) ಕೃತಿಯನ್ನು ಪ್ರೀತಿ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಡಲು ಶುರುವಾಯ್ತು.
ಏನೇನು ಗಾಸಿಪ್ ಹರಡಿತು?
ಹೋದಲ್ಲಿ ಬಂದಲ್ಲೆಲ್ಲ ವರುಣ್ ಧವನ್ ಅವರು ಕೃತಿ ಸನೋನ್ ಪ್ರೀತಿ ಮಾಡುತ್ತಿದ್ದಾರೆ ಎಂದು ಹೇಳತೊಡಗಿದರು. 'ಆದಿಪುರುಷ್' ಸಿನಿಮಾದಲ್ಲಿ ಕೃತಿ ಹಾಗೂ ಪ್ರಭಾಸ್ ಒಟ್ಟಿಗೆ ನಟಿಸುತ್ತಿದ್ದಾರೆ. ಅಲ್ಲಿಂದಲೇ ಅವರ ಮಧ್ಯೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿದೆ ಎಂದು ಕೆಲವರು ಊಹಿಸಿಕೊಳ್ಳಲು ಶುರುಮಾಡಿದರು. ಇದಕ್ಕೆಲ್ಲ ಕೃತಿ ಸನೋನ್ ಅವರು ಉತ್ತರ ನೀಡಿದ್ದಾರೆ.

ಕೃತಿ ಸನೋನ್ ಸ್ಪಷ್ಟನೆ
"ಪ್ರೀತಿಯೂ ಇಲ್ಲ. ರಿಯಾಲಿಟಿ ಶೋನಲ್ಲಿ ನಮ್ಮ ಭೆಡಿಯಾ ( ತೋಳ ) ಸ್ವಲ್ಪ ಕ್ರೂರವಾಯ್ತು. ಅವ ಫನ್ ಸಾಕಷ್ಟು ಗಾಸಿಪ್‌ಗಳಿಗೆ ಕಾರಣವಾಯ್ತು. ಕೆಲವೊಬ್ಬರು ನನ್ನ ಮದುವೆಯ ಡೇಟ್ ಕೂಡ ಘೋಷಣೆ ಮಾಡಿದರು. ಅದು ಬೇಸ್‌ಲೆಸ್" ಎಂದು ಕೃತಿ ಸನೋನ್ ಅವರು ಸೋಶಿಯಲ್ ಮೀಡಿಯಾ ಮೂಲಕ ಹೇಳಿದ್ದಾರೆ.
ಕಲೆಕ್ಷನ್ ಮಾಡುತ್ತಿರುವ 'ಭೆಡಿಯಾ'
ಕೃತಿ ಸನೋನ್, ವರುಣ್ ಧವನ್ ನಟನೆಯ 'ಭೆಡಿಯಾ' ಸಿನಿಮಾವನ್ನು ಅಮರ್ ಕೌಶಿಕ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.

3D ರೂಪದಲ್ಲಿ ಚಿತ್ರೀಕರಣ ಮಾಡಲಾಗಿರುವ ಆದಿಪುರುಷ್
ನಟ ಪ್ರಭಾಸ್ ಅವರು ಪ್ಯಾನ್ ಇಂಡಿಯಾ ಸ್ಟಾರ್. ಅವರ ಮುಂದಿನ ಸಿನಿಮಾ 'ಆದಿಪುರುಷ್' ಮೇಲೆ ದೊಡ್ಡ ನಿರೀಕ್ಷೆ ಇದೆ. ಜನವರಿ 12ರಂದು ಆ ಸಿನಿಮಾ ತೆರೆಗೆ ಬರಲಿದೆ. ನಿರ್ದೇಶಕ ಓಂ ರಾವುತ್ 'ಆದಿಪುರುಷ್' ಸಿನಿಮಾವನ್ನು ಸಂಪೂರ್ಣ 3D ರೂಪದಲ್ಲಿ ಚಿತ್ರೀಕರಣ ಮಾಡಲಾಗಿದೆ. ಬಹುತೇಕ ಗ್ರೀನ್ ಮ್ಯಾಟ್ (ಕ್ರೋಮಾ ಸ್ಕ್ರೀನ್) ಬಳಸಿ, ಸ್ಟುಡಿಯೋ ಒಳಗೆ ಚಿತ್ರೀಕರಣ ಮಾಡಲಾಗಿದೆ. ಹಾಗಾಗಿ, ವಿಎಫ್‌ಎಕ್ಸ್ ಕೆಲಸಗಳು ಜಾಸ್ತಿ ಇತ್ತು.
ದೊಡ್ಡ ತಾರಾಗಣವಿದೆ
'ಆದಿಪುರುಷ್' ಶ್ರೀರಾಮನ ಕುರಿತ ಸಿನಿಮಾ. ಶ್ರೀರಾಮನಾಗಿ ಪ್ರಭಾಸ್ ನಟಿಸಿದ್ದು, ರಾವಣನಾಗಿ ಸೈಫ್ ಅಲಿ ಖಾನ್ ನಟಿಸಿದ್ದು ಅವರ ಪಾತ್ರವನ್ನು ಲಂಕೇಶ ಎಂದು ಕರೆಯಲಾಗಿದೆ. ಕೃತಿ ಸನೋನ್ ಇಲ್ಲಿ ಸೀತೆಯಾಗಿ ನಟಿಸಿದ್ದಾರೆ. ಅವರನ್ನು ಸಿನಿಮಾದಲ್ಲಿ ಜಾನಕಿ ಎಂದು ಕರೆಯಲಾಗಿದೆ. ದೇವದತ್ತ ನಾಗೆ ಅವರು ಹನುಮಾನ್ ಆಗಿ ಬಣ್ಣ ಹಚ್ಚಿದ್ದು, ಲಕ್ಷ್ಮಣನಾಗಿ ಸನ್ನಿ ಸಿಂಗ್ ಇದ್ದಾರೆ. ಇಡೀ ಸಿನಿಮಾವನ್ನು ಮೋಷನ್ ಕ್ಯಾಪ್ಚರ್ ತಂತ್ರಜ್ಞಾನದಲ್ಲಿ ಸೆರೆಹಿಡಿಯಲಾಗಿದೆ.
Actress Kriti Sanon Clarification On Love Marriage Gossip With Prabhas.
13-12-25 08:38 pm
HK News Desk
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
ಅಧಿವೇಶನ ಮುಗಿದ ತಕ್ಷಣವೇ ಡಿಕೆಶಿ ಮುಖ್ಯಮಂತ್ರಿಯಾಗುತ...
12-12-25 03:18 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 04:36 pm
Mangalore Correspondent
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
Mangalore Jail Inmate, Death: ಎದೆನೋವು ; ಉಡುಪಿ...
11-12-25 10:55 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm