ಬ್ರೇಕಿಂಗ್ ನ್ಯೂಸ್
28-11-22 12:54 pm Source: Vijayakarnataka ಸಿನಿಮಾ
ರಿಷಬ್ ಶೆಟ್ಟಿಯ ‘ಕಾಂತಾರ’ ಸಿನಿಮಾ ಮಾಡಿರುವ ಮೋಡಿ ಬಹಳ ದೊಡ್ಡದು. ಈ ಸಿನಿಮಾದಲ್ಲಿ ನಟಿಸಿರುವ ಹಲವರು ಈಗ ಸಿಕ್ಕಾಪಟ್ಟೆ ಜನಪ್ರಿಯರಾಗಿದ್ದಾರೆ. ಈ ಪೈಕಿ ನಾಯಕಿ ನಟಿ ಸಪ್ತಮಿ ಗೌಡರಿಗೂ ಬೇಡಿಕೆ ಹೆಚ್ಚಾಗಿದ್ದು, ಹಲವು ಸಿನಿಮಾ ಕಥೆಗಳನ್ನು ಅವರು ಕೇಳುತ್ತಿದ್ದಾರೆ. ಅದರಲ್ಲಿ ನಟ ಅಭಿಷೇಕ್ ಅಂಬರೀಶ್ ಜತೆಗಿನ ‘ಕಾಳಿ’ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರೆ.
ಹತ್ತಕ್ಕೂ ಹೆಚ್ಚು ಕಥೆಗಳನ್ನು ಕೇಳಿದೆ
‘ಕಾಂತಾರ ಸಿನಿಮಾದ ನಂತರ ಹತ್ತಕ್ಕೂ ಹೆಚ್ಚಿನ ಕಥೆಗಳನ್ನು ಕೇಳಿದೆ. ಅದರಲ್ಲಿ ಬೆಸ್ಟ್ ಅನಿಸಿದ್ದನ್ನು ಮಾತ್ರ ಆಯ್ಕೆ ಮಾಡಿದ್ದೇನೆ. ಈ ಬೆಸ್ಟ್ ಈಗ ಕೃಷ್ಣ ನಿರ್ದೇಶನದ ‘ಕಾಳಿ’ ಸಿನಿಮಾ ಮೂಲಕ ಆರಂಭವಾಗಲಿದೆ. ಇದರಲ್ಲಿ ನನ್ನದು ಬಹಳ ವಿಭಿನ್ನ ಪಾತ್ರ. ಕಾಂತಾರ ಸಿನಿಮಾದ ನಂತರ ನಾನು ಎಂತಹ ಪಾತ್ರದಲ್ಲಿ ನಟಿಸಬೇಕು ಎಂದುಕೊಂಡಿದ್ದೇನೋ ಅಂತಹದ್ದೇ ಪಾತ್ರವಿದು. ನನ್ನ ಮೊದಲ ಸಿನಿಮಾಗೂ, ಎರಡನೇ ಸಿನಿಮಾದ ಪಾತ್ರಕ್ಕೂ ಸಾಕಷ್ಟು ವ್ಯತ್ಯಾಸವಿತ್ತು. ಈಗ ಕಾಂತಾರ ಮತ್ತು ಕಾಳಿಯ ಸಿನಿಮಾದ ಪಾತ್ರಕ್ಕೂ ವ್ಯತ್ಯಾಸವಿದೆ. ಈ ರೀತಿ ಪ್ರತಿ ಪಾತ್ರವೂ ವಿಭಿನ್ನಾಗಿರಬೇಕು ಎಂದು ಯೋಚಿಸಿ ಕಥೆಗಳನ್ನು ಓಕೆ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ ಸಪ್ತಮಿ ಗೌಡ.
(ಹರೀಶ್ ಬಸವರಾಜ್)
ಪಾತ್ರದಲ್ಲಿ ಎಕ್ಸೈಟ್ಮೆಂಟ್ ಇರಬೇಕು
‘ಪ್ರತಿ ಸಿನಿಮಾದಲ್ಲಿ ಸಪ್ತಮಿಯನ್ನು ನೋಡಿದಾಗ ಇವರು ಈ ಹಿಂದೆ ಯಾವುದೇ ಸಿನಿಮಾದಲ್ಲಿ ಇಂತಹ ಪಾತ್ರ ಮಾಡಿಲ್ಲ ಎಂದು ನೋಡುವವರು ಅಂದುಕೊಳ್ಳಬೇಕು. ನಾನು ಕೂಡ ಪ್ರತಿ ಪಾತ್ರದಲ್ಲಿಯೂ ಏನಾದರೊಂದು ಹೊಸದನ್ನು ಕಲಿಯಬೇಕು. ಈಗ ‘ಕಾಳಿ’ ಸಿನಿಮಾದಲ್ಲಿಯೂ ಬಹಳಷ್ಟು ವಿಷಯಗಳನ್ನು ಕಲಿಯಲಿದ್ದೇನೆ. ಜತೆಗೆ ಯಾವುದೇ ಪಾತ್ರ ಒಪ್ಪಿಕೊಂಡರೂ ಅದರಲ್ಲೊಂದು ಎಕ್ಸೈಟ್ಮೆಂಟ್ ಇರಬೇಕು’ ಎನ್ನುವುದು ಸಪ್ತಮಿ ಮಾತು.
ಹಿಂದಿ ಆಫರ್ ರಿಜೆಕ್ಟ್ ಮಾಡಿದ ಸಪ್ತಮಿ
‘ಕಾಂತಾರ’ ಚಿತ್ರದ ನಂತರ ಸಂಭಾವನೆ ಹೆಚ್ಚಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ‘ನೀವು ಆಗಿದೆ ಎಂದುಕೊಂಡರೆ ಆಗಿದೆ ಎಂದರ್ಥ’ ಎಂದರು. ಕಾಳಿಯ ಜತೆಗೆ ಇನ್ನೊಂದು ಸಿನಿಮಾವನ್ನು ಸಪ್ತಮಿ ಗೌಡ ಒಪ್ಪಿಕೊಂಡಿದ್ದು, ಸದ್ಯದಲ್ಲೇ ಅದರ ಅನೌನ್ಸ್ಮೆಂಟ್ ಆಗಲಿದೆ. ಸದ್ಯಕ್ಕೆ ಅವರು ‘ಕಾಳಿ’ ಸಿನಿಮಾ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದಾರೆ. ಕನ್ನಡ ಸಿನಿಮಾಗಳ ಜತೆಗೆ ಸಪ್ತಮಿಗೆ ಹಿಂದಿಯ ದೊಡ್ಡ ನಿರ್ಮಾಣ ಸಂಸ್ಥೆಯಿಂದಲೂ ಆಫರ್ ಬಂದಿತ್ತು. ಆದರೆ ಅದನ್ನು ಅವರು ಒಪ್ಪಿಕೊಂಡಿಲ್ಲ ಎಂದು ತಿಳಿದು ಬಂದಿದೆ.
ಕರ್ನಾಟಕದಲ್ಲಿರುವ ತಮಿಳು ಹುಡುಗಿ
ಕಾಳಿ ಸಿನಿಮಾದಲ್ಲಿ ಸಪ್ತಮಿ ಗೌಡ ಪಾತ್ರದ ಬಗ್ಗೆ ಹೇಳಿರುವ ನಿರ್ದೇಶಕ ಕೃಷ್ಣ, ‘ಸಪ್ತಮಿ ಗೌಡರದ್ದು ಬಹಳ ಇಂಟೆನ್ಸ್ ಇರುವ ಪಾತ್ರ. ನಾಯಕ ನಟ ಅಭಿಷೇಕ್ ಅವರಷ್ಟೇ ಸಮಾನ ಸ್ಕ್ರೀನ್ ಸ್ಪೇಸ್ ನಾಯಕಿಗೂ ಇದೆ. ಮೈಸೂರು ಭಾಗದಲ್ಲಿ ಸೆಟಲ್ ಆಗಿರುವ ತಮಿಳು ಹುಡುಗಿಯ ಪಾತ್ರವದು. ಕೆಲವೇ ದಿನಗಳಲ್ಲಿ ಅವರ ಲುಕ್ ಟೆಸ್ಟ್ ಮತ್ತು ಫೋಟೊಶೂಟ್ ಮಾಡಿಸಿ ಅಧಿಕೃತ ಪೋಸ್ಟರ್ ಲಾಂಚ್ ಮಾಡುತ್ತೇವೆ’ ಎಂದಿದ್ದಾರೆ. ‘ಕಾಳಿ’ ಸಿನಿಮಾದ ಮುಹೂರ್ತ ನವೆಂಬರ್ 28 ಅಂದರೆ ಇಂದು ನಡೆಯಲಿದೆ. ಈ ಸಿನಿಮಾಗೆ ಚರಣ್ರಾಜ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ಜಗ ಮೆಚ್ಚಿದ ಲೀಲಾ
ಮಾಜಿ ಪೊಲೀಸ್ ಅಧಿಕಾರಿಯ ಪುತ್ರಿಯಾಗಿರುವ ಸಪ್ತಮಿ ಗೌಡ ಮೂಲತಃ ಕ್ರೀಡಾಪಟು. ಯಾವುದೋ ಕಾರ್ಯಕ್ರಮದಲ್ಲಿ ದುನಿಯಾ ಸೂರಿ ಕಣ್ಣಿಗೆ ಕಂಡಿದ್ದ ಇವರು ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ಮೂವರು ನಾಯಕಿಯರಲ್ಲಿ ಒಬ್ಬರಾಗಿ ನಟಿಸಿದ್ದರು. ಅದಾದ ಮೇಲೆ ‘ಕಾಂತಾರ’ ಚಿತ್ರಕ್ಕೆ ಆಯ್ಕೆಯಾಗಿದ್ದರು. ಈಗ ‘ಕಾಂತಾರ’ದ ಲೀಲಾ ಪಾತ್ರಧಾರಿ ಸಪ್ತಮಿ ಜಗತ್ತಿನಾದ್ಯಂತ ಗಮನ ಸೆಳೆದಿದ್ದಾರೆ.
Kantara Actress Sapthami Gowda Plays Female Lead In Abhishek Ambareesh Starrer Kaali Movie.
07-09-25 07:43 pm
Bangalore Correspondent
Fine, Violation, Home Minister: ಮುಖ್ಯಸ್ಥರಿಗೂ...
07-09-25 10:17 am
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
07-09-25 08:33 pm
HK News Desk
UPI Transaction Limit: ಯುಪಿಐ ಪಾವತಿ ಮಿತಿ ಹೆಚ್ಚ...
06-09-25 10:34 am
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
07-09-25 11:24 pm
Mangalore Correspondent
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
Ullal, Mangalore Police: ಮೊದಲ ಪತ್ನಿಗೆ ಜೀವನಾಂಶ...
06-09-25 10:59 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm