ಬ್ರೇಕಿಂಗ್ ನ್ಯೂಸ್
21-11-22 01:13 pm Source: Vijayakarnataka ಸಿನಿಮಾ
ಟಾಲಿವುಡ್‌ನಲ್ಲಿ ಸದ್ಯ ಡಬ್ಬಿಂಗ್ ಸಿನಿಮಾಗಳದ್ದೇ ಹವಾ. ಕನ್ನಡದ 'ಕಾಂತಾರ' ಸಿನಿಮಾ ತೆಲುಗು ಮಾರುಕಟ್ಟೆಯಲ್ಲಿ ಭರ್ತಿ 50 ಕೋಟಿ ರೂ. ಗಳಿಸಿದೆ. ವಿಕ್ರಮ್, ಪೊನ್ನಿಯಿನ್ ಸೆಲ್ವನ್ ಸಿನಿಮಾಗಳು ಕೂಡ ಭಾರಿ ಲಾಭ ಮಾಡಿಕೊಂಡಿವೆ. ಈ ಮಧ್ಯೆ ತೆಲುಗು ಚಿತ್ರ ನಿರ್ಮಾಪಕರ ಮಂಡಳಿ ಹೊಸದೊಂದು ರೂಲ್ಸ್ ಮಾಡಿತ್ತು. ಅದೇನೆಂದರೆ. 'ಸಂಕ್ರಾಂತಿ ಮತ್ತು ದಸರಾಗೆ ಕೇವಲ ಮೂಲ ತೆಲುಗು ಸಿನಿಮಾಗಳಿಗೆ ಮಾತ್ರ ಆದ್ಯತೆ ನೀಡಬೇಕು' ಎಂದು ಹೇಳಿದೆ. ಆದರೆ ಇದಕ್ಕೆ ತೆಲುಗಿನ ಸಿನಿಮಾ ನಿರ್ಮಾಪಕ, ನಟ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ. 'ಇದು ಆಗೋ ಕೆಲಸ ಅಲ್ಲ...' ಎಂದು ಕುಟುಕಿದ್ದಾರೆ.
ಅಲ್ಲು ಅರವಿಂದ್ ಹೇಳಿದ್ದೇನು?
ಹಿಂದಿಯಲ್ಲಿ ತೆರೆಗೆ ಬರುತ್ತಿರುವ 'ಭೇಡಿಯಾ' ಸಿನಿಮಾವನ್ನು ತೆಲುಗಿನಲ್ಲಿ 'ತೊಡೆಲು' ಎಂದು ಡಬ್ ಮಾಡಿ, ರಿಲೀಸ್ ಮಾಡುತ್ತಿದ್ದಾರೆ ಅಲ್ಲು ಅರವಿಂದ್. ಈಚೆಗೆ ಸಕ್ಸಸ್ ಆಗಿರುವ 'ಕಾಂತಾರ' ಸಿನಿಮಾವನ್ನು ತೆಲುಗಿನಲ್ಲಿ ರಿಲೀಸ್ ಯಶಸ್ಸು ಕಂಡಿರುವ ಅಲ್ಲು ಅರವಿಂದ್, ಈಗ 'ಭೇಡಿಯಾ' ಸಿನಿಮಾವನ್ನು ದೊಡ್ಡಮಟ್ಟದಲ್ಲಿ ತೆರೆಗೆ ತರಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇದರ ಪ್ರೆಸ್‌ಮೀಟ್‌ನಲ್ಲಿ ತೆಲುಗು ಚಿತ್ರ ನಿರ್ಮಾಪಕರ ಮಂಡಳಿಯ ನಿರ್ಧಾರದ ಬಗ್ಗೆ ಪ್ರಶ್ನೆ ಕೇಳಿಬಂತು. ಅದಕ್ಕೆ ಉತ್ತರಿಸಿದ ಅಲ್ಲು ಅರವಿಂದ್, 'ಇದು ಆಗೋ ಕೆಲಸ ಅಲ್ಲ...' ಎಂದರು.

ದಿಲ್ ರಾಜುಗೆ ಸಂಕಷ್ಟ!
ಖ್ಯಾತ ನಿರ್ಮಾಪಕ ದಿಲ್ ರಾಜು ಕೆಲವು ವರ್ಷಗಳ ಹಿಂದೆ ಹೇಳಿದ್ದ, ‘ಹಬ್ಬದ ಸೀಸನ್‌ನ ಪ್ರಯೋಜನವನ್ನು ಡಬ್ಬಿಂಗ್ ಸಿನಿಮಾಗಳು ಮಾತ್ರ ಪಡೆದುಕೊಳ್ಳುತ್ತಿದ್ದು, ಡಬ್ಬಿಂಗ್ ಸಿನಿಮಾಗಳಿಗೆಯೇ ಹೆಚ್ಚಿನ ಚಿತ್ರಮಂದಿರಗಳನ್ನು ನೀಡಲಾಗುತ್ತಿದೆ. ಈ ಸಮಯದಲ್ಲಿ ಕೇವಲ ತೆಲುಗು ಸಿನಿಮಾಗಳಿಗೆ ಮಾತ್ರ ಆದ್ಯತೆ ನೀಡಿ, ಆಮೇಲೆ ಸ್ಪೇಸ್ ಮಿಕ್ಕಿದ್ದರೆ ಮಾತ್ರ ತೆಲುಗು ಡಬ್ಬಿಂಗ್ ಸಿನಿಮಾಗೆ ಕೊಡಬೇಕು’ ಎಂಬ ಮಾತನ್ನು ಉಲ್ಲೇಖಿಸಿರುವ ತೆಲುಗು ಚಿತ್ರ ನಿರ್ಮಾಪಕರ ಮಂಡಳಿ, ಈ ರೂಲ್ಸ್ ಮಾಡಿದೆ. ಆದರೆ ಈ ನಿಯಮ ಜಾರಿಯಾದರೆ ಮೊದಲು ತೊಂದರೆ ಅನುಭವಿಸುವುದು ದಿಲ್ ರಾಜು!
'ದಳಪತಿ' ವಿಜಯ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಕಾಲಿವುಡ್‌ನ ‘ವಾರಿಸು’ಸಿನಿಮಾವನ್ನು ದಿಲ್ ರಾಜು ನಿರ್ಮಿಸಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ ಸಂಕ್ರಾಂತಿ ಹಬ್ಬಕ್ಕೆ ಈ ಸಿನಿಮಾವನ್ನು ರಿಲೀಸ್ ಮಾಡುವುದು ದಿಲ್ ರಾಜು ಪ್ಲ್ಯಾನ್. ಆದರೆ 'ವಾರಿಸು' ತಮಿಳಿನಲ್ಲಿ ತಯಾರಾಗಿ, ತೆಲುಗಿಗೆ 'ವಾರಸುಡು' ಎಂದು ಡಬ್ ಆಗಿದೆ. ಇದು ಡಬ್ ಸಿನಿಮಾವಾಗಿರುವುದರಿಂದ ಟಾಲಿವುಡ್‌ನಲ್ಲಿ ರಿಲೀಸ್ ಮಾಡಲ ದಿಲ್ ರಾಜುಗೆ ಕಷ್ಟವಾಗಬಹುದು. ಆದರೆ ಅಲ್ಲು ಅರವಿಂದ್ ಅವರಂತಹ ದೊಡ್ಡ ನಿರ್ಮಾಪಕರೇ ಇದು ಆಗೋ ಕೆಲಸ ಅಲ್ಲ ಎಂದು ಕಾಮೆಂಟ್ ಮಾಡಿರುವುದರಿಂದ, ದಿಲ್ ರಾಜುಗೆ ದೊಡ್ಡ ಸಪೋರ್ಟ್ ಸಿಕ್ಕಂತೆಯೇ ಆಗಿದೆ. ಮುಂದಿನ ದಿನಗಳಲ್ಲಿ ಇದು ಯಾವ ರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕು.
ತೆಲುಗು ಸಿನಿಮಾಗಳ ಹೆಚ್ಚುತ್ತಿರುವ ನಿರ್ಮಾಣ ವೆಚ್ಚ, ನಿರ್ಮಾಪಕರ ಕ್ಷೇಮಾಭಿವೃದ್ಧಿ ಮತ್ತು ತೆಲುಗು ಚಿತ್ರೋದ್ಯಮವನ್ನು ಉಳಿಸುವ ಉದ್ದೇಶದಿಂದ ‘ಸಂಕ್ರಾಂತಿ ಮತ್ತು ದಸರಾಗೆ ಕೇವಲ ಮೂಲ ತೆಲುಗು ಸಿನಿಮಾಗಳಿಗೆ ಮಾತ್ರ ಆದ್ಯತೆ ನೀಡಬೇಕು’ ಎಂಬ ನಿರ್ಣಯವನ್ನು ಟಾಲಿವುಡ್ ನಿರ್ಮಾಪಕರ ಮಂಡಳಿ ಕೈಗೊಂಡಿತ್ತು.
Kantara Telugu Movie Distributor Allu Aravind Speaks About Telugu Cinema Dubbing Issue.
13-12-25 08:38 pm
HK News Desk
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
ಅಧಿವೇಶನ ಮುಗಿದ ತಕ್ಷಣವೇ ಡಿಕೆಶಿ ಮುಖ್ಯಮಂತ್ರಿಯಾಗುತ...
12-12-25 03:18 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 04:36 pm
Mangalore Correspondent
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
Mangalore Jail Inmate, Death: ಎದೆನೋವು ; ಉಡುಪಿ...
11-12-25 10:55 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm