ಬ್ರೇಕಿಂಗ್ ನ್ಯೂಸ್
19-11-22 12:08 pm Source: Vijayakarnataka ಸಿನಿಮಾ
ರತ್ನನ್ ಪ್ರಪಂಚ ಸಿನಿಮಾದಲ್ಲಿ ಉಡಾಳ್ ಬಾಬು ಪಾತ್ರದಲ್ಲಿ ನಟಿಸಿದ್ದ ಪ್ರಮೋದ್ ಸದ್ಯ ಸ್ಯಾಂಡಲ್ವುಡ್ನ ಬಿಝಿ ನಟರಲ್ಲಿ ಒಬ್ಬರು. ಈ ಪಾತ್ರ ಪ್ರಮೋದ್ ಅವರಿಗೆ ಬಿಗ್ ಬಜೆಟ್ ಸಿನಿಮಾವಾದ ‘ಸಲಾರ್’ ಚಿತ್ರದಲ್ಲಿ ನಟಿಸುವ ಅವಕಾಶ ತಂದುಕೊಟ್ಟಿದೆ. ಹೌದು, ಪ್ರಮೋದ್ ಈಗ ‘ಸಲಾರ್’ ಸಿನಿಮಾದಲ್ಲಿವಿಶೇಷ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.
ಕಿರುತೆರೆಯಲ್ಲಿ ಜನಪ್ರಿಯರಾಗಿದ್ದ ಪ್ರಮೋದ್ ‘ಗೀತಾ ಬ್ಯಾಂಗಲ್ ಸ್ಟೋರ್ಸ್’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದರು. ‘ಪ್ರೀಮಿಯರ್ ಪದ್ಮಿನಿ’ ಸಿನಿಮಾದಲ್ಲಿಅದ್ಭುತವಾದ ಪಾತ್ರದಲ್ಲಿ ನಟಿಸಿದ್ದರು. ಈಗ ಅವರು ‘ಸಲಾರ್’ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

‘ರತ್ನನ್ ಪ್ರಪಂಚ ಸಿನಿಮಾ ನೋಡಿ ಪ್ರಶಾಂತ್ ನೀಲ್ ಅವರು ಕರೆ ಮಾಡಿದ್ದರು. ನನ್ನ ನಟನೆಯ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಜತೆಗೆ ‘ಸಲಾರ್’ ಸಿನಿಮಾದಲ್ಲಿ ಒಂದು ಪಾತ್ರವಿದೆ ಎಂದು ಹೇಳಿದ್ದರು. ಇದಾಗಿ ಎಷ್ಟೋ ದಿನಗಳ ನಂತರ ಫೋಟೊ ಶೂಟ್ ಮುಗಿಸಿದೆ. ನನ್ನ ಪಾತ್ರದ ಬಗ್ಗೆ ಹೇಳಲಾಗುವುದಿಲ್ಲ, ಆದರೆ ಬಹಳ ವಿಭಿನ್ನವಾಗಿರುವ ಪಾತ್ರವದು. ನನ್ನ ನಟನೆ ಕಂಡು ನೀಲ್ ಅವರು ಖುಷಿಯಿಂದ ಬಹಳ ಚೆನ್ನಾಗಿ ನಟಿಸುತ್ತಿದ್ದೀರಾ ಎಂದರು. ಅಷ್ಟು ದೊಡ್ಡ ನಿರ್ದೇಶಕರ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದೇ ನನ್ನ ಅದೃಷ್ಟ. ಅದರಲ್ಲೂನನ್ನ ನಟನೆಯನ್ನು ಅವರು ಹೊಗಳುವುದೆಂದರೆ ನನಗಿಂತ ಅದೃಷ್ಟವಂತ ಇನ್ನೊಬ್ಬನಿಲ್ಲ ಎನಿಸಿತು’ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ನಟ ಪ್ರಮೋದ್.

‘ಸಲಾರ್ ಜತೆಗೆ ನಾನು ನಾಯಕನಾಗಿರುವ ‘ಬಾಂಡ್ ರವಿ’ ಸಿನಿಮಾದ ಚಿತ್ರೀಕರಣ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಸದ್ಯದಲ್ಲೇ ರಿಲೀಸ್ ದಿನಾಂಕವನ್ನು ಅನೌನ್ಸ್ ಮಾಡಲಿದ್ದೇವೆ. ಇದೊಂದು ಬಹಳ ಒಳ್ಳೆಯ ಕಥೆ ಇರುವಂತಹ ಪಾತ್ರ. ನಿರ್ದೇಶಕ ಪ್ರಜ್ವಲ್ ಅವರು ಕಥೆ ಬರೆದುಕೊಂಡಿರುವ ರೀತಿ, ಅದನ್ನು ತೆರೆಮೇಲೆ ತಂದಿರುವುದು ಎಲ್ಲವೂ ವಿಶೇಷವಾಗಿವೆ. ಕಥೆ ಕೇಳುವಾಗ ನನಗೆ ಏನು ಫೀಲ್ ಆಯಿತೋ ಅದು ಪ್ರೇಕ್ಷಕರಿಗೂ ಆಗುತ್ತದೆ ಎಂಬುದು ನನ್ನ ಅಚಲವಾದ ನಂಬಿಕೆ’ ಎನ್ನುವುದು ಪ್ರಮೋದ್ ಅವರ ಮಾತು.
‘ಸಲಾರ್’ನಲ್ಲಿ ಪ್ರಭಾಸ್ ಮತ್ತು ಪೃಥ್ವಿರಾಜ್ ಅವರ ಜತೆಯೇ ಇರುವಂತಹ ಪಾತ್ರದಲ್ಲಿ ಪ್ರಮೋದ್ ನಟಿಸಿದ್ದಾರೆ. ‘ರತ್ನನ್ ಪ್ರಪಂಚ’ ರೀತಿ ‘ಸಲಾರ್’ನಲ್ಲಿಯೂ ಅವರು ನಿರಂತರವಾಗಿ ಮಾತನಾಡುತ್ತಿರುತ್ತಾರಂತೆ. ಪ್ರಮೋದ್ ಅವರ ನಟನೆಯನ್ನು ಕಂಡು ನಿರ್ದೇಶಕ ಪ್ರಶಾಂತ್ ನೀಲ್ ಅವರ ಪಾತ್ರವನ್ನು ಕೊಂಚ ವಿಸ್ತರಣೆ ಮಾಡಿದ್ದಾರಂತೆ. ಒಂದಷ್ಟು ಹೆಚ್ಚಿನ ಸಂಭಾಷಣೆಗಳನ್ನು ಬರೆದುಕೊಂಡಿದ್ದಾರಂತೆ.
Actor Pramod Joins Prashanth Neel And Prabhas Salaar Movie Team.
13-12-25 08:38 pm
HK News Desk
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
ಅಧಿವೇಶನ ಮುಗಿದ ತಕ್ಷಣವೇ ಡಿಕೆಶಿ ಮುಖ್ಯಮಂತ್ರಿಯಾಗುತ...
12-12-25 03:18 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 04:36 pm
Mangalore Correspondent
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
Mangalore Jail Inmate, Death: ಎದೆನೋವು ; ಉಡುಪಿ...
11-12-25 10:55 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm