ಬ್ರೇಕಿಂಗ್ ನ್ಯೂಸ್
17-11-22 02:19 pm Source: Vijayakarnataka ಸಿನಿಮಾ
ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯ ನಿರ್ದೇಶಕ ಮತ್ತು ನಟರ ಕಾಂಬಿನೇಶನ್ ಚಿತ್ರಗಳು ಹೆಚ್ಚುತ್ತಿವೆ. ಈ ಸಾಲಿಗೆ ಮತ್ತೊಂದು ಹೊಸ ಸಿನಿಮಾ ಸೇರ್ಪಡೆಯಾಗಿದೆ.ಒಬ್ಬ ನಿರ್ದೇಶಕ ಒಬ್ಬ ನಟನೊಂದಿಗೆ ಎರಡನೇ ಬಾರಿ ಕೆಲಸ ಮಾಡುತ್ತಿದ್ದಾರೆ ಎಂದರೆ, ಆ ನಿರ್ದೇಶಕನ ಮೇಲೆ ನಟನಿಗೆ ಹೆಚ್ಚಿನ ನಂಬಿಕೆ ಇದೆ ಎಂದರ್ಥ. ಇದು ಸೂಪರ್ ಹಿಟ್ ಸಿನಿಮಾಗಳಿಗೂ ನಾಂದಿಯಾಗುತ್ತದೆ. ಕನ್ನಡದಲ್ಲಿ ಈಗಾಗಲೇ ನಿರ್ದೇಶಕ ಮತ್ತು ನಟನ ಹಲವು ಸೂಪರ್ ಹಿಟ್ ಕಾಂಬಿನೇಶನ್‌ಗಳಿವೆ. ಈಗ ನಿರ್ದೇಶಕ ಲೋಹಿತ್ ಮತ್ತು ನಟ ಪ್ರಜ್ವಲ್ ದೇವರಾಜ್ ಈ ಸೂಪರ್ ಹಿಟ್ ಕಾಂಬಿನೇಶನ್ ಸಾಲಿಗೆ ಸೇರುವ ಸಾಧ್ಯತೆ ಇದೆ.
ಈ ಹಿಂದೆ ಇವರಿಬ್ಬರು ಜತೆಯಾಗಿ 'ಮಾಫಿಯಾ' ಸಿನಿಮಾ ಮಾಡಿದ್ದು, ಅವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವಾಗಲೇ ಕನ್ನಡದ ಮೊದಲ ಹಾರರ್ ಟೈಮ್ ಲೂಪ್ ಸಿನಿಮಾಗಾಗಿ ಇವರು ಒಂದಾಗಿದ್ದಾರೆ. ಮಮ್ಮಿ ಸಿನಿಮಾ ಮೂಲಕ ಹೆಸರು ಮಾಡಿರುವ ಲೋಹಿತ್ ಅತಿ ಚಿಕ್ಕ ವಯಸ್ಸಿಗೆ ಯಶಸ್ವಿ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ಅವರೀಗ 'ಮಾಫಿಯಾ' ಸಿನಿಮಾದಲ್ಲಿ ಬಿಝಿಯಾಗಿದ್ದು, ಇದರ ನಡುವೆ ನಟ ಪ್ರಜ್ವಲ್ ದೇವರಾಜ್‌ರಿಗೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ.
'ಮಾಫಿಯಾ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಚರ್ಚೆಯಲ್ಲಿದ್ದಾಗ ಈ ಸಿನಿಮಾ ಸಬ್ಜೆಕ್ಟ್ ಬಗ್ಗೆ ಹೇಳಿದೆ. ಪ್ರಜ್ವಲ್ ಬಹಳ ಇಷ್ಟಪಟ್ಟು ನಟಿಸುತ್ತೇನೆ ಎಂದರು. ಜತೆಗೆ ನನ್ನ ವರ್ಕಿಂಗ್ ಸ್ಟೈಲ್ ಅವರಿಗೆ ಇಷ್ಟವಾಗಿದೆ. ಇದು ಪಕ್ಕಾ ಕಮರ್ಷಿಯಲ್ ಸಿನಿಮಾ ಮತ್ತು ಹಾರರ್ ಟೈಮ್ ಲೂಪ್. ಇದರಲ್ಲಿ ಪ್ರಜ್ವಲ್ ಲುಕ್ಸ್ ಸೇರಿದಂತೆ ಹಲವು ವಿಶೇಷತೆಗಳಿವೆ. ಅಚಿಂತ್ಯ ಮತ್ತು ಶಾನ್ವಿ ಎಂಬವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ' ಎಂದು ಹೇಳಿದ್ದಾರೆ ನಿರ್ದೇಶಕ ಲೋಹಿತ್.
'ಮಾಫಿಯಾ ಸಿನಿಮಾದ ಸಮಯದಲ್ಲಿಯೇ ನಿರ್ದೇಶಕ ಲೋಹಿತ್ ಸಾಮರ್ಥ್ಯದ ಬಗ್ಗೆ ನನಗೆ ಗೊತ್ತಾಯಿತು. ಹೊಸ ಸಿನಿಮಾದ ಕಥೆ ನನಗೆ ಬಹಳ ಥ್ರಿಲ್ಲಿಂಗ್ ಎನಿಸಿತು. ಲೋಹಿತ್ ಒಳ್ಳೆಯ ತಂತ್ರಜ್ಞ. ಈ ಸಿನಿಮಾದಲ್ಲಿ ಟೈಮ್ ಲೂಪ್ ಜತೆಗೆ ಹಾರರ್ ಕಂಟೆಂಟ್ ಇರುವ ಕಾರಣ ಪ್ರೇಕ್ಷಕರಿಗೂ ಇದು ಥ್ರಿಲ್ಲಿಂಗ್ ಎನಿಸುತ್ತದೆ. ಸದ್ಯಕ್ಕೆ ಈ ಸಿನಿಮಾದ ಒನ್‌ಲೈನ್ ಮಾತ್ರ ಹೇಳಿದ್ದಾರೆ' ಎಂದಿದ್ದಾರೆ ನಟ ಪ್ರಜ್ವಲ್ ದೇವರಾಜ್. 'ಮಾಫಿಯಾ' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದ ಮೇಲೆ ಡಿಸೆಂಬರ್‌ನಲ್ಲಿ ಈ ಸಿನಿಮಾ ಆರಂಭವಾಗಲಿದೆ. ಹೊಸ ಸಿನಿಮಾಗೆ ನಾಬಿನ್ ಪೌಲ್ ಸಂಗೀತ ನೀಡಲಿದ್ದು, ರವಿಚಂದ್ರನ್ ಸಂಕಲನ ಮಾಡಲಿದ್ದಾರೆ. ಜಬೀನ್ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಲಿದ್ದಾರೆ.
Lohith And Prajwal Devaraj Join Hands For Another Movie.
13-12-25 08:38 pm
HK News Desk
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
ಅಧಿವೇಶನ ಮುಗಿದ ತಕ್ಷಣವೇ ಡಿಕೆಶಿ ಮುಖ್ಯಮಂತ್ರಿಯಾಗುತ...
12-12-25 03:18 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 04:36 pm
Mangalore Correspondent
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
Mangalore Jail Inmate, Death: ಎದೆನೋವು ; ಉಡುಪಿ...
11-12-25 10:55 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm