ಬ್ರೇಕಿಂಗ್ ನ್ಯೂಸ್
11-11-22 02:35 pm Source: Vijayakarnataka ಸಿನಿಮಾ
ಕ್ರಿಸ್‌ಮಸ್ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಜಗತ್ತಿನೆಲ್ಲೆಡೆ ಹಬ್ಬಕ್ಕೆ ಸಿದ್ಧತೆ ಜೋರಾಗಿದೆ. ಮೈಸೂರಿನಲ್ಲಿ ಕ್ರಿಸ್‌ಮಸ್ ಹಬ್ಬಕ್ಕೆ ಸಕಲ ತಯಾರಿ ಮಾಡಿಕೊಳ್ಳಲಾಗ್ತಿದ್ದು, ಪ್ರತಿಷ್ಠಿತ ಹೋಟೆಲ್ ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ನಲ್ಲಿ ಕೇಕ್ ತಯಾರಿಕೆಗೆ ಚಾಲನೆ ನೀಡಲಾಗಿದೆ. ಮೈಸೂರಿನಲ್ಲಿ ನಡೆದ ಕ್ರಿಸ್‌ಮಸ್ ಕೇಕ್ ಮಿಕ್ಸಿಂಗ್ ಸಮಾರಂಭದಲ್ಲಿ ಬಹುಭಾಷಾ ಖ್ಯಾತ ನಟ ಪ್ರಭುದೇವ ( Prabhu Deva ) ಭಾಗಿಯಾಗಿದ್ರು.
ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ನಡೆದ ಕ್ರಿಸ್ ಮಸ್ ಕೇಕ್ ಮಿಕ್ಸಿಂಗ್ ಸಮಾರಂಭದಲ್ಲಿ ಈ ಬಾರಿ ನಟ ಪ್ರಭುದೇವ ಭಾಗಿಯಾಗಿದ್ರು. ವಿವಿಧ ಬಗೆಯ ಡ್ರೈ ಫ್ರುಟ್ಸ್‌ಗಳನ್ನು ಮಾತ್ರ ಮಿಕ್ಸ್ ಮಾಡಿದ ನಟ ಪ್ರಭುದೇವ ಎಲ್ಲರ ಗಮನಸೆಳೆದರು. ಆಲ್ಕೋಹಾಲ್ ಮಿಶ್ರಿತ ವೈನ್ ಮಿಕ್ಸಿಂಗ್ ಮಾಡದ ನಟ ಪ್ರಭುದೇವ ಮಿಕ್ಸಿಂಗ್‌ನಿಂದ ದೂರ ಉಳಿದರು.
ಆಲ್ಕೋಹಾಲ್ ಮಿಶ್ರಿತ ಮದ್ಯದ ಬಾಟಲಿಗಳನ್ನು ಮುಟ್ಟದೇ ಸುಮ್ಮನೇ ನೋಡುತ್ತಾ ನಿಂತ ನಟ ಪ್ರಭುದೇವ ಕೇಕ್ ಮಿಕ್ಸಿಂಗ್ ನೋಡಿ ಖುಷಿಪಟ್ಟರು .ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಮಾಲೀಕ ಹಾಗು ವಿಧಾನ ಪರಿಷತ್ ನ ಮಾಜಿ ಸದಸ್ಯ ಸಂದೇಶ್ ನಾಗರಾಜ್ ಹಾಗು ಅವರ ಪುತ್ರ ಸೇರಿದಂತೆ ಕುಟುಂಬ ಸದಸ್ಯರು, ಹೋಟೆಲ್‌ನ ಸಿಬ್ಬಂದಿಗಳು ಕ್ರಿಸ್‌ಮಸ್ ಕೇಕ್ ಮಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ರು.
ಕೇಕ್ ಮಿಕ್ಸಿಂಗ್ ಸಮಾರಂಭ ಮುಗಿಯುತ್ತಿದ್ದಂತೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಟ ಪ್ರಭುದೇವ ನಿರಾಕರಣೆ ಮಾಡಿದ್ರು. ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಪ್ರಭುದೇವ ಹೋಟೆಲ್‌ನಿಂದ ನಿರ್ಗಮಿಸಿದರು.
ಸಾಲು ಸಾಲು ಸಿನಿಮಾದಲ್ಲಿ ಪ್ರಭು ಬ್ಯುಸಿ..!
ಸಂದೇಶ್ ನಾಗರಾಜ್ ನಿರ್ಮಾಣದ ಉಲ್ಫ್ ತಮಿಳು ಚಿತ್ರದಲ್ಲಿ ನಟ ಪ್ರಭುದೇವ ನಾಯಕನಾಗಿ ನಟಿಸುತ್ತಿದ್ದಾರೆ. ಉಲ್ಫ್ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಹಾಗಾಗಿ ಪ್ರಭುದೇವ ಕುಟುಂಬ ಸದಸ್ಯರನ್ನು ನೋಡಲು ಮೈಸೂರಿಗೆ ಬರುವ ವಿಚಾರ ತಿಳಿದು ಈ ಬಾರಿಯ ಕ್ರಿಸ್ ಮಸ್ ಕೇಕ್ ಮಿಕ್ಸಿಂಗ್‌ಗೆ ಅವರನ್ನೇ ಆಹ್ವಾನಿಸಲಾಗಿತ್ತು. ನಟ ಪ್ರಭುದೇವ ನಟನೆಯ ಉಲ್ಫ್ ತಮಿಳುಚಿತ್ರದ ಜೊತೆ ಜೊತೆಗೆ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಟಿಸುತ್ತಿರುವ ಘೋಸ್ಟ್ ಕನ್ನಡ ಚಿತ್ರದ ಚಿತ್ರೀಕರಣವು ನಡೆಯುತ್ತಿದೆ. ಇದು ಕೂಡ ಸಂದೇಶ್ ನಾಗರಾಜ್ ಅವರೇ ನಿರ್ಮಿಸುತ್ತಿದ್ದಾರೆ.
ರಾಜಕೀಯದಿಂದ ಸಂದೇಶ್ ನಾಗರಾಜ್ ದೂರ.!
ಸದ್ಯ ಸಂದೇಶ್ ನಾಗರಾಜ್ ರಾಜಕೀಯದಿಂದ ದೂರ ಇದ್ದಾರೆ. ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಒಟ್ಟೊಟ್ಟಿಗೆ 2-3ಸಿನಿಮಾಗಳನ್ನ ನಿರ್ಮಾಣ ಮಾಡ್ತಿದ್ದಾರೆ. ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ.
Prabhudeva Joins Cake Mixing Ceremony At Mysuru.
13-12-25 08:38 pm
HK News Desk
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
ಅಧಿವೇಶನ ಮುಗಿದ ತಕ್ಷಣವೇ ಡಿಕೆಶಿ ಮುಖ್ಯಮಂತ್ರಿಯಾಗುತ...
12-12-25 03:18 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 04:36 pm
Mangalore Correspondent
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
Mangalore Jail Inmate, Death: ಎದೆನೋವು ; ಉಡುಪಿ...
11-12-25 10:55 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm