ಬ್ರೇಕಿಂಗ್ ನ್ಯೂಸ್
10-11-22 12:03 pm Source: Vijayakarnataka ಸಿನಿಮಾ
'ಉತ್ತರಕಾಂಡ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಮ್‌ಬ್ಯಾಕ್ ಮಾಡುತ್ತಿರುವ ನಟಿ ರಮ್ಯಾ ಈಗ ಧನುಷ್ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.ಹದಿನೈದು ವರ್ಷಗಳ ಹಿಂದೆ ಧನುಷ್ ಜೊತೆ ‘ಪೊಲ್ಲಾಧವನ್’ ಸಿನಿಮಾ ಮಾಡಿದ್ದರು. ಅದರ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಸಿನಿಮಾ ಟೀಮ್ ಚೆನ್ನೈಯಲ್ಲಿಒಟ್ಟಾಗಿ ಸೇರಿಕೊಂಡು ಕೇಕ್ ಕತ್ತರಿಸಿ ಸಂಭ್ರಮಿಸಿದೆ. ಆ ಫೋಟೋಗಳನ್ನು ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಆ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ವೆಟ್ರಿಮಾರನ್ ನಿರ್ದೇಶನ ಮಾಡಿದ್ದರು.
‘ಪೊಲ್ಲಾಧವನ್ ನೆನಪಿನಲ್ಲಿನಾನು ಹಲವು ವರ್ಷಗಳ ಗೆಳೆಯನನ್ನು ಭೇಟಿಯಾದೆ. ಅಲ್ಲದೇ, ನಾನು ಮೆಚ್ಚುವ ಪ್ರತಿಭಾವಂತ ನಿರ್ದೇಶಕರನ್ನು ಭೇಟಿಯಾದದ್ದು ಖುಷಿ ತಂದಿತು. ನನ್ನನ್ನು ಈ ಸಿನಿಮಾಗೆ ಧನುಷ್ ಅವರೇ ರೆಫರ್ ಮಾಡಿದ್ದರು. ಈ ತಂಡದಿಂದ ನಾನು ಸಾಕಷ್ಟು ಕಲಿತಿದ್ದೇನೆ. ಮತ್ತೊಂದು ವಿಷಯ ಹೇಳುವುದೆಂದರೆ, ನಾನು ‘ಪೊಲ್ಲಾಧವನ್ 2’ ಚಿತ್ರಕ್ಕಾಗಿ ಕಾಯುತ್ತಿದ್ದೇನೆ’ ಎಂದು ರಮ್ಯಾ ಬರೆದುಕೊಂಡಿದ್ದಾರೆ. ಇದಕ್ಕೆ ಧನುಷ್ ಸಹ ಪ್ರತಿಕ್ರಿಯೆ ನೀಡಿದ್ದಾರೆ.
ಅಪ್ಪ ಕೊಟ್ಟ ಹಣದಲ್ಲಿ ಬೈಕ್ ಖರೀದಿ ಮಾಡಿದ ನಾಯಕನಿಗೆ ಅದರಿಂದಲೇ ಸಮಸ್ಯೆ ಉಂಟಾಗುತ್ತದೆ. ಯಾಕೆ? ಹೇಗೆ? ಎಂಬುದೇ ಈ ಸಿನಿಮಾದ ಒನ್‌ಲೈನ್ ಸ್ಟೋರಿ.
ಜಿ ವಿ ಪ್ರಕಾಶ್ ಅವರ ಸಂಗೀತ ಸಂಯೋಜನೆ ಇರುವ ಈ ಚಿತ್ರದ ಹಾಡುಗಳು ಹಿಟ್ ಆಗಿದ್ದವು. 2007 ನವೆಂಬರ್ 8ರಂದು ರಿಲೀಸ್ ಆಗಿದ್ದ ಈ ಚಿತ್ರ ಬೇರೆ ಬೇರೆ ಭಾಷೆಗಳಲ್ಲಿ ರಿಮೇಕ್ ಆಗಿದೆ.
'ಪೊಲ್ಲಾಧವನ್' ಚಿತ್ರಕ್ಕೆ ರಮ್ಯಾ 15ನೇ ಹೀರೋಯಿನ್ ಆಗಿದ್ರು
ಈ ಹಿಂದೆ ಧನುಷ್, ವೆಟ್ರಿಮಾರನ್‌ರನ್ನು ರಮ್ಯಾ ಭೇಟಿ ಮಾಡಿರಲಿಲ್ಲ
ಫೋನ್‌ನಲ್ಲಿ ಸಿನಿಮಾ ಕಥೆ ಕೇಳಿ ಒಪ್ಪಿಕೊಂಡಿದ್ದ ರಮ್ಯಾ
ಪೊಲ್ಲಾಧವನ್ 2 ಚಿತ್ರಕ್ಕಾಗಿ ಕಾಯುತ್ತಿರುವ ರಮ್ಯಾ
Actress Ramya Dhanush Vetrimaaran Reunite For Completing 15 Years Of Polladhavan Movie.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
01-05-25 05:38 pm
Mangalore Correspondent
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
Mangalore Kudupu Murder Case, Police Suspende...
01-05-25 12:23 pm
Congress Harish Kumar, Kudupu Murder case, Ma...
30-04-25 11:26 pm
Kudupu Murder Case, SDPI, Ravindra Nayak: ಗುಂ...
30-04-25 11:07 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am