ಬ್ರೇಕಿಂಗ್ ನ್ಯೂಸ್
29-10-22 02:26 pm Source: Vijayakarnataka ಸಿನಿಮಾ
ಪುನೀತ್ ರಾಜ್‌ಕುಮಾರ್ ( Puneeth Rajkumar ) ನಿಧನರಾಗಿ ಇಂದು ಒಂದು ವರ್ಷ. ಇದು ಸುಳ್ಳಾಗಲಿ, ಸಿನಿಮಾ ರೀತಿ ಅಪ್ಪು ಪ್ರತ್ಯಕ್ಷ ಆಗಲಿ ಎಂದು ಕೋಟ್ಯಂತರ ಮಂದಿ ಆಶಿಸುತ್ತಿದ್ದಾರೆ. ಅಪ್ಪು ಇನ್ನಿಲ್ಲ ಎನ್ನೋದು ಇಂದು ಯಾರಿಗೂ ಅರಗಿಸಿಕೊಳ್ಳಲಾಗದ ಸ್ಥಿತಿಯಾಗಿದೆ. ಈ ವೇಳೆ ಅಪ್ಪು ನಾಲ್ಕು ವರ್ಷಗಳ ಹಿಂದೆ ಮಾಡಿದ್ದ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ಈಗಲೂ ಇದೇ ರೀತಿ ಮೆಸೇಜ್ ಕಳಿಸಿ ಎಂದು ಅವರ ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ.
2018ರಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ಅನಾರೋಗ್ಯವಾಗಿತ್ತು ಎಂದು ವದಂತಿ ಹಬ್ಬಿತ್ತು. ಆ ವೇಳೆ ಅವರು "ನಾನು ಹುಷಾರಾಗಿದೀನಿ, ಡೋಂಟ್ ವರಿ, ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು" ಎಂದು ಫೇಸ್‌ಬುಕ್ ಪೋಸ್ಟ್ ಹಂಚಿಕೊಂಡಿದ್ದರು. ಈಗ ಮತ್ತೆ ಈ ಪೋಸ್ಟ್ ಹಂಚಿಕೊಳ್ಳಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಏನಾದರೂ ಮ್ಯಾಜಿಕ್ ಆಗಲೀ, ಅಪ್ಪು ಕಣ್ಮುಂದೆ ಬರಲಿ ಎಂದು ಅಭಿಮಾನಿಗಳು ದೇವರಿಗೆ ಮೊರೆ ಇಡುತ್ತಿದ್ದಾರೆ.
ಅಪ್ಪು ನೆನಪುಗಳು ನಾಡಿನ ಜನತೆಯನ್ನು ಕಾಡುತ್ತಿವೆ. ಈ ಒಂದು ವರ್ಷ ಬೇಗ ಉರುಳಿದರೂ ಕೂಡ, ಕಣ್ಣೀರು ತುಂಬಿತ್ತು. ಅಪ್ಪು ಎಂದಕೂಡಲೇ ನಾಡಿನ ಜನತೆಯ ಕಣ್ಣಾಲೆ ಒದ್ದು ಆಗುವುದು. ಸತ್ತ ಮೇಲೂ ಕೂಡ ನಮ್ಮೆಲ್ಲರ ಮನದಲ್ಲಿ ಪುನೀತ್ ಜೀವಂತವಾಗಿದ್ದಾರೆ. ಬದುಕಿದ್ರೆ ಹೀಗೆ ಬದುಕಬೇಕು ಎಂದು ಅಪ್ಪು ತೋರಿಸಿಕೊಟ್ಟಿದ್ದಾರೆ.
ಅಪ್ಪು ಕನಸಿನ ಪ್ರಾಜೆಕ್ಟ್ ಅಕ್ಟೋಬರ್ 28ರಂದು ರಿಲೀಸ್ ಆಗಿದೆ, ಅದೇ 'ಗಂಧದ ಗುಡಿ'. ಇದರಲ್ಲಿ ಪುನೀತ್ ಅವರು 'ಮನೆಯಲ್ಲಿ ಹೆಂಡ್ತಿ ಮಕ್ಕಳು ಕಾಯ್ತಿರ್ತಾರೆ, ಮನೆಗೆ ಹೋಗ್ಬೇಕಪ್ಪಾ' ಎನ್ನುವ ಮಾತನ್ನು ಹೇಳುತ್ತಾರೆ. ಇದು ಸಿನಿಮೀಯ ಡೈಲಾಗ್ ಅಲ್ಲ. ಇದನ್ನು ಕೇಳಿದ ಜೀವಗಳು ಸಂಕಟಪಟ್ಟಿವೆ. ಕಾಡಿನಲ್ಲಿ, ಕನ್ನಡ ನಾಡಿನಲ್ಲಿ ಅಪ್ಪು ಜರ್ನಿ ಮಾಡಿದ್ದರು. ಅದನ್ನು ಸೆರೆಹಿಡಿಯಲಾಗಿತ್ತು. ಅದಕ್ಕೆ 'ಗಂಧದ ಗುಡಿ' ಎಂದು ಶೀರ್ಷಿಕೆ ನೀಡಲಾಗಿದೆ.
ಈ ಸಾಕ್ಷ್ಯಚಿತ್ರ ಮೊದಲ ಪ್ರದರ್ಶನ ಆರಂಭಗೊಳ್ಳುವ ಮುನ್ನ ಚಿತ್ರಮಂದಿರ ಎದುರು ಅಪ್ಪು..ಅಪ್ಪು.. ಅಪ್ಪು.. ಎಂಬ ಹರ್ಷೋದ್ಘಾರ ಅಭಿಮಾನಿಗಳು ಮೊಳಗಿಸಿದ್ದರು. ಗಂಧದಗುಡಿಗೆ ಜೈ, ಅಪ್ಪುಗೆ ಜೈ ಎನ್ನುವ ಘೋಷಣೆ ಕೇಳಿ ಬಂದವು. ಬಹುತೇಕ ಚಿತ್ರಮಂದಿರಗಳು ಹೌಸ್‌ಫುಲ್ ಎಂಬ ಬೋರ್ಡ್ ನೇತು ಹಾಕಿರುವ ದೃಶ್ಯ ಕಂಡು ಬಂದವು. ಚಿತ್ರಮಂದಿರಗಳ ಎದುರು ವೀಕ್ಷಕರ ದಂಡೇ ಹರಿದು ಬಂದಿತ್ತು. ಚಿತ್ರ ವೀಕ್ಷಣೆ ಬಳಿಕ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು. ಗಂಧದಗುಡಿ ಚಿತ್ರದಲ್ಲಿಅಪ್ಪು ಹಾಗೂ ಅಮೋಘವರ್ಷ ಕರುನಾಡಿನ ಒಡಲಾಳದ ಸೌಂದರ್ಯ, ವಿಸ್ಮಯ ಜಗತ್ತನ್ನೇ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, ಮಕ್ಕಳಿಗೆ ಚಿತ್ರ ತೋರಿಸಬೇಕು ಎನ್ನುತ್ತಿದ್ದರು ಪ್ರೇಕ್ಷಕರು.
ಗಂಧದಗುಡಿ ಮೂಲಕ ಪುನೀತ್‌ರಾಜಕುಮಾರ ನೆಲ, ಜಲ, ಕಾಡು, ಪ್ರಾಣಿ, ಪಕ್ಷಿಗಳ ಜೀವ ಸಂಕೋಲೆ ಉಳಿಸಬೇಕು ಎಂದು ಕರುನಾಡಿನ ಜನರಿಗೆ ಸಂದೇಶ ನೀಡಿದ್ದಾರೆ. ಆದರೂ ಅಭಿಮಾನಿಗಳ ಮನದಲ್ಲಿಅಪ್ಪು ಇಲ್ಲಎಂಬ ನೋವು ಮಾತ್ರ ಕಾಡುತ್ತಿರುವುದು ಕಂಡು ಬಂತು.
Fans Share Puneeth Rajkumar Old Tweet About His Health.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm