ಬ್ರೇಕಿಂಗ್ ನ್ಯೂಸ್
06-10-22 12:48 pm Source: Vijayakarnataka ಸಿನಿಮಾ
ಚಿತ್ರರಂಗದಲ್ಲಿ ಸಕ್ರಿಯರಾಗಿರುವಷ್ಟು ದಿನ ಸ್ಟಾರ್ ನಟಿಯಾಗಿದ್ದ ರಮ್ಯಾ ರಾಜಕೀಯಕ್ಕೆ ಹೋಗಿ ಕಲಾ ಪ್ರಪಂಚದಿಂದ ಕೊಂಚ ದೂರವಾಗಿದ್ದರು. ಕೆಲ ದಿನಗಳ ಹಿಂದೆಯಷ್ಟೇ ನಿರ್ಮಾಣ ಸಂಸ್ಥೆ ಆರಂಭಿಸಿ ಮತ್ತೆ ಸಕ್ರಿಯರಾಗಿರುವುದಾಗಿ ಹೇಳಿಕೊಂಡಿದ್ದರು. ಈಗ ಅವರ ಬ್ಯಾನರ್‌ನಿಂದ ಸಿನಿಮಾ ಅನೌನ್ಸ್ ಆಗಿದ್ದು, ಅದರಲ್ಲಿ ರಮ್ಯಾ ಅವರೇ ಮುಖ್ಯ ಪಾತ್ರದಲ್ಲಿನಟಿಸಲಿದ್ದಾರೆ.
ಹೌದು, ರಮ್ಯಾ ಯಾವಾಗ ನಟಿಸುತ್ತಾರೆ ಎಂದು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳುತ್ತಲೇ ಇದ್ದರು. ಅದಕ್ಕೆ ರಮ್ಯಾ ವಿಜಯ ದಶಮಿಯಂದು ಉತ್ತರ ನೀಡಿದ್ದು, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಿ ನಾಯಕರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಲವಲವಿಕೆ ಜತೆ ಮಾತನಾಡಿರುವ ರಮ್ಯಾ ಒಂದೊಳ್ಳೆ ಕಥೆಯ ಜತೆ ಚಿತ್ರರಂಗಕ್ಕೆ ವಾಪಾಸ್ಸಾಗುತ್ತಿರುವ ಬಗ್ಗೆ ಸಂತೋಷವಿದೆ ಎಂದಿದ್ದಾರೆ.
‘ನಾನು ರಾಜಕೀಯದಲ್ಲಿರುವಾಗಲೇ 'ಕೆಜಿಎಫ್', 'ದ್ವಿತ್ವ' ಹೀಗೆ ಹಲವು ಸಿನಿಮಾಗಳ ಆಫರ್ ಬಂದಿತ್ತು. 'ದ್ವಿತ್ವ' ಸಿನಿಮಾದ ಕಥೆಯನ್ನು ಕೇಳಿ ಇಷ್ಟಪಟ್ಟಿದ್ದೆ. ಆದರೆ ನಾನು ಮತ್ತು ಅಪ್ಪು ಇಬ್ಬರೂ ಒಟ್ಟಿಗೆ ತೆರೆ ಮೇಲೆ ಬರುತ್ತಿದ್ದೇವೆ ಎಂದಾಗ ಜನ ಬೇರೆ ರೀತಿಯ ಕಥೆಯನ್ನು ನಿರೀಕ್ಷೆ ಮಾಡುತ್ತಾರೆ ಎಂದು ಅದರಲ್ಲಿಯೂ ನಟಿಸಲಿಲ್ಲ. 'ಗರುಡ ಗಮನ ವೃಷಭ ವಾಹನ' ಸಿನಿಮಾ ಬಿಡುಗಡೆಯಾದ ಮೇಲೆ ರಾಜ್ ಅವರಿಗೆ ಕಂಗ್ರಾಟ್ಸ್ ಹೇಳಲು ಕಾಲ್ ಮಾಡಿದೆ. ಆಗ ಅವರು ನಾನು ನಿಮ್ಮ ಅಭಿಮಾನಿ ಎಂದು ಹೇಳಿದ್ದರು. ನನ್ನ ಬಳಿ ಒಂದು ಕಥೆ ಇದ್ದು, ಅದು ನಿಮಗೆ ಸೂಕ್ತವಾಗಿದೆ ಎಂದರು. ಆಗ ನಾನು ಮುಂದಿನ ದಿನಗಳಲ್ಲಿ ಕೇಳುತ್ತೇನೆ ಎಂದಿದ್ದೆ. ನಂತರ ನಾನು ಚಿತ್ರರಂಗಕ್ಕೆ ವಾಪಾಸ್ ಬರಬೇಕು ಎಂದುಕೊಂಡಾಗ ಒಂದಷ್ಟು ಕಥೆ ಕೇಳಿದೆ. ಜತೆಗೆ ರಾಜ್ ಅವರ ಕಥೆಯನ್ನು ಸಹ ಕೇಳಿ ಖುಷಿಯಾಯಿತು. ಉತ್ತಮ ಕಥೆ ಮಾಡಿಕೊಂಡಿದ್ದರು. ಅದರಲ್ಲಿ ನಾಯಕಿಗೆ ಪ್ರಮುಖ ಪಾತ್ರವನ್ನು ನೀಡಿದ್ದಾರೆ. ರಾಜ್ ಅವರ ಪಾತ್ರವೂ ಚೆನ್ನಾಗಿದೆ ಹೀಗೆ ಈ ಸಿನಿಮಾ ಆರಂಭವಾಯಿತು' ಎಂದು ಹೇಳಿದ್ದಾರೆ ರಮ್ಯಾ.
'ಈ ಸಿನಿಮಾಗೆ ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬ ಟೈಟಲ್ ಅನ್ನು ಸಹ ರಾಜ್ ಅವರೇ ಹುಡುಕಿಕೊಟ್ಟಿದ್ದಾರೆ. ವಿಭಿನ್ನ ಶೈಲಿಯ ಕಥಾ ನಿರೂಪಣೆ ಚಿತ್ರದಲ್ಲಿದೆ. ಇದೊಂದು ಸುಂದರವಾದ ಪ್ರೇಮ ಕಥೆಯಾಗಿದ್ದು, ಜತೆಗೆ ಮಹಿಳಾ ಪಾತ್ರದ ಮೂಲಕ ಒಂದಷ್ಟು ವಿಷಯಗಳನ್ನು ಹೇಳುತ್ತಿದ್ದೇವೆ. ಸಿನಿಮಾಟೋಗ್ರಫಿ, ಸಂಗೀತ ಹೀಗೆ ಎಲ್ಲವೂ ಬೇರೆ ರೀತಿಯಲ್ಲಿರುತ್ತದೆ. ಒಂದೊಳ್ಳೆ ಕಥೆಯ ಮೂಲಕ ನಾನು ನಟನೆಗೆ ವಾಪಾಸಾಗುತ್ತಿರುವುದು ಖುಷಿಯ ವಿಚಾರ’ ಎನ್ನುತ್ತಾರೆ ರಮ್ಯಾ. ಅಕ್ಟೋಬರ್‌ನಿಂದ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ಸದ್ಯಕ್ಕೆ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ.
'ನನ್ನ ಬ್ಯಾನರ್‌ನಲ್ಲಿ ಸ್ಪೋರ್ಟ್ಸ್ ಡ್ರಾಮಾ ಮತ್ತು ಇನ್ನೊಂದು ವಿಶೇಷ ಸಿನಿಮಾವನ್ನು ನಿರ್ಮಾಣ ಮಾಡುತ್ತೇನೆ. ದೊಡ್ಡ ದೊಡ್ಡ ಬ್ಯಾನರ್‌ಗಳಲ್ಲಿ ನಟನೆ ಮಾಡುತ್ತೇನೆ. ಸದ್ಯದಲ್ಲೇ ಅವೆಲ್ಲಾ ರಿವೀಲ್ ಆಗಲಿವೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಮೂಲಕ ಹೊಸ ರೀತಿಯ ಕಥೆಯನ್ನು ತೆರೆ ಮೇಲೆ ಹೇಳುತ್ತಿದ್ದೇವೆ. ಬಹಳ ಖುಷಿಯಿಂದ ಈ ಸಿನಿಮಾವನ್ನು ನಿರ್ಮಾಣ ಮಾಡಿ ನಟಿಸುತ್ತಿದ್ದೇನೆ. ನನ್ನ ಹಿಂದಿನ ಸಿನಿಮಾಗಳ ಎಲ್ಲಾ ಪಾತ್ರಕ್ಕಿಂತಲೂ ಈ ಸಿನಿಮಾದ ಪಾತ್ರ ಕೊಂಚ ವಿಭಿನ್ನವಾಗಿದೆ. ಮಹಿಳೆಯರ ಬಗ್ಗೆ ವಿಶೇಷವಾದ ವಿಷಯಗಳನ್ನು ಹೇಳುತ್ತಿದ್ದೇವೆ' ಎನ್ನುತ್ತಾರೆ ರಮ್ಯಾ.
Actress Ramya Speaks About Raj B Shettys Swathi Mutthina Male Haniye Movie.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm