ಬ್ರೇಕಿಂಗ್ ನ್ಯೂಸ್
04-10-22 02:51 pm Source: Vijayakarnataka ಸಿನಿಮಾ
ನಟ 'ಕಿಚ್ಚ' ಸುದೀಪ್ ಎಂಥ ಪ್ರತಿಭಾವಂತ ನಟ ಎಂಬುದು ಎಲ್ಲರಿಗೂ ಗೊತ್ತು. ಹೀರೋ, ವಿಲನ್.. ಪಾತ್ರ ಯಾವುದೇ ಆಗಿರಲಿ, ತೆರೆಮೇಲೆ ಆ ಪಾತ್ರವನ್ನು ಅದ್ಭುತವಾಗಿ ನಿಭಾಯಿಸುವ ಕಲೆ ಸುದೀಪ್‌ಗೆ ಸಿದ್ಧಿಸಿದೆ. ಅಂದಹಾಗೆ, ಸುದೀಪ್ ಕರಿಯರ್‌ಗೆ ತಿರುವು ಕೊಟ್ಟ ಸಿನಿಮಾಗಳಲ್ಲಿ ರಾಜಮೌಳಿ ನಿರ್ದೇಶನದ 'ಈಗ' ಕೂಡ ಒಂದು. ಅದರಲ್ಲಿ ಸುದೀಪ್ ವಿಲನ್ ಪಾತ್ರ ಮಾಡಿದ್ದರು. ಸದ್ಯ ಸುದೀಪ್ ಅವರ ನಟನಾಕೌಶಲ್ಯದ ಬಗ್ಗೆ ರಾಜಮೌಳಿ ಹಾಡಿ ಹೋಗಳಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ.
ಅಮೆರಿಕ ಪ್ರವಾಸದಲ್ಲಿರುವ ರಾಜಮೌಳಿ
ರಾಜಮೌಳಿ ಅವರ 'ಆರ್‌ಆರ್‌ಆರ್' ಸಿನಿಮಾದ ಪ್ರದರ್ಶನವು ಅಮೆರಿಕದಲ್ಲಿ ಈಚೆಗೆ ನಡೆಯಿತು. ಸದ್ಯ ಅಮೆರಿಕ ಪ್ರವಾಸದಲ್ಲಿರುವ ರಾಜಮೌಳಿ, ಅಲ್ಲಿ ಒಂದು ಸಂವಾದದಲ್ಲಿ ಭಾಗಿಯಾಗಿದ್ದರು. ಆಗ ರಾಜಮೌಳಿ ಅವರನ್ನು ಸಂದರ್ಶನ ಮಾಡುತ್ತಿದ್ದ ವ್ಯಕ್ತಿ, 'ಈಗ' ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಸುದೀಪ್ ಅವರ ನಟನೆ ಬಗ್ಗೆ ಅದ್ಭುತ ಮಾತುಗಳನ್ನಾಡುತ್ತಾರೆ. ಅಲ್ಲಿ ವಿಲನ್ ಪಾತ್ರ ಮಾಡಿರುವ ಸುದೀಪ್ ಎದುರು ಹೀರೋ ಕೂಡ ಇರುವುದಿಲ್ಲ. ಆದರೂ, ಅವರು ತಮ್ಮ ಪಾತ್ರವನ್ನು ಬಹಳ ಉತ್ತಮವಾಗಿ ನಿಭಾಯಿಸಿದ್ದಾರೆ, ಅದೊಂದು ಅದ್ಭುತ ಪ್ರದರ್ಶನ ಎಂದೆಲ್ಲ ಹೊಗಳಿದ್ದಾರೆ.

ಈ ಮಾತಿಗೆ ದನಿಗೂಡಿಸಿದ ರಾಜಮೌಳಿ, 'ಎದುರುಗಡೆ ಯಾರೂ ಇಲ್ಲದೇ ಇದ್ದರೂ, ಇದ್ದಾರೆ ಎಂಬ ಭಾವಿಸುವ ಬಗ್ಗೆ ನಾನು ಮಾತನಾಡುತ್ತೇನೆ. ನಾವು ಯಾರಾದರೊಬ್ಬರ ನಟಿಸುತ್ತಿದ್ದೇವೆ ಎಂದುಕೊಂಡು ನಟನೆ ಮಾಡುತ್ತಿರುತ್ತೇವೆ. ಒಂದು ವೇಳೆ ನೀವು ನನ್ನ ಎದುರಿಗೆ ಇಲ್ಲದೇ ಇದ್ದರೂ, ನೀವೇ ಇದ್ದೀರಾ ಎಂದುಕೊಂಡು ನಾನು ನಟಿಸಬಹುದು. ಬಹುಶಃ ಎಲ್ಲ ಕಲಾವಿದರು ಹಾಗೇ ಮಾಡುತ್ತಾರೆ. ಆದರೆ 'ಈಗ' ಆ ರೀತಿ ಇರುವುದಿಲ್ಲ. ಅಲ್ಲಿ ವಿಲನ್ ಎದುರು ಮತ್ತೊಬ್ಬ ನಟ ಇರುವುದಿಲ್ಲ. ಬರೀ ಒಂದು ನೋಣ ಇರುತ್ತದೆ. ಆದರೆ ಆ ನೋಣ ಕೂಡ ಶೂಟಿಂಗ್ ಮಾಡುವಾಗ ಇರುವುದಿಲ್ಲ. ಆ ನೋಣ ಏನೆಲ್ಲ ಮಾಡುತ್ತದ ಎಂಬುದನ್ನು ನಾನು ವಿವರಿಸುತ್ತೇನೆ. ನೀವು ಕಲ್ಪಿಸಿಕೊಳ್ಳಿ, ನಿಮ್ಮ ಸುತ್ತ ಒಂದು ನೋಣ ತೊಂದರೆ ಮಾಡುತ್ತಿದೆ. ಆದರೆ ನಿಮಗೆ ಅದು ಕಾಣಿಸೋಲ್ಲ. ಆದರೂ ನೀವು ನಟಿಸಬೇಕು ಮತ್ತು ಆ ನೋಣ ನೀವು ಊಹಿಸಿದಂತೆ ಇರುವುದಿಲ್ಲ. ಬದಲಿಗೆ ನಾನು ಊಹಿಸಿದಂತೆ ಇರುತ್ತದೆ. ಅದು ಮತ್ತಷ್ಟು ಕಠಿಣವಾದ ಟಾಸ್ಕ್ ಆಗಿರುತ್ತದೆ. ಇಂತಹ ಒಂದು ಪಾತ್ರವನ್ನು ಸುದೀಪ್ ಅದ್ಭುತವಾಗಿ ನಿಭಾಯಿಸಿದರು. ಬಹುಶಃ ನಿರ್ದೇಶಕರ ತಲೆಯಲ್ಲಿ ಏನಿದೆ ಎಂಬುದನ್ನು ಅರ್ಥ ಮಾಡಿಕೊಂಡು, ಆ ರೀತಿ ಕೆಲಸ ಮಾಡುವ ಶಕ್ತಿಯನ್ನು ಸುದೀಪ್ ಹೊಂದಿದ್ದಾರೆ' ಎಂದು ಹೇಳಿದ್ದಾರೆ.

ಬ್ಲಾಕ್ ಬಸ್ಟರ್ 'ಈಗ'
10 ವರ್ಷಗಳ ಹಿಂದೆ ತೆರೆಕಂಡ ಈಗ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸಂಚಲನವನ್ನೇ ಮಾಡಿತ್ತು. ಆ ಸಿನಿಮಾವನ್ನು 1 ಕೋಟಿ ಬಜೆಟ್‌ನಲ್ಲಿ ಮಾಡಬೇಕು ಎಂದು ರಾಜಮೌಳಿ ನಿರ್ಧಾರ ಮಾಡಿದ್ದರಂತೆ. ಕೊನೆಗೆ ಅದು 30 ಕೋಟಿ ರೂ. ದಾಟಿತ್ತು. ಆದರೆ ಅದರ ಕಲೆಕ್ಷನ್ ನೂರಾರು ಕೋಟಿ ಆಗಿತ್ತು. ಸುದೀಪ್ ವಿಲನ್ ಆಗಿ ಕಾಣಿಸಿಕೊಂಡರೆ, ನಾಯಕಿಯಾಗಿ ಸಮಂತಾ ಇದ್ದರು. ಚಿತ್ರದಲ್ಲಿ ನಾನಿ ಹೀರೋ ಆಗಿದ್ದರೂ, ಅವರು ತೆರೆಮೇಲೆ ಕಾಣಿಸಿಕೊಳ್ಳುವುದು 20 ನಿಮಿಷ ಮಾತ್ರ!
Rrr Director Rajamouli Appreciates Kiccha Sudeeps Performance In Eega Movie At Los Angeles.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm