ಬ್ರೇಕಿಂಗ್ ನ್ಯೂಸ್
30-09-22 02:01 pm Source: Vijayakarnataka ಸಿನಿಮಾ
'ಲೂಸಿಯಾ' ಸಿನಿಮಾ ಖ್ಯಾತಿಯ ಪವನ್ ಕುಮಾರ್ ಅವರು ಮಲಯಾಳಂ ನಟ ಫಹಾದ್ ಫಾಸಿಲ್ ( Fahadh Faasil ) ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈ ಸಿನಿಮಾ ಬಗ್ಗೆ ನಿರ್ಮಾಣ ಸಂಸ್ಥೆಯೇ ಮಾಹಿತಿ ನೀಡಲಿ ಎಂದು ಪವನ್ ಅವರು ( Pawan Kumar ) ಮೌನ ತಾಳಿದ್ದರು. ಇದೀಗ ಈ ಬಗ್ಗೆ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯು ಟೈಟಲ್ ರಿವೀಲ್ ನೀಡಿ ವಿಷಯ ಅಧಿಕೃತಪಡಿಸಿದೆ.
ಫಹಾದ್ ಫಾಸಿಲ್ ಹಾಗೂ ಪವನ್ ಕುಮಾರ್ ಅವರ ಸಿನಿಮಾಕ್ಕೆ ಹೊಂಬಾಳೆ ಫಿಲ್ಮ್ಸ್ ಹಣ ಹೂಡಲಿದೆ. ಈ ಚಿತ್ರದಲ್ಲಿ 'ಸೂರರೈ ಪೋಟ್ರು' ಸಿನಿಮಾ ಖ್ಯಾತಿಯ ಅಪರ್ಣಾ ಬಾಲಮುರಳಿ ನಾಯಕಿಯಾಗಿ ನಟಿಸಲಿದ್ದಾರೆ. ಪ್ರೀತಾ ಜಯರಾಮನ್ ಅವರ ಕ್ಯಾಮರಾ ಕೆಲಸ, ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಈ ಚಿತ್ರಕ್ಕಿದೆ. ಮಲಯಾಳಂ, ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಅಂದಹಾಗೆ ಈ ಚಿತ್ರಕ್ಕೆ 'ಧೂಮಮ್' ಎಂದು ಹೆಸರು ಇಡಲಾಗಿದೆ.

'ಧೂಮಮ್' ಸಿನಿಮಾಕ್ಕೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಡಿ ವಿಜಯ್ ಕಿರಗಂದೂರು ಹಣ ಹೂಡುತ್ತಿದ್ದಾರೆ. ಈಗಾಗಲೇ 'ಕೆಜಿಎಫ್' ಸಿಕ್ವೇಲ್‌ಗಳ ಮೂಲಕ ದೊಡ್ಡ ಯಶಸ್ಸು ಪಡೆದಿರುವ ಈ ಸಂಸ್ಥೆ ಕೈತುಂಬ ಸಿನಿಮಾಗಳಿವೆ. ರಕ್ಷಿತ್ ಶೆಟ್ಟಿ ಜೊತೆಗೆ 'ರಿಚರ್ಡ್ ಆಂಟನಿ', ನಟ ಜಗ್ಗೇಶ್ ಜೊತೆ 'ರಾಘವೇಂದ್ರ ಸ್ಟೋರ್ಸ್', ಪ್ರಭಾಸ್ ಜೊತೆ 'ಸಲಾರ್' ಮುಂತಾದ ಸಿನಿಮಾಗಳನ್ನು ಹೊಂಬಾಳೆ ನಿರ್ಮಾಣ ಮಾಡುತ್ತಿದೆ.
ಪವನ್ ಕುಮಾರ್ ಸಿನಿಮಾ ಮಾಡಿದರೆ ಕನ್ನಡದ ತಂತ್ರಜ್ಞರನ್ನು ತಮ್ಮ ಜತೆ ಎಲ್ಲಾ ಭಾಷೆಗೂ ಕರೆದುಕೊಂಡು ಹೋಗುತ್ತಾರೆ. ಅಂತೆಯೇ ಈ ಸಿನಿಮಾದಲ್ಲಿ ಕನ್ನಡದ ತಂತ್ರಜ್ಞರೇ ಕೆಲಸ ಮಾಡುತ್ತಿದ್ದಾರೆ, ಪುನೀತ್ ರಾಜ್‌ಕುಮಾರ್‌ಗೆ ಪವನ್ ಬರೆದುಕೊಂಡಿದ್ದ ‘ದ್ವಿತ್ವ’ ಸಿನಿಮಾದ ಕಥೆಯನ್ನು ಫಹಾದ್ ಫಾಸಿಲ್‌ಗೆ ಮಾಡುತ್ತಾರೆ ಎಂಬ ಚರ್ಚೆಗಳು ಈಗಾಗಲೇ ಶುರುವಾಗಿವೆ. ಅದಕ್ಕೆ ಪವನ್ ಅವರೇ ಉತ್ತರ ನೀಡಬೇಕಿದೆ.
ತೆಲುಗು ಮತ್ತು ಹಿಂದಿಯಲ್ಲಿ ವೆಬ್ ಸಿರೀಸ್ ಮಾಡಿ ಗಮನ ಸೆಳೆದಿರುವ, ತಮಿಳಿನಲ್ಲಿ ತಮ್ಮದೇ ‘ಯು ಟರ್ನ್’ ಸಿನಿಮಾ ಮಾಡಿ ಹೆಸರು ಮಾಡಿರುವ ಪವನ್ ಅವರು ಸದ್ಯ 'ಗಾಳಿಪಟ 2' ಚಿತ್ರದಿಂದ ಸಿಕ್ಕ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಇದರ ಜೊತೆಗೆ ಅವರು ಸಿನಿಮಾ ನಿರ್ದೇಶನವನ್ನು ಗಮನದಲ್ಲಿಟ್ಟುಕೊಂಡು, ಆ ನಿಟ್ಸಿನಲ್ಲಿ ಕೆಲಸ ಮಾಡುತ್ತಲಿದ್ದಾರೆ.
ಕಳೆದ ವರ್ಷ ಪವನ್ ಕುಮಾರ್ ‘ದ್ವಿತ್ವ’ ಸಿನಿಮಾ ( Dvitva ) ಘೋಷಿಸಿದ್ದರು. ಇದರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಿಸಬೇಕಿತ್ತು. ಕಂಟೆಂಟ್ ಸಿನಿಮಾ ಮಾಡುವ ಪವನ್ ಅವರು ಪುನೀತ್ ಜೊತೆ ಸೇರಿಕೊಂಡು ಅದ್ಭುತವಾದ ಚಿತ್ರ ಕೊಡುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಪುನೀತ್ ಅವರ ಅಕಾಲಿಕ ಮರಣದಿಂದ ಈ ಸಿನಿಮಾ ನಿಂತು ಹೋಯಿತು. ಇದಾದ ಮೇಲೆ ಪವನ್ ಏನು ಮಾಡುತ್ತಾರೆ ಎಂಬ ಪ್ರಶ್ನೆಯಿತ್ತು. ಅದಕ್ಕೀಗ ಅಧಿಕೃತವಾಗಿಯೇ ಉತ್ತರ ಸಿಕ್ಕಿದೆ.
Hombale Films Announces New Movie With Fahadh Faasil Aparna Balamurali Pawan Kumar Titled As Dhoomam.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
02-09-26 08:31 pm
HK News Staffer
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
ನೇಪಾಳ ದುರಂತ ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇ...
31-08-26 01:28 pm
02-09-26 10:51 pm
HK News Desk
UT Khader, Mangalore: ಸಚಿವರ ಹೆಸರಲ್ಲಿ ಕಮಿಷನ್...
02-09-26 10:30 pm
ಗಂಗೊಳ್ಳಿಯಲ್ಲಿ ಮತ್ತೆ ದೋಣಿ ಅವಘಡ ; 6 ಮೀನುಗಾರರ ರಕ...
02-09-26 08:44 pm
ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರ...
02-09-26 08:29 pm
ಆರೋಗ್ಯದ ವಿಚಾರದಲ್ಲಿ ರಾಜಿ ಇಲ್ಲ ; ಆಹಾರ ಸುರಕ್ಷತೆ...
02-09-26 07:09 pm
02-09-26 07:18 pm
HK News Staffer
ಓವರ್ಟೇಕ್ ವಿಚಾರದಲ್ಲಿ ಕಿರಿಕ್; ಕಾಲೇಜು ವಿದ್ಯಾರ್...
02-09-26 07:12 pm
ಕೇರಳಂ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನದ ಆಮಿಷ ; ತೆ...
02-09-26 10:37 am
ಸಿಬಿಐ ಅಧಿಕಾರಿ ಸೋಗಿನಲ್ಲಿ ದೇಶಾದ್ಯಂತ ವಂಚನಾ ಜಾಲ ;...
01-09-26 07:30 pm
ಧಾರವಾಡ ; ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡ...
01-09-26 02:58 pm