ಬ್ರೇಕಿಂಗ್ ನ್ಯೂಸ್
23-09-22 03:18 pm Source: Vijayakarnataka ಸಿನಿಮಾ
ನೀರ್‌ದೋಸೆ ಸಿನಿಮಾ ಯಶಸ್ಸಿನ ಬಳಿಕ ಜಗ್ಗೇಶ್ (Jaggesh) ಹಾಗೂ ವಿಜಯ ಪ್ರಸಾದ್ (Vijay Prasad) ಜೋಡಿ 'ತೋತಾಪುರಿ' ಸಿನಿಮಾ ಮೂಲಕ ಕಮಾಲ್ ಮಾಡಲು ಸಜ್ಜಾಗಿದೆ. ಈ ವರ್ಷದ ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ'ತೋತಾಪುರಿ' ಸಹ ಇದೆ. ಈ ಸಿನಿಮಾ ಕಾಮಿಡಿ ಜತೆಗೆ ಭರಪೂರ ಮನರಂಜನೆ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಇದೇ ಮೊದಲ ಬಾರಿಗೆ ಕಾಮಿಡಿ ಸಿನಿಮಾವೊಂದರ ಎರಡೂ ಭಾಗದ ಚಿತ್ರೀಕರಣವನ್ನು ಮೊದಲೇ ಮಾಡಿಕೊಂಡು ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿರುವುದು ವಿಶೇಷ.ಚಾಪ್ಟರ್ 1 ಹಾಗೂ ಚಾಪ್ಟರ್ 2 ರೂಪದಲ್ಲಿ ರಿಲೀಸ್ ಆಗಲಿರುವ 'ತೋತಾಪುರಿ' ಸಿನಿಮಾದ ಮೊದಲ ಚಾಪ್ಟರ್ ಸೆಪ್ಟೆಂಬರ್ 30ರಂದು ವಿಶ್ವದಾದ್ಯಂತ ತೆರೆಕಾಣಲಿದೆ.
200 ಮಿಲಿಯನ್ ಮಹೋತ್ಸವ
'ತೋತಾಪುರಿ' ಸಿನಿಮಾದ 'ಬಾಗ್ಲು ತೆಗಿ ಮೇರಿ ಜಾನ್...' ಹಾಡು ವಿಶ್ವದಾದ್ಯಂತ ಸದ್ದು ಮಾಡಿದ್ದು ಗೊತ್ತೇ ಇದೆ. ದೊಡ್ಡವರಿಂದ ಚಿಕ್ಕವರವರೆಗೂ, ದೇಶ - ವಿದೇಶದವರೂ ಈ ಹಾಡಿಗೆ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಿಂದ ಹಿಡಿದು ಯಾವುದೇ ಸಮಾರಂಭ, ಮನೆ, ಕಾರು, ಕಚೇರಿ ಮೊದಲಾದ ಕಡೆಯೂ 'ತೋತಾಪುರಿ' ಹಾಡಿನದ್ದೇ ಕಲರವ. ಹಾಡನ್ನು ರೀ ಕ್ರಿಯೇಟ್ ಮಾಡಿದವರೆಷ್ಟೋ? ರೀಲ್ಸ್, ಡಾನ್ಸ್ ಮಾಡಿದವರು ಸಾವಿರಾರು ಮಂದಿ. ಇವೆಲ್ಲದರ ಜತೆಗೆ 'ಬಾಗ್ಲು ತೆಗಿ ಮೇರಿ ಜಾನ್' 200 ಮಿಲಿಯನ್ ಹಿಟ್ಸ್ ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ವಿಜಯ ಪ್ರಸಾದ್ ಸಾಹಿತ್ಯ ರಚಿಸಿದ್ದು, ವ್ಯಾಸರಾಜ್ ಸೋಸಲೆ ಹಾಗೂ ಅನನ್ಯಾ ಭಟ್ ದನಿಗೂಡಿಸಿದ್ದಾರೆ.

ತೋತಾಪುರಿ ತಾರಾಗಣದ ದಾಖಲೆ
'ತೋತಾಪುರಿ' ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗಿದ್ದು, ನೂರಾರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕಾಮಿಡಿ ಸಿನಿಮಾವೊಂದಕ್ಕೆ ಈ ಪರಿ ಶೂಟಿಂಗ್ ಮಾಡಿರುವುದು ಇದೇ ಮೊದಲು ಎಂಬುದು ಚಿತ್ರತಂಡದ ಅಭಿಪ್ರಾಯ. ಜಗ್ಗೇಶ್ ನಟಿಸಿರುವ ಸಿನಿಮಾಗಳ ಪೈಕಿ 'ತೋತಾಪುರಿ' ಬಿಗ್ ಬಜೆಟ್ ಸಿನಿಮಾ ಎಂಬುದು ಗಮನಾರ್ಹ. ಹಾಗೆಯೇ ಚಿತ್ರದಲ್ಲಿ ಡಾಲಿ ಧನಂಜಯ, ಅದಿತಿ ಪ್ರಭುದೇವ, ಸುಮನ್ ರಂಗನಾಥ್, ವೀಣಾ ಸುಂದರ್, ದತ್ತಣ್ಣ, ಹೇಮಾ ದತ್ ಸೇರಿದಂತೆ ಅನೇಕ ಕಲಾವಿದರು ತಾರಾಗಣದಲ್ಲಿದ್ದಾರೆ.
'ತೋತಾಪುರಿ' ವಿಶೇಷ ಕಥೆ ಇರುವ ಮನರಂಜನಾತ್ಮಕ ಸಿನಿಮಾ. ಇದರಲ್ಲಿ ಹಾಸ್ಯದ ಜೊತೆಗೆ ಸಮಾಜದಲ್ಲಿ ನಡೆಯುತ್ತಿರುವ ಪ್ರಚಲಿತ ಘಟನೆಗಳು ಇವೆ ಎಂಬುದು ನೋಡಿದವರಿಗೆ ತಿಳಿಯುತ್ತದೆ ಎಂದು ನಿರ್ದೇಶಕ ವಿಜಯ ಪ್ರಸಾದ್ ತಿಳಿಸಿದ್ದಾರೆ.
Jaggesh Starrer Totapuri To Release On September 30.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
02-09-26 08:31 pm
HK News Staffer
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
ನೇಪಾಳ ದುರಂತ ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇ...
31-08-26 01:28 pm
02-09-26 10:51 pm
HK News Desk
UT Khader, Mangalore: ಸಚಿವರ ಹೆಸರಲ್ಲಿ ಕಮಿಷನ್...
02-09-26 10:30 pm
ಗಂಗೊಳ್ಳಿಯಲ್ಲಿ ಮತ್ತೆ ದೋಣಿ ಅವಘಡ ; 6 ಮೀನುಗಾರರ ರಕ...
02-09-26 08:44 pm
ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರ...
02-09-26 08:29 pm
ಆರೋಗ್ಯದ ವಿಚಾರದಲ್ಲಿ ರಾಜಿ ಇಲ್ಲ ; ಆಹಾರ ಸುರಕ್ಷತೆ...
02-09-26 07:09 pm
02-09-26 07:18 pm
HK News Staffer
ಓವರ್ಟೇಕ್ ವಿಚಾರದಲ್ಲಿ ಕಿರಿಕ್; ಕಾಲೇಜು ವಿದ್ಯಾರ್...
02-09-26 07:12 pm
ಕೇರಳಂ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನದ ಆಮಿಷ ; ತೆ...
02-09-26 10:37 am
ಸಿಬಿಐ ಅಧಿಕಾರಿ ಸೋಗಿನಲ್ಲಿ ದೇಶಾದ್ಯಂತ ವಂಚನಾ ಜಾಲ ;...
01-09-26 07:30 pm
ಧಾರವಾಡ ; ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡ...
01-09-26 02:58 pm