ಬ್ರೇಕಿಂಗ್ ನ್ಯೂಸ್
22-09-22 03:12 pm Source: Vijayakarnataka ಸಿನಿಮಾ
( ಹರೀಶ್ ಬಸವರಾಜ್ )
ನಟ ಶರಣ್ ಇದುವರೆಗೂ ತೆರೆಯ ಮೇಲೆ ಕಾಣಿಸಿಕೊಂಡಿರದ ರೀತಿಯ ಪಾತ್ರದಲ್ಲಿ‘ಗುರು ಶಿಷ್ಯರು’ ಸಿನಿಮಾದಲ್ಲಿ ( Guru Shishyaru ) ಕಾಣಿಸಿಕೊಂಡಿದ್ದಾರೆ. ದೈಹಿಕ ಶಿಕ್ಷಕನ ಪಾತ್ರದಲ್ಲಿ ನಟಿಸಿರುವ ಅವರು ಈ ಪಾತ್ರ ಸಿಕ್ಕಿದ್ದು ನನ್ನ ಅದೃಷ್ಟ ಎಂದಿದ್ದಾರೆ.
ಜಡೇಶ್ ಕುಮಾರ್ ಹಂಪಿ ನಿರ್ದೇಶನದಲ್ಲಿ ಮೂಡಿಬಂದಿರುವ ‘ಗುರು ಶಿಷ್ಯರು’ ಸಿನಿಮಾ ದೇಸಿ ಕ್ರೀಡೆ ಖೋ ಖೋವನ್ನು ಆಧರಿಸಿದೆ. ಶರಣ್ ಜತೆ 12 ಬಾಲ ಕಲಾವಿದರು ಕಾಣಿಸಿಕೊಂಡಿದ್ದು, ಎಲ್ಲರ ಪಾತ್ರಗಳು ವಿಶೇಷವಾಗಿರಲಿದೆಯಂತೆ. ದೈಹಿಕ ಶಿಕ್ಷಕ ‘ಗುರು ಶಿಷ್ಯರು ಸಿನಿಮಾದ ಕಥೆಯೇ ವಿಭಿನ್ನವಾಗಿದೆ. ಆ ಪಾತ್ರದ ಗಾತ್ರ ಬಹಳ ದೊಡ್ಡದು. ಈ ಸಿನಿಮಾದಲ್ಲಿನಿಮಗೆ ಶರಣ್ ಸಿಗುವುದಿಲ್ಲ. ಸಿನಿಮಾದಲ್ಲಿರುವ ಶಾಲೆಯ ದೈಹಿಕ ಶಿಕ್ಷಕ ಮನೋಹರ್ ಸಿಗುತ್ತಾರೆ. ಇಲ್ಲಿ ಹಾಸ್ಯವಿದೆ. ಆದರೆ ಅದನ್ನು ಹೇಳಿರುವ ರೀತಿ ಬೇರಯದ್ದಾಗಿದೆ. ಮನೋಹರ ಎನ್ನುವ ಪಾತ್ರ ಬಹಳ ಗಂಭೀರವಾದದ್ದು. ಅದಕ್ಕೆ ನಾನು ಭಿನ್ನವಾಗಿ ತಯಾರಿ ನಡೆಸಿದ್ದೇನೆ. ಹಾಸ್ಯವೂ ನನ್ನ ಹಿಂದಿನ ಸಿನಿಮಾಗಳಿಗಿಂತಲೂ ಬೇರೆಯದ್ದೇ ರೀತಿಯಲ್ಲಿರುತ್ತದೆ’ ಎಂದು ಹೇಳಿದ್ದಾರೆ ನಟ ಶರಣ್.

‘ಮನೋಹರನ ಪಾತ್ರ ಗಾಂಭೀರ‍್ಯವನ್ನು ಕೇಳುತ್ತಿತ್ತು. ಅದಕ್ಕಾಗಿ ನಾನು ತಯಾರಿ ನಡೆಸುವುದಕ್ಕಿಂತಲೂ ಪಾತ್ರವನ್ನು ನನ್ನೊಳಗೆ ಹಾಕಿಕೊಂಡೆ. ನನ್ನನ್ನು ಮನೋಹರನನ್ನಾಗಿ ನಿಲ್ಲಿಸಿದ್ದು ನನ್ನ ತಂಡ. ನಿರ್ದೇಶಕ ಜಡೇಶ್, ಕ್ರಿಯೇಟಿವ್ ಹೆಡ್ ತರುಣ್ ಸುಧೀರ್, ಬರಹಗಾರ ಮಾಸ್ತಿ, ಸಿನಿಮಾಟೋಗ್ರಾಫರ್, ಸಂಗೀತ ನಿರ್ದೇಶಕ ಹೀಗೆ ಎಲ್ಲರೂ ಶರಣ್‌ನನ್ನು ಮನೋಹರನನ್ನಾಗಿಸಿದರು. ಈ ಸಿನಿಮಾದಲ್ಲಿ ಕಥೆಯೇ ನಾಯಕ. ನಮ್ಮೆಲ್ಲರಿಗಿಂತಲೂ ಕಥೆ ಮುಖ್ಯ’ ಎನ್ನುವುದು ಶರಣ್ ಮಾತು.
ಖೋ ಖೋ ಕ್ರೀಡೆಯೇ ಹೀರೊ

‘ಕಥೆಯ ಜತೆಗೆ ದೇಸಿ ಕ್ರೀಡೆ ಖೋ ಖೋ ಸಹ ಇಲ್ಲಿ ನಾಯಕ ಎನ್ನಬಹುದು. ನಮ್ಮ ಕ್ರೀಡೆಯಾದ ಖೋ ಖೋಗೆ ಅಷ್ಟೊಂದು ಮಹತ್ವ ಸಿಕ್ಕಿಲ್ಲ. ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಆ ಕ್ರೀಡೆಯನ್ನು ಸಿನಿಮಾದಲ್ಲಿ ಬಳಸಿಕೊಂಡಿದ್ದೇವೆ. ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರಿಗೆ ಅರ್ಥಪೂರ್ಣ ಕಥೆಯನ್ನು ಚಿತ್ರವಾಗಿಸಿದ್ದೇವೆ ಎಂಬುದು ತಿಳಿಯುತ್ತದೆ. ಖೋ ಖೋಗಾಗಿ ಹುಡುಗರ ಜತೆ ನಾನೂ ಒಂದಷ್ಟು ದೈಹಿಕ ತರಬೇತಿ ಪಡೆದುಕೊಂಡೆ’ ಎಂದಿದ್ದಾರೆ ಶರಣ್.
ಸಾರ್ಥಕ ಭಾವ
‘ಗುರು ಶಿಷ್ಯರು ಸಿನಿಮಾ ಒಪ್ಪಿಕೊಂಡಿದ್ದು ನನಗೆ ಸಾರ್ಥಕ ಭಾವ ಮೂಡಿಸುತ್ತಿದೆ. ಕಥೆ ನನ್ನನ್ನು ಆಯ್ಕೆ ಮಾಡಿಕೊಂಡಿದ್ದು ನನ್ನ ಅದೃಷ್ಟ. ಈ ರೀತಿಯ ಕಥೆಯನ್ನು ಮುಂದೆ ಮಾಡುವುದು ಕಷ್ಟ. ಅದಕ್ಕೆ ಕಥೆಗಾರ ಮತ್ತು ನಿರ್ದೇಶಕ ಜಡೇಶ್‌ರಿಗೆ ಥ್ಯಾಂಕ್ಸ್ ಹೇಳಬೇಕು. ಈ ಸಿನಿಮಾದಲ್ಲಿ ಹೊಸ ಶರಣ್ ಪ್ರೇಕ್ಷಕರಿಗೆ ಸಿಗುತ್ತಾನೆ. ಹೊಸ ಪ್ರತಿಭೆಗಳು ಕಾಣಸಿಗುತ್ತಾರೆ. ಖಂಡಿತವಾಗಿಯೂ ‘ಗುರು ಶಿಷ್ಯರು’ ಕನ್ನಡ ಚಿತ್ರರಂಗದ ಒಂದು ವಿಶೇಷ ಸಿನಿಮಾ ಎಂಬುದು ನನ್ನ ನಂಬಿಕೆ. ಶುಕ್ರವಾರ ಜನರು ಇದನ್ನೇ ಹೇಳಿದರೆ ನನ್ನಷ್ಟು ಸಂತೋಷ ಪಡುವವನು ಯಾರೂ ಇಲ್ಲ’ ಎಂದಿದ್ದಾರೆ ಶರಣ್.
ಈ ಸಿನಿಮಾದಲ್ಲಿ ಶರಣ್‌ಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ನಟಿಸಿದ್ದಾರೆ. ಕನ್ನಡ ಚಿತ್ರರಂಗದ ಆರು ಪ್ರಮುಖ ನಟರ ಪುತ್ರರು ಶಿಷ್ಯರ ಪಾತ್ರದಲ್ಲಿ ನಟಿಸಿದ್ದಾರೆ. ಹಾಡುಗಳು, ಟ್ರೇಲರ್ ಮೂಲಕ ಚಿತ್ರ ಈಗಾಗಲೇ ಭರವಸೆ ಮೂಡಿಸಿದೆ.
Actor Sharan Speaks About Nishvika Naidu Starrer Guru Shishyaru Movie.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm