ಬ್ರೇಕಿಂಗ್ ನ್ಯೂಸ್
12-09-22 02:28 pm Source: Vijayakarnataka ಸಿನಿಮಾ
'ಸೂಪರ್ ಸ್ಟಾರ್' ರಜನಿಕಾಂತ್ ಕುಟುಂಬದಲ್ಲಿ ಈಗ ಸಂಭ್ರಮ ಮನೆ ಮಾಡಿದೆ. ರಜನಿಕಾಂತ್ ಅವರ ಎರಡನೇ ಪುತ್ರಿ ಸೌಂದರ್ಯಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೌಂದರ್ಯಾ ಅವರಿಗೆ ಈಗಾಗಲೇ ವೇದ್ ಎಂಬ ಗಂಡು ಮಗನಿದ್ದಾನೆ. ಇದೀಗ ಎರಡನೇ ಮಗುವಿಗೆ ಜನ್ಮ ನೀಡಿರುವ ಸೌಂದರ್ಯಾ, ಮುದ್ದು ಮಗನಿಗೆ ಆಗಲೇ ನಾಮಕರಣವನ್ನೂ ಮಾಡಿದ್ದಾರೆ. ಹೌದು, ಮಗನಿಗೆ ವೀರ್ ರಜನಿಕಾಂತ್ ವನಂಗಮುಡಿ ಎಂದು ಹೆಸರಿಟ್ಟಿದ್ದಾರೆ.
'ದೇವರ ಮತ್ತು ಹೆತ್ತವರ ಆಶೀರ್ವಾದಿಂದ ವಿಶಾಗನ್, ವೇದ್ ಮತ್ತು ನಾನು ವೇದ್‌ನ ತಮ್ಮನನ್ನು ಸ್ವಾಗತಿಸಲು ಥ್ರಿಲ್ ಆಗಿದ್ದೇವೆ. ವೀರ್ ರಜನಿಕಾಂತ್ ವನಂಗಮುಡಿ...' ಎಂದು ಬರೆದುಕೊಂಡಿರುವ ಸೌಂದರ್ಯಾ ರಜನಿಕಾಂತ್ ಅವರು, ವೈದ್ಯರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.
ಸೌಂದರ್ಯಾಗೆ ಇದು 2ನೇ ಮದುವೆ
2010 ಸೆಪ್ಟೆಂಬರ್ 3ರಂದು ಸೌಂದರ್ಯಾ ಹಾಗೂ ಅಶ್ವಿನ್ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದರು. ಏಳು ವರ್ಷ ಒಟ್ಟಿಗೆ ಇದ್ದ ಈ ಜೋಡಿ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಇಬ್ಬರೂ ಪರಸ್ಪರ ಒಪ್ಪಿ ವಿಚ್ಛೇದನ ಪಡೆದುಕೊಂಡಿದ್ದರು. ನಂತರ 2019ರ ಫೆಬ್ರವರಿಯಲ್ಲಿ ನಟ ಹಾಗೂ ಉದ್ಯಮಿ ವಿಶಾಗನ್ ವನಂಗಮುಡಿಯೊಂದಿಗೆ ಸಪ್ತಪದಿ ತುಳಿದರು. ಚೆನ್ನೈನ ಎಂಆರ್‌ಸಿ ನಗರ್‌ನಲ್ಲಿರುವ ಲೀಲಾ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆದಿದ್ದ ಅದ್ದೂರಿ ಮದುವೆ ಅನೇಕ ಗಣ್ಯರು ಆಗಮಿಸಿದ್ದರು.
ಇದೀಗ ಸೌಂದರ್ಯಾ ಮತ್ತು ವಿಶಾಗನ್ ದಂಪತಿ ಮುದ್ದಾದ ಗಂಡು ಮಗುವಿಗೆ ಪೋಷಕರಾಗಿದ್ದಾರೆ. ಆಗಸ್ಟ್‌ನಲ್ಲಿ ಸೌಂದಯಾಗೆ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ರಜನಿಕಾಂತ್ ಕುಟುಂಬಸ್ಥರು, ಆಪ್ತರು, ಸ್ನೇಹಿತರು ಮಾತ್ರ ಆಗಮಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಮಗುವಿನ ಮುಖವನ್ನು ತೋರಿಸದೆ ಮಗುವಿನ ಕೈ ಹಿಡಿದಿರುವಂತಹ ಕೆಲವು ಫೋಟೋಗಳನ್ನು ಮಾತ್ರ ಸೌಂದರ್ಯಾ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರೆಗ್ನೆನ್ಸಿ ಫೋಟೋಶೂಟ್ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ.
ಅಂದಹಾಗೆ, ಸೌಂದರ್ಯಾ ಅವರು ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ರಜನಿಕಾಂತ್ ಮತ್ತು ದೀಪಿಕಾ ಪಡುಕೋಣೆ ನಟನೆಯ 'ಕೊಚಾಡಿಯನ್' ಸಿನಿಮಾವನ್ನು ಮೋಷನ್ ಕ್ಯಾಪ್ಚರ್ ತಂತ್ರಜ್ಞಾನದಲ್ಲಿ ಸೌಂದರ್ಯಾ ನಿರ್ದೇಶಿಸಿದ್ದರು. ಹಾಗೆಯೇ ಧನುಷ್ ಮತ್ತು ಕಾಜೋಲ್ ನಟಿಸಿದ್ದ 'ವಿಐಪಿ 2' ಸಿನಿಮಾವನ್ನು ಕೂಡ ಸೌಂದರ್ಯಾ ನಿರ್ದೇಶಿಸಿದ್ದರು.
Super Star Rajinikanths Daughter Soundarya Welcomes Baby Boy
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
02-09-26 08:31 pm
HK News Staffer
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
ನೇಪಾಳ ದುರಂತ ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇ...
31-08-26 01:28 pm
02-09-26 10:51 pm
HK News Desk
UT Khader, Mangalore: ಸಚಿವರ ಹೆಸರಲ್ಲಿ ಕಮಿಷನ್...
02-09-26 10:30 pm
ಗಂಗೊಳ್ಳಿಯಲ್ಲಿ ಮತ್ತೆ ದೋಣಿ ಅವಘಡ ; 6 ಮೀನುಗಾರರ ರಕ...
02-09-26 08:44 pm
ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರ...
02-09-26 08:29 pm
ಆರೋಗ್ಯದ ವಿಚಾರದಲ್ಲಿ ರಾಜಿ ಇಲ್ಲ ; ಆಹಾರ ಸುರಕ್ಷತೆ...
02-09-26 07:09 pm
02-09-26 07:18 pm
HK News Staffer
ಓವರ್ಟೇಕ್ ವಿಚಾರದಲ್ಲಿ ಕಿರಿಕ್; ಕಾಲೇಜು ವಿದ್ಯಾರ್...
02-09-26 07:12 pm
ಕೇರಳಂ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನದ ಆಮಿಷ ; ತೆ...
02-09-26 10:37 am
ಸಿಬಿಐ ಅಧಿಕಾರಿ ಸೋಗಿನಲ್ಲಿ ದೇಶಾದ್ಯಂತ ವಂಚನಾ ಜಾಲ ;...
01-09-26 07:30 pm
ಧಾರವಾಡ ; ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡ...
01-09-26 02:58 pm