ಬ್ರೇಕಿಂಗ್ ನ್ಯೂಸ್
05-09-22 01:34 pm Source: Vijayakarnataka ಸಿನಿಮಾ
ಕನ್ನಡ ಸಿನಿಮಾಗಳಿಗೆ ಇತ್ತೀಚೆಗೆ ಪರಭಾಷೆಗಳಲ್ಲಿ ಬೇಡಿಕೆ ಸೃಷ್ಟಿಯಾಗುತ್ತಿವೆ. ಕೆಲ ವಾರಗಳ ಹಿಂದೆ ಬಿಡುಗಡೆಯಾದ ‘ಲವ್ 360’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಈಗ ಈ ಸಿನಿಮಾ ತಮಿಳು ಮತ್ತು ತೆಲುಗಿಗೆ ರಿಮೇಕ್ ಆಗುತ್ತಿದೆ ಎಂದು ಸುದ್ದಿಯಾಗಿದೆ.
ಶಶಾಂಕ್ ನಿರ್ದೇಶನ ಮಾಡಿದ್ದ ಈ ಸಿನಿಮಾ ಹೊಸತನದ ಕಥೆಯಿಂದ ಗಮನ ಸೆಳೆದಿತ್ತು. ಈ ಸಿನಿಮಾ ಮೂಲಕ ಪ್ರವೀಣ್ ಎಂಬ ಯುವಕ ನಾಯಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾವನ್ನು ಈಗ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಮತ್ತು ನಿರ್ಮಾಪಕರು ರಿಮೇಕ್ ಮಾಡಲು ಆಸಕ್ತಿ ತೋರಿಸಿದ್ದಾರೆ. ಶಶಾಂಕ್ ಅವರಿಗೆ ನಿರ್ದೇಶನ ಮಾಡಲು ಆಫರ್ ಸಹ ನೀಡಿದ್ದಾರಂತೆ.

‘ಲವ್ 360 ಸಿನಿಮಾದ ಕಥೆ ಮತ್ತು ಮೇಕಿಂಗ್ ಅನ್ನು ಇಷ್ಟಪಟ್ಟು ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ರಿಮೇಕ್ ಮಾಡಲು ಮುಂದೆ ಬಂದಿದೆ. ತಮಿಳಿಗೂ ಸಹ ಒಂದಷ್ಟು ಮಂದಿ ಕೇಳಿದ್ದಾರೆ. ಸದ್ಯದಲ್ಲೇ ಎಲ್ಲವೂ ಫೈನಲ್ ಆಗಲಿದೆ’ಎಂದು ಹೇಳುತ್ತಾರೆ ಶಶಾಂಕ್.

ಜನ ಗೆಲ್ಲಿಸಿದ ಸಿನಿಮಾ ಈ ಸಿನಿಮಾ ಬಿಡುಗಡೆಯಾಗಿ ಮೊದಲ ಮೂರು ದಿನಗಳ ಕಾಲ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಲಿಲ್ಲ ಎಂದು ಶಶಾಂಕ್ ಬೇಸರದಿಂದ ವಿಡಿಯೊವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು. ಆ ವಿಡಿಯೊ ವೈರಲ್ ಆಗಿ ಸಿನಿಮಾಗೆ ಜನ ಬರಲಾರಂಭಿಸಿದರು. ವಿಶೇಷ ಎಂದರೆ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದ್ದಲ್ಲದೆ, ಜನಮನವನ್ನು ಸಹ ಗೆದ್ದಿತು. ಹಾಗಾಗಿ ಶಶಾಂಕ್ ಕನ್ನಡಿಗರಿಗೆ ಧನ್ಯವಾದ ಹೇಳಿ ಒಂದು ವಿಡಿಯೊವನ್ನು ಹರಿ ಬಿಟ್ಟಿದ್ದಾರೆ.

‘ಕನ್ನಡಿಗರು ಸಿನಿಮಾವನ್ನು ಗೆಲ್ಲಿಸಿದ್ದಾರೆ. ಒಳ್ಳೆಯ ಕಂಟೆಂಟ್ ಇರುವ ಸಿನಿಮಾಗಳನ್ನು ಮಾಡಿದರೆ ಎಂದಿಗೂ ಅವರು ಕೈ ಬಿಡುವುದಿಲ್ಲ ಎಂಬುದನ್ನು ನಿರೂಪಿಸಿದ್ದಾರೆ. ‘ಲವ್ 360’ ತಂಡದಿಂದ ಸಿನಿಮಾ ನೋಡಿದ ಎಲ್ಲರಿಗೂ ಧನ್ಯವಾದ. ಈ ಸಿನಿಮಾ ಹಿಟ್ ಆಗಲು ಹಲವು ಕಾರಣಗಳಿವೆ. ಸಿನಿಮಾದಲ್ಲಿನ ಹಾಡುಗಳು ಮತ್ತು ನನ್ನ ಕಥಾ ನಾಯಕ ಪ್ರವೀಣ್ ಮತ್ತು ನಾಯಕಿ ರಚನಾ ಇಂದರ್ ಅವರ ನಟನೆಯೂ ಕಾರಣ’ ಎಂದು ಹೇಳಿದ್ದಾರೆ ಶಶಾಂಕ್.ಒಟ್ಟಾರೆ ಕನ್ನಡಿಗರು ಇಷ್ಟಪಟ್ಟ ಸಿನಿಮಾಗಳು ಪರಭಾಷೆಗೂ ಹೋಗುತ್ತಿರುವುದು ಸಹಜವಾಗಿ ಕನ್ನಡ ಸಿನಿಮಾ ಪ್ರೇಮಿಗಳಿಗೆ ಸಂತಸವಾಗಿದೆ.
"ರಿಮೇಕ್‌ಗಾಗಿ ಬೇಡಿಕೆ ಬಂದಿದೆ. ಸದ್ಯದಲ್ಲೇ ಯಾರು ಮಾಡುತ್ತಾರೆ ಎಂಬ ಬಗ್ಗೆ ವಿವರ ನೀಡುತ್ತೇವೆ" ಎಂದಿದ್ದಾರೆ ನಿರ್ದೇಶಕ ಶಶಾಂಕ್
Demand For Director Shashank Love 360 Movie Remake
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
02-09-26 08:31 pm
HK News Staffer
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
ನೇಪಾಳ ದುರಂತ ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇ...
31-08-26 01:28 pm
02-09-26 10:51 pm
HK News Desk
UT Khader, Mangalore: ಸಚಿವರ ಹೆಸರಲ್ಲಿ ಕಮಿಷನ್...
02-09-26 10:30 pm
ಗಂಗೊಳ್ಳಿಯಲ್ಲಿ ಮತ್ತೆ ದೋಣಿ ಅವಘಡ ; 6 ಮೀನುಗಾರರ ರಕ...
02-09-26 08:44 pm
ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರ...
02-09-26 08:29 pm
ಆರೋಗ್ಯದ ವಿಚಾರದಲ್ಲಿ ರಾಜಿ ಇಲ್ಲ ; ಆಹಾರ ಸುರಕ್ಷತೆ...
02-09-26 07:09 pm
02-09-26 07:18 pm
HK News Staffer
ಓವರ್ಟೇಕ್ ವಿಚಾರದಲ್ಲಿ ಕಿರಿಕ್; ಕಾಲೇಜು ವಿದ್ಯಾರ್...
02-09-26 07:12 pm
ಕೇರಳಂ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನದ ಆಮಿಷ ; ತೆ...
02-09-26 10:37 am
ಸಿಬಿಐ ಅಧಿಕಾರಿ ಸೋಗಿನಲ್ಲಿ ದೇಶಾದ್ಯಂತ ವಂಚನಾ ಜಾಲ ;...
01-09-26 07:30 pm
ಧಾರವಾಡ ; ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡ...
01-09-26 02:58 pm