Cadaver Movie Actress Amala Paul Files Harassment Case Against Ex Friend Bhavninder Singh.
">ಬ್ರೇಕಿಂಗ್ ನ್ಯೂಸ್
01-09-22 02:08 pm Source: Vijayakarnataka ಸಿನಿಮಾ
ನಟಿ ಅಮಲಾ ಪೌಲ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಾರಣ, ಮಾಜಿ ಬಾಯ್‌ಫ್ರೆಂಡ್ ಭವಿಂದರ್ ಸಿಂಗ್! ಎಲ್ಲರಿಗೂ ಗೊತ್ತಿರುವಂತೆ ಭವ್ನಿಂದರ್ ಸಿಂಗ್ ಜೊತೆಗೆ ಅಮಲಾ ಸ್ನೇಹ ಬೆಳೆಸಿದ್ದರು. ಇಬ್ಬರು ಮದುವೆ ಕೂಡ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈ ಮಧ್ಯೆ ಇಬ್ಬರ ನಡುವಿನ ಸ್ನೇಹ ಹಳಸಿತು. ದೂರ ದೂರ ಆಗಿದ್ದ ಈ ಜೋಡಿ ಈಗ ಮತ್ತೆ ಸದ್ದು ಮಾಡುತ್ತಿದೆ. ಭವ್ನಿಂದರ್ ಸಿಂಗ್ ವಿರುದ್ಧ ಅಮಲಾ ದೂರು ನೀಡಿದ್ದಾರೆ!
ಭವಿಂದರ್ ವಿರುದ್ಧ ದೌರ್ಜನ್ಯ ಕೇಸ್
ಮಾಜಿ ಸ್ನೇಹಿತ ಭವ್ನಿಂದರ್ ವಿರುದ್ಧ ಅಮಲಾ ಪೌಲ್ ದೌರ್ಜನ್ಯ, ವಂಚನೆ ಕೇಸ್ ದಾಖಲಿಸಿದ್ದು, ಎಫ್‌ಐಆರ್ ಕೂಡ ದಾಖಲಾಗಿದೆ. ವಿಲ್ಲುಪುರಂ ಜಿಲ್ಲೆಯಲ್ಲಿ ಈ ಎಫ್‌ಐಆರ್ ದಾಖಲಾಗಿದ್ದು, ಅಮಲಾ ನೀಡಿದ ದೂರಿನ ಅನ್ವಯ ಭವ್ನಿಂದರ್‌ರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಏನಿದು ಪ್ರಕರಣ?
2018ರಲ್ಲಿ ಅಮಲಾ ಮತ್ತು ಭವ್ನಿಂದರ್ ಜಂಟಿಯಾಗಿ ಒಂದು ಪ್ರೊಡಕ್ಷನ್ ಹೌಸ್ ಶುರು ಮಾಡಿದ್ದರು. ಆದರೆ ಈ ಜೋಡಿ ಕಾರಣಾಂತರಗಳಿಂದ ದೂರವಾಯಿತು. ಆದ್ದರಿಂದ ಕೊನೆಗೆ ಈ ಪ್ರೊಡಕ್ಷನ್ ಹೌಸ್ ಅನ್ನು ಅಮಲಾ ಒಬ್ಬರೇ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಈಚೆಗಷ್ಟೇ 'ಕಡವೆರ್' ಅನ್ನೋ ಸಿನಿಮಾವನ್ನು ಇದೇ ಬ್ಯಾನರ್ ಮೂಲಕ ಅಮಲಾ ಪೌಲ್ ನಿರ್ಮಿಸಿದ್ದಾರೆ. ಆದರೆ ಈ ಮಧ್ಯೆ ಭವ್ನಿಂದರ್ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಮಲಾಗೆ ಸಾಕಷ್ಟು ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಸಾಕಷ್ಟು ಹಣವನ್ನು ಲಪಟಾಯಿಸಿದ್ದಾರೆ ಎನ್ನಲಾಗುತ್ತಿದೆ. ಅದರ ಜೊತೆಗೆ ತಮಗೆ ಸಾಕಷ್ಟು ಬೆದರಿಕೆ ಹಾಕುತ್ತಿದ್ದು, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾನೆ ಎಂದು ಭವ್ನಿಂದರ್ ವಿರುದ್ಧ ಅಮಲಾ ಆರೋಪ ಮಾಡಿದ್ದಾರೆ.
ಅಲ್ಲದೆ, ಹಣಕ್ಕಾಗಿ ಭವ್ನಿಂದರ್ ಬೇಡಿಕೆ ಇಡುತ್ತಿದ್ದಾನೆ. ಹಣ ನೀಡದಿದ್ದರೆ ತನ್ನ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಅಮಲಾ ಪೌಲ್ ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ಭವ್ನಿಂದರ್ ಸಿಂಗ್‌ರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಅಂದಹಾಗೆ, ಬಹುಭಾಷಾ ನಟಿಯಾಗಿರುವ ಅಮಲಾ ಪೌಲ್, 'ಹೆಬ್ಬುಲಿ' ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಕ್ಕೂ ಎಂಟ್ರಿ ನೀಡಿದ್ದರು. ನಿರ್ದೇಶಕ ಎ.ಎಲ್. ವಿಜಯ್ ಜೊತೆಗೆ ಅಮಲಾ ಮದುವೆ ಆಗಿತ್ತು. ಆದರೆ ಕೆಲವೇ ವರ್ಷಗಳಲ್ಲಿ ಹೊಂದಾಣಿಕೆ ಕೊರತೆಯಿಂದ ವಿಜಯ್ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು ನಟಿ ಅಮಲಾ ಪೌಲ್. ಸದ್ಯ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಅಮಲಾ, ಈಗ ಮಾಹಿ ಸ್ನೇಹಿತನ ಕುತಂತ್ರದಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.
Cadaver Movie Actress Amala Paul Files Harassment Case Against Ex Friend Bhavninder Singh.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
09-09-25 05:59 pm
Mangalore Correspondent
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
Mangalore, Bajilakere, Suicide: ನನ್ನವರೇ ನನ್ನನ...
09-09-25 03:07 pm
ದಶಮ ಸಂಭ್ರಮದಲ್ಲಿ ಮಿಥುನ್ ರೈ ಸಾರಥ್ಯದ ಪಿಲಿನಲಿಕೆ ;...
09-09-25 02:30 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm