ಬ್ರೇಕಿಂಗ್ ನ್ಯೂಸ್
25-08-22 03:09 pm Source: Vijayakarnataka ಸಿನಿಮಾ
ಕಿಚ್ಚ ಸುದೀಪ್ ( Kiccha Sudeep ) ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಮೂಡಿಬಂದ 'ವಿಕ್ರಾಂತ್ ರೋಣ' ಸಿನಿಮಾ ( Vikrant Rona Movie ) ಜುಲೈ 28 ರಂದು ವಿಶ್ವದಾದ್ಯಂತ ತೆರೆ ಕಂಡಿತ್ತು. ಸಸ್ಪೆನ್ಸ್ ಥ್ರಿಲ್ಲರ್ ಕಥಾನಕದ ಈ ಸಿನಿಮಾ ಓಟಿಟಿಗೆ ಲಗ್ಗೆ ಇಡ್ತಿದೆ.
ಕಿಚ್ಚನ ಹುಟ್ಟುಹಬ್ಬಕ್ಕೆ ಗುಮ್ಮನ ಆಗಮನ
ಸೆಪ್ಟೆಂಬರ್ 2ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜನುಮದಿನ. ಈ ದಿನದಂದು ಜೀ5ಕ್ಕೆ ಗುಮ್ಮ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾನೆ. ಅದಕ್ಕೂ ಮುನ್ನ ಜೀ5 ಸ್ಪೆಷಲ್ ಟ್ರೇಲರ್‌ವೊಂದನ್ನು ಅನಾವರಣ ಮಾಡಲಿದೆ. ಕನ್ನಡದಲ್ಲಿ ಮಾತ್ರ ವಿಕ್ರಾಂತ್ ರೋಣ ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಲಿದ್ದು, ಶೀಘ್ರದಲ್ಲಿ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಜಾಕ್ ಮಂಜು ನಿರ್ಮಾಣದಲ್ಲಿ ಅದ್ದೂರಿಯಾಗಿ ತಯಾರಾಗಿದ್ದ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ ಸುದೀಪ್ ಜೊತೆಗೆ ಹೆಜ್ಜೆ ಹಾಕಿದ್ದ ರಾ ರಾ ರಕ್ಕಮ್ಮ ಹಾಡು ಸೂಪರ್ ಹಿಟ್ ಲಿಸ್ಟ್ ಸೇರಿತ್ತು. ಸ್ಪೆಷಲ್ ಪಾತ್ರವೊಂದರಲ್ಲಿಯೂ ಕಾಣಿಸಿಕೊಂಡಿದ್ದ ಜಾಕ್‌ಗೆ ಕನ್ನಡಿಗರು ಮನಸೋತಿದ್ದರು.
ನಿರೂಪ್ ಭಂಡಾರಿ, ನೀತಾ ಅಶೋಕ್, ಮಿಲನಾ ನಾಗರಾಜ್, ಮಧುಸೂದನ್ ರಾವ್, ರವಿಶಂಕರ್ ಗೌಡ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಅಜನೀಶ್ ಬಿ. ಲೋಕನಾಥ್ ಸಂಗೀತ ನಿರ್ದೇಶನ ಮೋಡಿ ಮಾಡಿತ್ತು. 3D ಅವತರಣಿಕೆಯಲ್ಲಿ ಪಂಚ ಭಾಷೆಯಲ್ಲಿ ರಿಲೀಸ್ ಆದ 'ವಿಕ್ರಾಂತ್ ರೋಣ' ಈಗ ಜೀ5 ಒಟಿಟಿಗೆ ಎಂಟ್ರಿ ಕೊಡ್ತಿದ್ದು, ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರು ಮನೆಯಲ್ಲಿ ಇಡೀ ಮನೆ ಮಂದಿ ಜೊತೆ ಕುಳಿತು ಸಿನಿಮಾ ಕಣ್ತುಂಬಿಕೊಳ್ಳಬಹುದು.
'ವಿಕ್ರಾಂತ್ ರೋಣ' ಸಿನಿಮಾ ಬಗ್ಗೆ ಪರ ವಿರೋಧ ಪ್ರತಿಕ್ರಿಯೆ ಕೇಳಿ ಬಂದಿತ್ತು. ಈ ಚಿತ್ರವು ರಂಗಿತರಂಗ 2 ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು. ‘ವಿಕ್ರಾಂತ್ ರೋಣ’ ಚಿತ್ರದ ವಿಶುವಲ್ಸ್, ಗ್ರಾಫಿಕ್ಸ್, ಮೇಕಿಂಗ್, ಕ್ಯಾಮರಾ ವರ್ಕ್ ಹಾಗೂ ಸೆಟ್ ವರ್ಕ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ರಿಲೀಸ್ ಆದ ನಾಲ್ಕು ದಿನಗಳಲ್ಲಿ ‘ವಿಕ್ರಾಂತ್ ರೋಣ’ ಚಿತ್ರ 100 ಕೋಟಿ ಕ್ಲಬ್ ಸೇರಿದೆ ಎಂದು ವರದಿಯಾಗಿತ್ತು.
Kiccha Sudeep Jacqueline Fernandez Starrer Vikrant Rona Movie Release On Zee 5 September 2.
02-05-25 01:40 pm
Bangalore Correspondent
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:10 pm
Mangalore Correspondent
Udupi crime, Attempt, Suhas Shetty Murder: ಉಡ...
02-05-25 12:44 pm
Suhas Shetty Murder, Liquor Ban: ಸುಹಾಸ್ ಶೆಟ್ಟ...
02-05-25 12:23 pm
Suhas Shetty Murder, Bajpe, Mangalore: ಟಾರ್ಗೆ...
02-05-25 03:52 am
Suhas Shetty murder, Mangalore Bandh: ಸುಹಾಸ್...
02-05-25 03:29 am
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm