ಬ್ರೇಕಿಂಗ್ ನ್ಯೂಸ್
18-08-22 01:40 pm Source: Vijayakarnataka ಸಿನಿಮಾ
ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಛಡ್ಡಾ', ಅಕ್ಷಯ್ ಕುಮಾರ್ 'ರಕ್ಷಾ ಬಂಧನ್' ಸಿನಿಮಾಗಳನ್ನು ಬಾಯ್ಕಾಟ್ ಮಾಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಆಲಿಯಾ ಭಟ್, ಕರೀನಾ ಕಪೂರ್ ಮುಂತಾದ ನಟರನ್ನು ಕೆಲ ಕಾರಣಗಳಿಗೆ ಬಾಯ್ಕಾಟ್ ಮಾಡಬೇಕು ಎಂದು ಹೇಳಲಾಗಿತ್ತು. ಈ ಬಗ್ಗೆ ಅರ್ಜುನ್ ಕಪೂರ್ ( Arjun Kapoor ) ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಾರೆ. ಈ ಮಾತು ಬಿಜೆಪಿಯ ನರೋತ್ತಮ್ ಮಿಶ್ರಾ ( Narottam Mishra ) ಕಿವಿಗೂ ಬಿದ್ದಿದೆ.
ಹ್ಯಾಶ್‌ಟ್ಯಾಗ್‌ಗೂ, ರಿಯಾಲಿಟಿಗೂ ಸಂಬಂಧ ಇಲ್ಲದಾಗಿದೆ!
"ನಾವು ತುಂಬ ಸಮಯದಿಂದ ಮೌನವಾಗಿದ್ದು ತಪ್ಪು ಮಾಡಿದೆವು. ನಮ್ಮ ಶಿಸ್ತನ್ನು ವೀಕ್‌ನೆಸ್ ಆಗಿ ಪರಿಗಣಿಸಲಾಗಿದೆ. ಕೆಲಸ ಮಾತನಾಡಬೇಕು ಎಂದು ನಂಬಿದ್ದೇವೆ, ನಾವು ತುಂಬ ಸಹಿಸಿಕೊಂಡೆವು ಅಂತ ಅನಿಸುತ್ತದೆ, ಅದನ್ನೇ ಜನರು ಈಗ ಬಳಸಿಕೊಂಡಿದ್ದಾರೆ. ನಾವೆಲ್ಲ ಒಟ್ಟಾಗಿ ಪ್ರಾಮಾಣಿಕತೆಯಿಂದ ಏನಾದರೂ ಮಾಡಬೇಕು. ಈಗ ಏನು ಬರೆಯಲಾಗುತ್ತಿದೆಯೋ, ಏನು ಹ್ಯಾಶ್‌ಟ್ಯಾಗ್ ಕ್ರಿಯೇಟ್ ಮಾಡಲಾಗುತ್ತಿದೆಯೋ ಅದು ರಿಯಾಲಿಟಿಯಿಂದ ತುಂಬ ದೂರ ಇದೆ" ಎಂದು ಅರ್ಜುನ್ ಕಪೂರ್ ಹೇಳಿದ್ದಾರೆ.
ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿಲ್ಲ
"ಚಿತ್ರರಂಗ ಅದರ ಕಾಂತಿಯನ್ನು ಕಳೆದುಕೊಳ್ಳುತ್ತಿದೆ. ನಾವು ಅಂಧರಾಗಿ ಹೋಗಲಿ ಬಿಡಿ ಎನ್ನುವಂತೆ ಇದ್ದೇವೆ. ಥಿಯೇಟರ್ ಓಪನ್ ಆಗುತ್ತಿದ್ದಂತೆ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತದೆ, ಎಲ್ಲವೂ ಒಳ್ಳೆಯದಾಗುತ್ತದೆ ಎಂದುಕೊಂಡಿದ್ದೆವು. ಕಳೆದ ಎರಡು ತಿಂಗಳಿನಿಂದ ಸುಮಾರು ಸಿನಿಮಾಗಳು ಉತ್ತಮ ಪ್ರದರ್ಶನ ಕಂಡಿಲ್ಲ" ಎಂದಿದ್ದಾರೆ ಅರ್ಜುನ್ ಕಪೂರ್ ಅರ್ಜುನ್ ಕಪೂರ್ ನಟನೆಯ 'ಏಕ್ ವಿಲನ್ ರಿಟರ್ನ್ಸ್' ಸಿನಿಮಾ ಚೆನ್ನಾಗಿ ಕಮಾಯಿ ಮಾಡಿರಲಿಲ್ಲ. ಒಟ್ಟೂ 40 ಕೋಟಿ ರೂಪಾಯಿ ಗಳಿಸಿದ್ದ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.
ಬಿಜೆಪಿ ನರೋತ್ತಮ್ ಮಿಶ್ರಾ ಹೇಳಿದ್ದೇನು?
ಅರ್ಜುನ್ ಕಪೂರ್ ಅವರ ಮಾತುಗಳನ್ನು ಕೇಳಿಸಿಕೊಂಡ ಬಿಜೆಪಿಯ ನರೋತ್ತಮ್ ಮಿಶ್ರಾ ಅವರು, "ನಟ ಅರ್ಜುನ್ ಕಪೂರ್ ಅವರು ಸಮಾಜಕ್ಕೆ ಧಮ್‌ಕಿ ಹಾಕೋದು ಸರಿಯಲ್ಲ. ಸಾರ್ವಜನಿಕರಿಗೆ ಬೆದರಿಕೆ ಹಾಕುವ ಬದಲು, ನಟನೆ ಬಗ್ಗೆ ಗಮನ ಕೊಡಲಿ. ತಮ್ಮ ಸಿನಿಮಾಗಳಲ್ಲಿ ಹಿಂದೂ ಧರ್ಮವನ್ನು ಗುರಿಯಾಗಿಟ್ಟುಕೊಂಡು ಕೆಲ ಗ್ಯಾಂಗ್ ಸಾರ್ವಜನಿಕರಿಗೆ ಬಾಯ್ಕಾಟ್ ವಿಚಾರವಾಗಿ ಬೆದರಿಕೆಯನ್ನು ಏಕೆ ಹಾಕುತ್ತಾರೆ?" ಎಂದು ಪ್ರಶ್ನೆ ಮಾಡಿದ್ದಾರೆ.
ಅರ್ಜುನ್ ಕಪೂರ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬಂದ ಕಾಮೆಂಟ್ಸ್ ಇಂತಿವೆ
Narottam Mishra Reaction On Arjun Kapoor Opinion About Boycott Trend.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
09-09-25 05:59 pm
Mangalore Correspondent
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
Mangalore, Bajilakere, Suicide: ನನ್ನವರೇ ನನ್ನನ...
09-09-25 03:07 pm
ದಶಮ ಸಂಭ್ರಮದಲ್ಲಿ ಮಿಥುನ್ ರೈ ಸಾರಥ್ಯದ ಪಿಲಿನಲಿಕೆ ;...
09-09-25 02:30 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm