ಬ್ರೇಕಿಂಗ್ ನ್ಯೂಸ್
12-08-22 06:52 pm Source: Vijayakarnataka ಸಿನಿಮಾ
'ಕ್ರೇಜಿ ಸ್ಟಾರ್' ರವಿಚಂದ್ರನ್ ಅವರನ್ನು ಸ್ಯಾಂಡಲ್‌ವುಡ್ ಶೋ ಮ್ಯಾನ್ ಅಂತಲೇ ಕರೆಯುತ್ತಾರೆ. ಅವರ ನಿರ್ದೇಶನದ ಸಿನಿಮಾಗಳಿಗೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಅದರಲ್ಲೂ ಈಚೆಗೆ ಅವರು ವಿಭಿನ್ನವಾದ ಪ್ರಯೋಗಗಳನ್ನು ಮಾಡುವತ್ತ ಹೆಚ್ಚು ಉತ್ಸುಕರಾಗಿದ್ದಾರೆ. 'ಅಪೂರ್ವ' ನಂತರ ಅವರೀಗ 'ರವಿ ಬೋಪಣ್ಣ' ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಪರಭಾಷೆ ಸಿನಿಮಾಗಳನ್ನು ರಿಮೇಕ್ ಮಾಡುವಾಗ, ರವಿಚಂದ್ರನ್, ಭಾಗಶಃ ತಮ್ಮದೇ ಸ್ವಂತಿಕೆ ಮೆರೆಯುತ್ತಾರೆ. ಆದರೆ 'ರವಿ ಬೋಪಣ್ಣ' ವಿಚಾರದಲ್ಲಿ ಇದು ಸಾಧ್ಯವಾಗಿದೆಯಾ? ಇಲ್ಲಿದೆ ಓದಿ ವಿಮರ್ಶೆ.
ರವಿ ಬೋಪಣ್ಣನ ಕಥೆ ಏನು?
2018ರಲ್ಲಿ ಮಲಯಾಳಂನಲ್ಲಿ ತೆರೆಕಂಡ 'ಜೋಸೆಫ್' ಸಿನಿಮಾದ ಕಥೆಯನ್ನು ಎರವಲು ಪಡೆದ ಸಿನಿಮಾವೇ ಈ 'ರವಿ ಬೋಪಣ್ಣ'. ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದರೂ, ರವಿ ಬೋಪಣ್ಣನಿಗೆ (ರವಿಚಂದ್ರನ್) ಇಲಾಖೆಯಲ್ಲಿ ಬೇಡಿಕೆ ಇದೆ. ಕ್ಲಿಷ್ಟಕರ ಕೇಸ್‌ಗಳನ್ನು ಭೇದಿಸುವುದರಲ್ಲಿ ರವಿ ಬೋಪಣ್ಣ ನಿಷ್ಣಾತ. ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡು, ಒಂಟಿಯಾಗಿರುವ ರವಿ ಬೋಪಣ್ಣನಿಗೆ ಬೀಡಿ, ಮದ್ಯ ಮತ್ತು ಸ್ನೇಹಿತರೇ ಎಲ್ಲ! ಇಂಥ ರವಿ ಬೋಪಣ್ಣನ ಬದುಕಿನಲ್ಲಿಯೇ ಒಂದು ಕ್ರೈಮ್ ಸಂಭವಿಸುತ್ತದೆ. ಅದನ್ನು ಆತ ಹೇಗೆ ಭೇದಿಸುತ್ತಾನೆ ಅನ್ನೋದೇ ಕಥೆ. ಕೇವಲ ಮೂಲ ಚಿತ್ರದ ಕಥೆಯನ್ನಷ್ಟೇ ಎರವಲು ಪಡೆದಿರುವ ರವಿಚಂದ್ರನ್, ಇಲ್ಲಿ ತಮ್ಮದೇ ಶೈಲಿಯ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ!
ಕಥೆಯನ್ನು ಅತಿಕ್ರಮಿಸುವ ಶೃಂಗಾರ!
ಒಂದು ಕ್ರೈಮ್ ಥ್ರಿಲ್ಲರ್ ಸಿನಿಮಾ ಎಂದಾಗ, ಮುಖ್ಯವಾಗಿ ಅದರ ನಿರೂಪಣೆ ವೇಗವಾಗಿ ಸಾಗಬೇಕು. ಆಗಲೇ ಅದರ ನಿಜವಾದ ಅನುಭೂತಿ ದಕ್ಕುವುದು. ಆದರೆ ರವಿ ಬೋಪಣ್ಣನ ಕಥೆ ಅದಕ್ಕೆ ತದ್ವಿರುದ್ಧ! ಇಲ್ಲಿ ಕಥೆಗಿಂತ ನಾಯಕಿಯರ ಜೊತೆಗಿನ ಶೃಂಗಾರವೇ ಜಾಸ್ತಿ ಇದೆ. ಅದು ಯಾವ ಮಟ್ಟಕ್ಕೆಂದರೆ, ಸಿನಿಮಾದ ಮೂಲ ಆಶಯವನ್ನೇ ಬುಡಮೇಲು ಮಾಡುವಂತಿದೆ. ರವಿ ಬೋಪಣ್ಣನ ಪ್ರೇಯಸಿಯರಾಗಿ ಕಾಣಿಸಿಕೊಂಡಿದ್ದಾರೆ ಕಾವ್ಯಾ ಶೆಟ್ಟಿ ಮತ್ತು ರಾಧಿಕಾ ಕುಮಾರಸ್ವಾಮಿ. ರೊಮ್ಯಾಂಟಿಕ್ ದೃಶ್ಯಗಳಲ್ಲಿ ರವಿಚಂದ್ರನ್ ತಮ್ಮ ಎಂದಿನ ಶೃಂಗಾರದ ಸಿಗ್ನೇಚರ್‌ಗಳನ್ನು ಹಾಕಿದ್ದಾರೆ. ಆದರೆ ಇದರಿಂದಾಗಿ ಕಥೆ ನಿಂತಲ್ಲೇ ನಿಲ್ಲುತ್ತದೆ. ಇದು ನೋಡುಗನ ತಾಳ್ಮೆಗೂ ಬಹುದೊಡ್ಡ ಪರೀಕ್ಷೆಯನ್ನು ಒಡ್ಡುತ್ತದೆ.
ತೆರೆಯನ್ನು ಬಣ್ಣ ಬಣ್ಣಗಳಿಂದ ವಿನ್ಯಾಸ ಮಾಡಲು, ಸಂಭಾಷಣೆಯ ಮೂಲಕ ಉಪನ್ಯಾಸ ಮಾಡಲು ವ್ಯಯಿಸಿರುವ ಶ್ರಮವನ್ನು ಸ್ಕ್ರಿಪ್ಟ್ ಮೇಲೂ ರವಿಚಂದ್ರನ್ ನೀಡಬೇಕಿತ್ತು ಎನಿಸದೇ ಇರದು. ರವಿಚಂದ್ರನ್ ಸಿನಿಮಾಗಳನ್ನು ನೋಡಿದವರಿಗೆ 'ಎಲ್ಲ ಪೀಸ್ ಪೀಸ್...' ಡೈಲಾಗ್ ನೆನಪಿರುತ್ತದೆ. ಇಲ್ಲೂ ಕೂಡ ಅಂಥ 'ಪೀಸ್ ಪೀಸ್' ದೃಶ್ಯಗಳು ದಂಡಿ ದಂಡಿಯಾಗಿ ಸಿಗುತ್ತವೆ. ಅದೆಷ್ಟು ಗಾಜಿನ ಲೋಟ, ಬಾಟಲಿಗಳು ಸುಖಾಸುಮ್ಮನೆ ಪುಡಿ ಪುಡಿಯಾಗುತ್ತವೆ. ಸಿನಿಮಾವನ್ನು ಅಂದವಾಗಿ ಸೆರೆಹಿಡಿಯುವಲ್ಲಿ ಜಿಎಸ್‌ವಿ ಸೀತಾರಾಮ್ ಕ್ಯಾಮೆರಾ ಕೈಚಳಕ ಸಹಕಾರಿಯಾಗಿದೆ. ಹಾಡುಗಳು ನೆನಪಿನಲ್ಲಿ ಉಳಿಯುವುದು ಕಷ್ಟ. ಹಿನ್ನೆಲೆ ಸಂಗೀತವು ರವಿಚಂದ್ರನ್ ಅವರ ಹಿಂದಿನ ಸಿನಿಮಾಗಳ ನೆನಪು ಮಾಡುತ್ತದೆ. ಸಂಭಾಷಣೆ ಬಗ್ಗೆ ವಿಶೇಷವಾಗಿ ಹೇಳುವಂಥದ್ದೇನೂ ಇಲ್ಲ.
ರವಿಚಂದ್ರನ್ ಅವರಿಗೆ ಎರಡ್ಮೂರು ಶೇಡ್‌ನ ಪಾತ್ರವಿದೆ. ತಮ್ಮದೇ ಮ್ಯಾನರಿಸಂ, ಬಾಡಿ ಲ್ಯಾಂಗ್ವೇಜ್ ಮೂಲಕ ಅವರು ಗಮನಸೆಳೆಯುತ್ತಾರೆ. ರಾಧಿಕಾ ಕುಮಾರಸ್ವಾಮಿ ಹಾಡುಗಳಲ್ಲಿ ಮಿಂಚುತ್ತಾರೆ. ಕಥೆಗೆ ಟ್ವಿಸ್ಟ್ ನೀಡುವ ಪಾತ್ರದಲ್ಲಿ ಕಾವ್ಯಾ ಶೆಟ್ಟಿ ಇದ್ದಾರೆ. ಉಳಿದಂತೆ, ರಾಮಕೃಷ್ಣ, ಮೋಹನ್, ಜೈಜಗದೀಶ್, ಧರ್ಮ, ಲಕ್ಷ್ಮಣ್, ರಮೇಶ್ ಭಟ್ ಮುಂತಾದವರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸಿಕೊಳ್ಳುವ ಕಿಚ್ಚ ಸುದೀಪ್ ಅವರದ್ದು ಒಂದು ಚಿಕ್ಕ ಹಾಗೂ ಮಹತ್ವದ ಅತಿಥಿ ಪಾತ್ರ!
Ravichandran Kavya Shetty Radhika Kumaraswamy Starrer Ravi Bopanna Movie Review Rating In Kannada.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
09-09-25 05:59 pm
Mangalore Correspondent
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
Mangalore, Bajilakere, Suicide: ನನ್ನವರೇ ನನ್ನನ...
09-09-25 03:07 pm
ದಶಮ ಸಂಭ್ರಮದಲ್ಲಿ ಮಿಥುನ್ ರೈ ಸಾರಥ್ಯದ ಪಿಲಿನಲಿಕೆ ;...
09-09-25 02:30 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm