ಬ್ರೇಕಿಂಗ್ ನ್ಯೂಸ್
04-04-22 07:21 pm HK Desk news ದೇಶ - ವಿದೇಶ
ನವದೆಹಲಿ, ಎ.4: ಮೊನ್ನೆಯಷ್ಟೇ ಐಪಿಎಸ್ ಅಧಿಕಾರಿ ಹುದ್ದೆಯಿಂದ ನಿವೃತ್ತಿಯಾದ ಭಾಸ್ಕರ ರಾವ್ ರಾಜಕೀಯಕ್ಕೆ ಧುಮುಕಿದ್ದಾರೆ. ಭಾಸ್ಕರ ರಾವ್ ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
1990ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ ಭಾಸ್ಕರ ರಾವ್ ಕಳೆದ 2021ರ ಸೆಪ್ಟಂಬರ್ 21ರಂದು ತಮ್ಮ ಸ್ಥಾನಕ್ಕೆ ಸ್ವಯಂ ನಿವೃತ್ತಿ ಪಡೆಯುವುದಾಗಿ ಹೇಳಿ ರಾಜಿನಾಮೆ ಪತ್ರ ನೀಡಿದ್ದರು. ಆದರೆ, ರಾಜಿನಾಮೆ ಪತ್ರ ಸರಕಾರದ ಕಡೆಯಿಂದ ಸ್ವೀಕಾರ ಆಗಿರಲಿಲ್ಲ. ಸುದೀರ್ಘ ಎಂಟು ತಿಂಗಳು ಕಳೆದ ಬಳಿಕ ವಾರದ ಹಿಂದೆ ರಾಜಿನಾಮೆ ಸ್ವೀಕೃತ ಆಗಿತ್ತು.
ಕಳೆದ ಬಾರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಪತನಗೊಂಡು ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಭಾಸ್ಕರ ರಾವ್ ಅವರನ್ನು ಬೆಂಗಳೂರು ಕಮಿಷನರ್ ಆಗಿ ನೇಮಕ ಮಾಡಲಾಗಿತ್ತು. ಹೀಗಾಗಿ ಭಾಸ್ಕರ ರಾವ್ ಸ್ವಯಂ ನಿವೃತ್ತಿಯಾಗುತ್ತಿದ್ದಂತೆ ಬಿಜೆಪಿ ಸೇರಲಿದ್ದಾರೆ ಎಂದೇ ಹೇಳಲಾಗಿತ್ತು. ಕೆಲವು ಮೂಲಗಳು ಭಾಸ್ಕರ ರಾವ್ ಕಾಂಗ್ರೆಸ್ ಸೇರುವ ಇರಾದೆ ಹೊಂದಿದ್ದಾರೆ ಎನ್ನುತ್ತಿದ್ದವು. ಆದರೆ ಭಾಸ್ಕರ ರಾವ್ ಮಾತ್ರ ಈ ಬಗ್ಗೆ ಯಾವುದೇ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ.
ಭಾಸ್ಕರ ರಾವ್ ಬೆಂಗಳೂರು ಕಮಿಷನರ್ ಆಗಿದ್ದಾಗಲೇ ಸ್ಯಾಂಡಲ್ವುಡ್ಡಿನ ಡ್ರಗ್ಸ್ ನಂಟನ್ನು ಹೊರಗೆಳೆಯಲಾಗಿತ್ತು. ಸಿನಿ ತಾರೆಯರು ಸೇರಿದಂತೆ ಹೈಪ್ರೊಫೈಲ್ ಮಂದಿಯ ಹೆಸರು ಡ್ರಗ್ಸ್ ವಹಿವಾಟಿನಲ್ಲಿ ಶಾಮೀಲಾಗಿದ್ದು ಕಂಡುಬಂದಿತ್ತು. ಡ್ರಗ್ಸ್ ಪ್ರಕರಣದ ಬಗ್ಗೆ ಕರಾಳತೆ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದ ಮೊದಲ ಕಮಿಷನರ್ ಕೂಡ ಭಾಸ್ಕರ ರಾವ್ ಆಗಿದ್ದರು. ಹೀಗಾಗಿ ಅವರ ಜನಪ್ರಿಯತೆಯೂ ಹೆಚ್ಚಿತ್ತು.
ಪಂಜಾಬ್ ಗೆಲುವಿನ ಬಳಿಕ ಹೊಸ ಹುಮ್ಮಸ್ಸಿನಲ್ಲಿರುವ ಆಮ್ ಆದ್ಮಿ ಪಾರ್ಟಿ ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಪ್ರಭಾವಿ ನಾಯಕರನ್ನು ಬರಸೆಳೆದುಕೊಂಡು ಸ್ಪರ್ಧೆಗೆ ತಯಾರಿ ನಡೆಸುತ್ತಿದೆ. ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಈಗಾಗಲೇ ಪ್ರಭಾವಿಗಳು ನಮ್ಮ ಪಕ್ಷ ಸೇರಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ. ಇದೀಗ ಭಾಸ್ಕರ ರಾವ್ ದೆಹಲಿಯಲ್ಲೇ ಆಪ್ ಪಕ್ಷ ಸೇರಿದ್ದು, ಬೆಂಗಳೂರಿನ ಬಸವನಗುಡಿ ಕ್ಷೇತ್ರದಲ್ಲಿ ವಿಧಾನಸಭೆಗೆ ಸ್ಪರ್ಧಿಸಲು ಒಲವು ತೋರಿದ್ದಾರೆ. ಬಸವನಗುಡಿ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದ್ದು, ಅದರ ಪ್ರಾಬಲ್ಯ ಮುರಿಯಲು ವರ್ಷದ ಮೊದಲೇ ಕ್ಷೇತ್ರದಲ್ಲಿ ಚುನಾವಣೆ ಸಿದ್ಧತೆಗೆ ಭಾಸ್ಕರ ರಾವ್ ತೊಡಗಲಿದ್ದಾರೆ.
B Bhaskar Rao, a 1990-batch Karnataka cadre IPS officer and a native of Bengaluru, joined the Aam Aadmi Party (AAP) here on Monday after serving the police force for 32 years in various capacities.He was welcomed to the party fold by senior AAP leader and Delhi Deputy Chief Minister Manish Sisodia.AAP's Karnataka unit convenor Prithvi Reddy, election in-charge for the state and Timarpur MLA Dilip Pandey, organisation secretary Damodaran and other leaders were present on the occasion at the party headquarters here.
10-10-25 07:06 pm
HK News Desk
'ನವೆಂಬರ್ ಕ್ರಾಂತಿ' ಗುಮ್ಮದ ನಡುವೆಯೇ ಸಂಪುಟ ಸರ್ಜರಿ...
10-10-25 12:06 pm
ಟೀಕೆ ಬೆನ್ನಲ್ಲೇ ಬಿಗ್ ಬಾಸ್ ಮನೆ ಓಪನ್ ಮಾಡಿಸಿದ ಡಿಕ...
09-10-25 12:57 pm
ಕಾಂತಾರ ಭರ್ಜರಿ ರೆಸ್ಪಾನ್ಸ್ ; ಏಳೇ ದಿನಕ್ಕೆ 450 ಕೋ...
08-10-25 11:04 pm
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
10-10-25 10:37 pm
HK News Desk
ಆಪರೇಶನ್ ಸಿಂಧೂರದಿಂದ ಕಂಗೆಟ್ಟ ಪಾಕ್ ಉಗ್ರರು ; ಜೆಇಎ...
09-10-25 10:31 pm
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
Navi Mumbai International Airport, PM Narendr...
08-10-25 08:57 pm
10-10-25 06:52 pm
Mangalore Correspondent
ನಿಷೇಧಿತ ಪಿಎಫ್ಐ ಸಂಘಟನೆ ಪರವಾಗಿ ಪೋಸ್ಟ್ ; ಮುಸ್ಲಿಂ...
10-10-25 04:18 pm
Bharath Kumdel Arrest, Abdul Rahiman Murder:...
10-10-25 02:02 pm
ವಿಶ್ವಸಂಸ್ಥೆ ಅಧಿವೇಶನದಲ್ಲಿ ಭಾಗಿಯಾದ ದಕ್ಷಿಣ ಕನ್ನಡ...
09-10-25 08:22 pm
ಮಹೇಶ್ ಶೆಟ್ಟಿ ತಿಮರೋಡಿಗೆ ಕೋರ್ಟಿನಲ್ಲಿ ಹಿನ್ನಡೆ ;...
09-10-25 07:23 pm
10-10-25 09:48 pm
Udupi Correspondent
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm