ಬ್ರೇಕಿಂಗ್ ನ್ಯೂಸ್
11-03-22 10:41 pm HK Desk news ದೇಶ - ವಿದೇಶ
ನವದೆಹಲಿ, ಮಾರ್ಚ್ 11: ಉಕ್ರೇನ್ ದೇಶದ ಮರಿಯೊಪೋಲ್‌ನಲ್ಲಿ ಇತ್ತೀಚೆಗೆ ಕದನ ವಿರಾಮ ಘೋಷಿಸಿ ನಾಗರಿಕರ ಸ್ಥಳಾಂತರಕ್ಕೆ ರಷ್ಯಾ ಅವಕಾಶ ಮಾಡಿತ್ತು. ಆದರೆ, ಅಲ್ಲೀಗ ಸಿಕ್ಕಿಬಿದ್ದಿರುವ ನಾಗರಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಪ್ರತಿ 30 ನಿಮಿಷಕ್ಕೊಮ್ಮೆ ರಷ್ಯಾವು ಆ ಭಾಗದಲ್ಲಿ ದಾಳಿ ನಡೆಸುತ್ತಿದ್ದು ಅಲ್ಲಿಂದ ಜನರನ್ನು ಸ್ಥಳಾಂತರ ಮಾಡಲು ಸಾಧ್ಯವಾಗದಂತಹ ಸ್ಥಿತಿ ಉಂಟಾಗಿದೆ.
ಮಾರಿಯೊಪೋಲ್‌ನಲ್ಲಿ ಸುಮಾರು 4,00000 ಜನರು ಉಳಿದುಕೊಂಡಿದ್ದಾರೆ. ಅಲ್ಲಿನ ಮೇಯರ್ ವಾಡಿಮ್ ಬಾಯ್ಚೆಂಕೊ ರಷ್ಯಾದ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ರಷ್ಯಾ ಪಡೆಗಳು ನಿರ್ದಯಿಯಾಗಿ ದಾಳಿ ನಡೆಸುತ್ತಿವೆ. ಅಪಾರ್ಟ್ಮೆಂಟ್ ಕಟ್ಟಡಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದು ಜನರು ಕಂಗೆಡುವಂತಾಗಿದೆ ಎಂದು ಹೇಳಿದ್ದಾರೆ.
ಪ್ರತಿ 30 ನಿಮಿಷಗಳಿಗೊಮ್ಮೆ ರಷ್ಯಾ ವಿಮಾನಗಳು ಮಾರಿಯೊಪೋಲ್ ನಗರದ ಮೇಲೆ ಬರುತ್ತಿದ್ದು ವಸತಿ ಪ್ರದೇಶಗಳನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸುತ್ತಿದೆ, ನಾಗರಿಕರನ್ನು ಕೊಲ್ಲುತ್ತಿದೆ. ವೃದ್ಧರು, ಮಹಿಳೆಯರು, ಮಕ್ಕಳು ಎಲ್ಲರನ್ನೂ ಕೊಲ್ಲುತ್ತಿದೆ ಎಂದು ಮಾರಿಯುಪೋಲ್‌ನ ಮೇಯರ್ ವಾಡಿಮ್ ಬಾಯ್ಚೆಂಕೊ ಟ್ವೀಟ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ರಷ್ಯಾ ಶೆಲ್ ದಾಳಿಯಿಂದಾಗಿ ಗುರುವಾರ ಒಬ್ಬ ನಾಗರಿಕನಿಗೂ ಅಲ್ಲಿಂದ ಹೊರಬರಲು ಸಾಧ್ಯವಾಗಲಿಲ್ಲ. ಮೇಯರ್‌ಗೆ ಸಲಹೆಗಾರರಾದ ಪೆಟ್ರೋ ಆಂಡ್ರುಶೆಂಕೊ ಈ ಬಗ್ಗೆ ಮಾಹಿತಿ ನೀಡಿದ್ದು, 'ರಷ್ಯನ್ನರು ನಮ್ಮ ಜನರನ್ನು ಸಂಪೂರ್ಣವಾಗಿ ನಾಶ ಮಾಡಲು ಬಯಸಿದ್ದಾರೆ. ಜನರ ಸ್ಥಳಾಂತರ ಪ್ರಕ್ರಿಯೆ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಉಕ್ರೇನ್‌ನಲ್ಲಿ ಬಂದರು ನಗರಿ ಮಾರಿಯುಪೋಲ್ ಪ್ರಮುಖ ಪ್ರದೇಶ. ಇದನ್ನು ವಶಕ್ಕೆ ಪಡೆದರೆ ರಷ್ಯಾಕ್ಕೆ ಪೂರ್ವದಲ್ಲಿ ಮಾಸ್ಕೋ ಪರ ಇರುವ ಪ್ರದೇಶಗಳನ್ನು ಮತ್ತು ದಕ್ಷಿಣಕ್ಕೆ ರಷ್ಯಾಕ್ಕೆ ಸೇರಿಸಿದ ಕ್ರೆಮಿಯಾವನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ಉಕ್ರೇನ್ ಅಧಿಕಾರಿಗಳ ಪ್ರಕಾರ ರಷ್ಯಾದ ದಾಳಿಯಿಂದ ಈವರೆಗೆ 1,300 ಸಾವು ಆಗಿದೆ. ವಿಶ್ವಸಂಸ್ಥೆಯು ಗುರುವಾರ ಉಕ್ರೇನ್‌ನಾದ್ಯಂತ 41 ಮಕ್ಕಳು ಸೇರಿದಂತೆ 549 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಸಾವಿನ ನೈಜ ಗಣಿತ ಇನ್ನೂ ಹೆಚ್ಚಿನದಿರುತ್ತದೆ.
Civilians trapped in Ukraine’s Mariupol have gone through “two days of hell”, a local official said on Friday, claiming Russian attacks “every 30 minutes” have scuppered any attempt at evacuations from the besieged port city.
10-10-25 07:06 pm
HK News Desk
'ನವೆಂಬರ್ ಕ್ರಾಂತಿ' ಗುಮ್ಮದ ನಡುವೆಯೇ ಸಂಪುಟ ಸರ್ಜರಿ...
10-10-25 12:06 pm
ಟೀಕೆ ಬೆನ್ನಲ್ಲೇ ಬಿಗ್ ಬಾಸ್ ಮನೆ ಓಪನ್ ಮಾಡಿಸಿದ ಡಿಕ...
09-10-25 12:57 pm
ಕಾಂತಾರ ಭರ್ಜರಿ ರೆಸ್ಪಾನ್ಸ್ ; ಏಳೇ ದಿನಕ್ಕೆ 450 ಕೋ...
08-10-25 11:04 pm
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
09-10-25 10:31 pm
HK News Desk
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
Navi Mumbai International Airport, PM Narendr...
08-10-25 08:57 pm
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
10-10-25 06:52 pm
Mangalore Correspondent
ನಿಷೇಧಿತ ಪಿಎಫ್ಐ ಸಂಘಟನೆ ಪರವಾಗಿ ಪೋಸ್ಟ್ ; ಮುಸ್ಲಿಂ...
10-10-25 04:18 pm
Bharath Kumdel Arrest, Abdul Rahiman Murder:...
10-10-25 02:02 pm
ವಿಶ್ವಸಂಸ್ಥೆ ಅಧಿವೇಶನದಲ್ಲಿ ಭಾಗಿಯಾದ ದಕ್ಷಿಣ ಕನ್ನಡ...
09-10-25 08:22 pm
ಮಹೇಶ್ ಶೆಟ್ಟಿ ತಿಮರೋಡಿಗೆ ಕೋರ್ಟಿನಲ್ಲಿ ಹಿನ್ನಡೆ ;...
09-10-25 07:23 pm
10-10-25 09:48 pm
Udupi Correspondent
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm