ಬ್ರೇಕಿಂಗ್ ನ್ಯೂಸ್
10-03-22 08:42 pm HK Desk news ದೇಶ - ವಿದೇಶ
ಲಕ್ನೋ, ಮಾ.10 : ಉತ್ತರ ಪ್ರದೇಶದ ಮುಖ್ಯಮಂತ್ರಿ, ಹಿಂದು ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಗೋರಖ್ ಪುರ್ ವಿಧಾನಸಭೆ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದು ಬೀಗಿದ್ದಾರೆ. ಸಾಮಾನ್ಯವಾಗಿ ಲೋಕಸಭೆ ಕ್ಷೇತ್ರಗಳಲ್ಲಿ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಸಾಮಾನ್ಯ. ಆದರೆ ಅಂದಾಜು ಎರಡೂವರೆ ಲಕ್ಷ ಆಸುಪಾಸು ಮತಗಳುಳ್ಳ ವಿಧಾನಸಭೆ ಕ್ಷೇತ್ರದಲ್ಲಿ ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವುದು ದೊಡ್ಡ ಮೈಲಿಗಲ್ಲು.
ಉತ್ತರ ಪ್ರದೇಶದಲ್ಲಂತೂ ಒಂದು ಅವಧಿಗೆ ಸಿಎಂ ಆದವರು ಮತ್ತೆ ಮತದಾರನ ವಿಶ್ವಾಸ ಗಳಿಸಿ, ಅಧಿಕಾರಕ್ಕೇರುವುದು ಕಷ್ಟದ ಮಾತೇ ಆಗಿತ್ತು. 37 ವರ್ಷಗಳ ಹಿಂದೆ ಕಾಂಗ್ರೆಸ್ ಕೊನೆಯ ಬಾರಿಗೆ ಈ ರಾಜ್ಯದಲ್ಲಿ ಎರಡನೇ ಬಾರಿಗೆ ಬಹುಮತದಲ್ಲಿ ಅಧಿಕಾರ ಗಳಿಸಿದ ಸಾಧನೆ ಮಾಡಿತ್ತು. ಇದೀಗ ಐದು ವರ್ಷಗಳ ಅಧಿಕಾರಾವಧಿ ಪೂರೈಸಿದ್ದಲ್ಲದೆ, ಮತ್ತೊಂದು ಅವಧಿಗೆ ಯೋಗಿ ಆದಿತ್ಯನಾಥ್ ಬಹುಮತದಿಂದ ಆಯ್ಕೆಯಾಗಿದ್ದಾರೆ. ಎರಡೂವರೆ ದಶಕದ ಹಿಂದೆ ಕೇವಲ ಗೋರಕ್ಷಾ ಪೀಠದ ಸ್ವಾಮೀಜಿ ಮಾತ್ರ ಆಗಿದ್ದ ಆದಿತ್ಯನಾಥ್, ಈಗ ದೇಶದ ಪ್ರಭಾವಿ ನಾಯಕರಲ್ಲಿ ಒಬ್ಬರೆಂಬ ಸ್ಥಾನ ಪಡೆದಿದ್ದಾರೆ.
1998ರಲ್ಲಿ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದ ಸಂದರ್ಭದಲ್ಲಿ ಆದಿತ್ಯನಾಥ್ ಅತ್ಯಂತ ಕಿರಿಯ ಲೋಕಸಭೆ ಸದಸ್ಯರಾಗಿದ್ದರು. ಆಗ ಅವರಿಗೆ 42 ವಯಸ್ಸು. ಆನಂತರ ಸತತ ಐದು ಬಾರಿಗೆ ಗೋರಖಪುರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಯೋಗಿ, ಇಡೀ ಉತ್ತರ ಪ್ರದೇಶದಲ್ಲಿ ತನ್ನ ಕೆಲಸ ಕಾರ್ಯಗಳಿಂದ ಆಕರ್ಷಣೆ ಮೂಡಿಸಿದ್ದರು. 2017ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಬಹುಮತ ಗಳಿಸಿದಾಗ, ಅಚ್ಚರಿಯ ಆಯ್ಕೆ ಎಂಬಂತೆ ಸಂಸದರಾಗಿದ್ದ ಯೋಗಿಯನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತಂದು ಕೂರಿಸಲಾಗಿತ್ತು. ಐದು ವರ್ಷಗಳಲ್ಲಿ ಉತ್ತರ ಪ್ರದೇಶವನ್ನು ಅಭೂತಪೂರ್ವ ರೀತಿಯಲ್ಲಿ ಬದಲಾಯಿಸಿದ್ದಲ್ಲದೆ, ಗೂಂಡಾ ರಾಜ್ಯವಾಗಿದ್ದ ದೇಶದ ಅತಿದೊಡ್ಡ ರಾಜ್ಯವನ್ನು ಯೋಗಿ ವಿಭಿನ್ನ ರೀತಿಯಲ್ಲಿ ಅಭಿವೃದ್ಧಿ ಪಥದತ್ತ ಮುನ್ನಡೆಸಿದ್ದಾರೆ.ಅತಿ ದೊಡ್ಡ ನಗರಕ್ಕಂಟಿತ್ತು ಕಳಂಕ.
ಇದಲ್ಲದೆ, ಯೋಗಿ ಅವರು ನೋಯ್ಡಾ ಮೇಲಿನ ಅಪವಾದವನ್ನೂ ಸುಳ್ಳಾಗಿಸಿದ್ದಾರೆ. ರಾಜಧಾನಿ ದೆಹಲಿಗೆ ಪರ್ಯಾಯವಾಗಿ ಉತ್ತರ ಪ್ರದೇಶದ ಗಡಿಭಾಗ ನೋಯ್ಡಾವನ್ನು ಬೃಹತ್ ನಗರವಾಗಿ ರೂಪಿಸಲಾಗಿತ್ತು. 1988ರಲ್ಲಿ ನೋಯ್ಡಾ ಸಿಟಿಯಾದ ಬಳಿಕ ರಾಜ್ಯದ ಮುಖ್ಯಮಂತ್ರಿಗಳು ಅಲ್ಲಿಗೆ ಭೇಟಿ ನೀಡುವುದರಿಂದ ದೂರ ಉಳಿದಿದ್ದರು. ಅಲ್ಲಿಗೆ ಭೇಟಿ ಕೊಟ್ಟ ಮುಖ್ಯಮಂತ್ರಿ ಮತ್ತೆ ಗೆಲ್ಲುವುದಿಲ್ಲ. ಮತ್ತೊಮ್ಮೆ ಅಧಿಕಾರ ಹಿಡಿಯುವುದಿಲ್ಲ ಎಂದು ನೋಯ್ಡಾ ಬಗ್ಗೆ ಕಳಂಕ ಹೊರಿಸಿದ್ದರು. ಕಾಕತಾಳೀಯ ಎಂಬಂತೆ 1989ರಲ್ಲಿ ಆಗಿನ ಕಾಂಗ್ರೆಸ್ ಸಿಎಂ ಬಹಾದುರ್ ಸಿಂಗ್ ನೆಹರು ಪಾರ್ಕ್ ಉದ್ಘಾಟನೆಗೆಂದು ನೋಯ್ಡಾಕ್ಕೆ ಭೇಟಿ ನೀಡಿದ್ದರು. ಮರು ವರ್ಷದಲ್ಲಿ ಚುನಾವಣೆ ನಡೆದಾಗ, ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದಲ್ಲದೆ ಬಹಾದುರ್ ಸಿಂಗ್ ಸಿಎಂ ಸ್ಥಾನವನ್ನೂ ಕಳಕೊಂಡಿದ್ದರು. ಆನಂತರ ಕಲ್ಯಾಣ್ ಸಿಂಗ್, ಮುಲಾಯಂ ಸಿಂಗ್ ಯಾದವ್ ಕೂಡ ನೋಯ್ಡಾಕ್ಕೆ ಭೇಟಿ ನೀಡಿದ ಬಳಿಕ ಅಧಿಕಾರ ಕಳಕೊಂಡಿದ್ದು ಆ ನಗರಕ್ಕೆ ಕಳಂಕ ಮೆತ್ತಿಕೊಳ್ಳುವಂತಾಗಿತ್ತು.
ತದನಂತರ, ರಾಜನಾಥ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗಲೂ ನೋಯ್ಡಾದಲ್ಲಿ ಫ್ಲೈಓವರ್ ಉದ್ಘಾಟನೆಗೆ ತೆರಳಿದ್ದರು. ಆನಂತರ ಕಾಕತಾಳೀಯ ಎಂಬಂತೆ ರಾಜನಾಥ್ ಸಿಂಗ್ ರಾಜ್ಯ ರಾಜಕಾರಣದಿಂದ ದೆಹಲಿ ರಾಜಕಾರಣಕ್ಕೆ ಸ್ಥಳಾಂತರಗೊಂಡಿದ್ದರು. 2007ರಲ್ಲಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಸಿಎಂ ಆಗಿದ್ದ ಕಾಲದಲ್ಲಿ ತನ್ನ ಆಪ್ತನ ಮಗಳ ಮದುವೆಯ ಕಾರ್ಯಕ್ರಮಕ್ಕೆಂದು ನೋಯ್ಡಾಕ್ಕೆ ಭೇಟಿ ನೀಡಿದ್ದರು. ಆದರೆ ಮಾಯಾವತಿ ಆಕೂಡಲೇ ಅಧಿಕಾರ ಕಳಕೊಳ್ಳದೇ ಇದ್ದುದು ನೋಯ್ಡಾ ಮೇಲಿನ ಅಪವಾದ ದೂರವಾಯ್ತು ಅನ್ನುವ ಮಾತು ಕೇಳಿಬಂದಿತ್ತು. 2012ರಲ್ಲಿ ನಡೆದ ಚುನಾವಣೆಯಲ್ಲಿ ಮಾಯಾವತಿ ಅಧಿಕಾರ ಕಳಕೊಂಡು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದರು. ಅಖಿಲೇಶ್, ತಂದೆಯ ಹಾದಿಯಲ್ಲೇ ನೋಯ್ಡಾ ಭೇಟಿ ನೀಡುವುದರಿಂದ ದೂರ ಉಳಿದಿದ್ದರು. 2013ರಲ್ಲಿ ನೋಯ್ಡಾದಲ್ಲಿ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕಿನ ಸಮ್ಮೇಳನ ಏರ್ಪಡಿಸಲಾಗಿತ್ತು. ಪ್ರಧಾನಿ ಮನಮೋಹನ್ ಸಿಂಗ್ ಮುಖ್ಯ ಅತಿಥಿಯಾಗಿದ್ದರು. ರಾಜ್ಯಕ್ಕೆ ಪ್ರಧಾನಿ ಬರುವ ಕಾರ್ಯಕ್ರಮ ಆಗಿದ್ದರೂ, ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೋಯ್ಡಾ ಭೀತಿಯಿಂದಾಗಿ ಅಲ್ಲಿಗೆ ಬರದೆ ದೂರವುಳಿದಿದ್ದರು.
1988ರಲ್ಲಿ ಬಹಾದುರ್ ಸಿಂಗ್ ನೋಯ್ಡಾ ಭೇಟಿಯಿಂದ ಅಧಿಕಾರ ಕಳಕೊಂಡ ಬಳಿಕ ಅಂಟಿಕೊಂಡಿದ್ದ ಕಳಂಕ ಈವರೆಗೂ ಹಾಗೆಯೇ ಇತ್ತು. ಪ್ರತಿ ಬಾರಿಯೂ ಮುಖ್ಯಮಂತ್ರಿ ಆಗುತ್ತಿದ್ದವರು ರಾಜ್ಯದ ಅತಿ ದೊಡ್ಡ ನಗರವಾಗಿದ್ದರೂ ನೋಯ್ಡಾದ ಭೀತಿಯನ್ನು ಹೊಂದಿರುತ್ತಿದ್ದರು. ಕಳೆದ ಬಾರಿ ಯೋಗಿ ಆದಿತ್ಯನಾಥ್ ನೋಯ್ಡಾದಲ್ಲಿ ಎಕ್ಸ್ ಪ್ರೆಸ್ ವೇ ಉದ್ಘಾಟನೆಗೆ ತೆರಳಿದ್ದರು. ಅಲ್ಲಿನ ಅಪವಾದ, ಕಳಂಕದ ಬಗ್ಗೆ ಗೊತ್ತಿದ್ದರೂ, ನೋಯ್ಡಾಕ್ಕೆ ತೆರಳಿದ್ದು ಸ್ಥಳೀಯ ವಾಹಿನಿಗಳಿಗೆ ಸುದ್ದಿಯಾಗಿದ್ದರು. ಆದರೆ ಈಗ ನಡೆದಿರುವ ಚುನಾವಣೆಯಲ್ಲಿ ಯೋಗಿ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೇರಿದ್ದಾರೆ. ಆಮೂಲಕ ನೋಯ್ಡಾ ಮೇಲಿನ ಕಳಂಕವನ್ನು ನೀಗಿಸಿದ್ದಾರೆ.
Yogi Adityanath, born Ajay Mohan Bisht, is a politician with a difference in many ways. From someone who wasn’t even part of the BJP’s star campaigner list in 2017, to becoming the first UP CM in 37 years who looks set for a consecutive term in office, the 49-year-old monk-politician has come a long way. Born in a lower-middle class home to a forest ranger and his wife in Uttarakhand’s Pauri Garhwal, the “smart boy” Ajay, had once joined the Students’ Federation of India (SFI) at the behest of a relative, only to realise that the party’s sensibilities did not suit him. He then went on to join the RSS student wing, the Akhil Bharatiya Vidyarthi Parishad (ABVP), says Shantanu Gupta
10-10-25 07:06 pm
HK News Desk
'ನವೆಂಬರ್ ಕ್ರಾಂತಿ' ಗುಮ್ಮದ ನಡುವೆಯೇ ಸಂಪುಟ ಸರ್ಜರಿ...
10-10-25 12:06 pm
ಟೀಕೆ ಬೆನ್ನಲ್ಲೇ ಬಿಗ್ ಬಾಸ್ ಮನೆ ಓಪನ್ ಮಾಡಿಸಿದ ಡಿಕ...
09-10-25 12:57 pm
ಕಾಂತಾರ ಭರ್ಜರಿ ರೆಸ್ಪಾನ್ಸ್ ; ಏಳೇ ದಿನಕ್ಕೆ 450 ಕೋ...
08-10-25 11:04 pm
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
09-10-25 10:31 pm
HK News Desk
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
Navi Mumbai International Airport, PM Narendr...
08-10-25 08:57 pm
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
10-10-25 06:52 pm
Mangalore Correspondent
ನಿಷೇಧಿತ ಪಿಎಫ್ಐ ಸಂಘಟನೆ ಪರವಾಗಿ ಪೋಸ್ಟ್ ; ಮುಸ್ಲಿಂ...
10-10-25 04:18 pm
Bharath Kumdel Arrest, Abdul Rahiman Murder:...
10-10-25 02:02 pm
ವಿಶ್ವಸಂಸ್ಥೆ ಅಧಿವೇಶನದಲ್ಲಿ ಭಾಗಿಯಾದ ದಕ್ಷಿಣ ಕನ್ನಡ...
09-10-25 08:22 pm
ಮಹೇಶ್ ಶೆಟ್ಟಿ ತಿಮರೋಡಿಗೆ ಕೋರ್ಟಿನಲ್ಲಿ ಹಿನ್ನಡೆ ;...
09-10-25 07:23 pm
10-10-25 07:43 pm
Bangalore Correspondent
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am