ಬ್ರೇಕಿಂಗ್ ನ್ಯೂಸ್
27-02-22 05:07 pm HK Desk news ದೇಶ - ವಿದೇಶ
ನವದೆಹಲಿ, ಫೆ 27: 250 ಭಾರತೀಯ ನಾಗರಿಕರನ್ನು ಹೊತ್ತ ಎರಡನೇ ಏರ್ ಇಂಡಿಯಾ ವಿಮಾನ ನವದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ 2.45ಕ್ಕೆ ಬಂದಿಳಿಯಿತು.
ಈ ವಿಮಾನ ರನ್‌ವೇ ಸ್ಪರ್ಶಿಸುತ್ತಿದ್ದಂತೆ ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಸಿಲುಕಿ ಪ್ರಾಣಭಯದಿಂದ ಒದ್ದಾಡಿದ ಭಾರತೀಯ ನಾಗರಿಕರು ಅರೆಕ್ಷಣ ನಿಟ್ಟುಸಿರುಬಿಟ್ಟರು, ನಿರಾಳರಾದರು. ವಿಮಾನದಲ್ಲಿದ್ದ ಎಲ್ಲರ ಮೊಗದಲ್ಲೂ ಮುಗುಳುನಗೆ ಕಾಣುತ್ತಿತ್ತು. ಉಕ್ರೇನ್ ನೆರೆದೇಶ ರೊಮೇನಿಯಾ ರಾಜಧಾನಿ ಬುಚಾರೆಸ್ಟ್ ನಗರದಿಂದ ಕಳೆದ ರಾತ್ರಿ ಈ ವಿಮಾನ ಟೇಕ್ ಆಫ್ ಆಗಿತ್ತು.
ಏರ್ ಇಂಡಿಯಾ ವಿಮಾನದಲ್ಲಿ ಮಾತನಾಡಿದ ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಈ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ಬಂದು ಭಾರತೀಯ ನಾಗರಿಕರಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮಾತನಾಡಿದ ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಭಾರತೀಯ ನಾಗರಿಕರಿಗೆ ಗುಲಾಬಿ ಹೂ ನೀಡಿ ತಾಯ್ನಾಡಿಗೆ ಆತ್ಮೀಯವಾಗಿ ಸ್ವಾಗತಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಉಕ್ರೇನ್ ಅಧ್ಯಕ್ಷರು ಹಾಗು ರಷ್ಯಾ ಸರ್ಕಾರದ ಜೊತೆ ನಿರಂತರ ಮಾತುಕತೆ ನಡೆಸಿದ್ದು, ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ದೇಶಕ್ಕೆ ಮರಳಿ ಕರೆತರುವ ಬಗ್ಗೆ ಸಂವಾದ ನಡೆದಿದೆ. ಇದಕ್ಕೆ ಅಹರ್ನಿಶಿ ಶ್ರಮಪಟ್ಟ ಏರ್ ಇಂಡಿಯಾ ಸಿಬ್ಬಂದಿಯನ್ನು ಅಭಿನಂದಿಸಿದರು.
ಏರ್ ಇಂಡಿಯಾ ಕ್ಯಾಪ್ಟನ್ ಅಂಚಿತ್ ಭಾರದ್ವಾಜ್ ಮಾತನಾಡಿ, 'ರೊಮೇನಿಯಾದಿಂದ ಟೆಹ್ರಾನ್ ಮತ್ತು ಪಾಕಿಸ್ತಾನದ ಮೂಲಕ ಸಾಗಿ ಬರಲು ನಮಗೆ ಏರ್ ಟ್ರಾಫಿಕ್ ಕಂಟ್ರೋಲ್(ಎಟಿಸಿ) ಮೂಲಕ ಉತ್ತಮ ಸಹಕಾರ ಸಿಕ್ಕಿತು. ನಾವು ಕೇಳದೆಯೇ ನಮಗೆ ನೇರಹಾದಿಯನ್ನು ಯಾವುದೇ ಅಡಚಣೆ ಇಲ್ಲದೆ ಕೊಟ್ಟಿದ್ದು, ಯಶಸ್ವಿಯಾಗಿ ಭಾರತಕ್ಕೆ ಆಗಮಿಸಲು ಸಾಧ್ಯವಾಯಿತು. ಇದು ನಮಗೆ ವಿಶೇಷ ಅನುಭವ ನೀಡಿದೆ' ಎಂದು ವಿವರಿಸಿದರು.
ಉಕ್ರೇನ್ ದೇಶದಿಂದ ಮರಳಿದ ಭಾರತೀಯರ ಪ್ರತಿಕ್ರಿಯೆ ಏರ್ ಇಂಡಿಯಾ ಕ್ಯಾಬಿನ್ ಕ್ರೂ ಇನ್‌ಚಾರ್ಜ್ ರಜನಿ ಪೌಲ್ ಪ್ರತಿಕ್ರಿಯಿಸಿ, 'ಯುಕ್ರೇನ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತಂದಿದ್ದಕ್ಕೆ ನಮಗೆ ಹೆಮ್ಮೆ ಅನ್ನಿಸುತ್ತಿದೆ. ಕೆಲವು ವಿದ್ಯಾರ್ಥಿಗಳು ಸೂಚಿಸಿದ ಪಿಕ್ ಅಪ್ ಪಾಯಿಂಟ್‌ಗೆ ಲಗೇಜು ಸಮೇತ 9-10 ಕಿ.ಮೀ ನಡೆದೇ ಬಂದರು. ಭಾರತ ಸರ್ಕಾರಕ್ಕೆ ಧನ್ಯವಾದಗಳು' ಎಂದು ಸಂತಸ ಹಂಚಿಕೊಂಡರು.
ಇದೇ ವೇಳೆ ವಿದ್ಯಾರ್ಥಿನಿಯೊಬ್ಬರು ಅನುಭವ ಹಂಚಿಕೊಳ್ಳುತ್ತಾ, 'ಉಕ್ರೇನ್‌ನ ಹಲವು ಸ್ಥಳಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಅಲ್ಲಿನ ನಾಗರಿಕರು ತಮ್ಮ ದೇಶವನ್ನು ಸಂರಕ್ಷಿಸಿಕೊಳ್ಳಲು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ನಾವಿದ್ದ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರಗಳೂ ಸೇರಿ ಇನ್ನಿತರ ಸಾಮಗ್ರಿಗಳನ್ನು ಸಂಗ್ರಹಿಸಿಕೊಟ್ಟುಕೊಳ್ಳುತ್ತಿದ್ದರು' ಎಂದರು. ಯುದ್ಧಪೀಡೀತ ಉಕ್ರೇನ್ ದೇಶದಿಂದ ಭಾರತೀಯ ವಿದ್ಯಾರ್ಥಿಗಳು, ನಾಗರಿಕರನ್ನು ಆಪರೇಷನ್ ಗಂಗಾ ಹೆಸರಿನಲ್ಲಿ ಭಾರತ ಸರ್ಕಾರ ವಾಪಸ್ ಕರೆಯಿಸಿಕೊಳ್ಳುತ್ತಿದೆ. ಇನ್ನು ಮೂರನೇ ಏರ್ ಇಂಡಿಯಾ ವಿಮಾನ ಹಂಗೇರಿಯ ಬುಡಾಪೆಸ್ಟ್ ನಗರಿಂದ ಇಂದು ನವದೆಹಲಿಗೆ ಆಗಮಿಸಲಿದೆ.
The Indian government has successfully brought back 250 more citizens from Ukraine in the evacuation mission named Operation Ganga. As the Russia-Ukraine crisis leads to increased tensions, the government of India has been successful in bringing back the second batch of 250 citizens, including several students, from Romania after helping them exit Ukraine amid the current situation.
09-10-25 12:57 pm
Bangalore Correspondent
ಕಾಂತಾರ ಭರ್ಜರಿ ರೆಸ್ಪಾನ್ಸ್ ; ಏಳೇ ದಿನಕ್ಕೆ 450 ಕೋ...
08-10-25 11:04 pm
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
09-10-25 10:31 pm
HK News Desk
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
Navi Mumbai International Airport, PM Narendr...
08-10-25 08:57 pm
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
09-10-25 08:22 pm
Mangalore Correspondent
ಮಹೇಶ್ ಶೆಟ್ಟಿ ತಿಮರೋಡಿಗೆ ಕೋರ್ಟಿನಲ್ಲಿ ಹಿನ್ನಡೆ ;...
09-10-25 07:23 pm
13 ವರ್ಷಗಳ ಬಳಿಕ ಮನೆ ಸೇರಿದ ಯುವಕ ; ಪಿಯುಸಿ ಪರೀಕ್ಷ...
09-10-25 01:59 pm
ರಾಜಕೀಯ ಲಾಭಕ್ಕೆ ಶಾರದೋತ್ಸವ ಘಟನೆಯನ್ನ ಬಿಜೆಪಿ ಹಿಂದ...
09-10-25 11:58 am
Ullal, Fish Meal Factory Fire Breaks: ಉಳ್ಳಾಲ...
08-10-25 10:09 pm
09-10-25 05:30 pm
Mangalore Correspondent
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm