ಬ್ರೇಕಿಂಗ್ ನ್ಯೂಸ್
29-01-22 10:20 pm HK Desk news ದೇಶ - ವಿದೇಶ
ಹೈದರಾಬಾದ್, ಜ.29 : ಅಲ್ಲಿನ ಗಲ್ಲಿ ಗಲ್ಲಿಗಳಲ್ಲಿ ದಿನವೂ ಬೆಳಗ್ಗೆ 8.30 ಆಗುತ್ತಿದ್ದಂತೆ ರಾಷ್ಟ್ರ ಗೀತೆ ಮೊಳಗುತ್ತದೆ. ಜನರು ಎಲ್ಲಿ ಏನು ಕೆಲಸ ಮಾಡುತ್ತಿರುತ್ತಾರೋ, ಅಲ್ಲಿಯೇ ಎದ್ದು ನಿಲ್ಲುತ್ತಾರೆ. ರಸ್ತೆ ಮಧ್ಯದಲ್ಲಿಯೇ ಸೆಲ್ಯೂಟ್ ಹೊಡೆದು 52 ಸೆಕೆಂಡ್ ಕಾಲ ಸ್ತಬ್ಧರಾಗುತ್ತಾರೆ. ಹೌದು.. ತೆಲಂಗಾಣ ರಾಜ್ಯದ ನಲ್ಗೊಂಡಾ ನಗರದ 12 ಪ್ರಮುಖ ಏರಿಯಾಗಳಲ್ಲಿ ದೇಶದಲ್ಲೇ ಮೊದಲ ಬಾರಿಗೆ ವಿಭಿನ್ನ ಆಚರಣೆ ಮೊದಲ್ಗೊಂಡಿದೆ.
ಜನರು ಜಾತಿ, ಧರ್ಮ, ಮತ ಭೇದ ಮರೆತು ಎದ್ದು ನಿಂತು ರಾಷ್ಟ್ರಗೀತೆಯನ್ನು ಗೌರವಿಸುತ್ತಾರೆ. ಇದೇ ಜನವರಿ 23ರಂದು ಈ ರೀತಿಯ ವಿಭಿನ್ನ ಕಾರ್ಯಕ್ರಮ ನಲ್ಗೊಂಡಾ ನಗರದಲ್ಲಿ ಆರಂಭಗೊಂಡಿದ್ದು, ದಿನ ದಿನವೂ ಅಲ್ಲಿನ ವಿವಿಧ ಪ್ರದೇಶಗಳಲ್ಲಿ ಹೊಸ ಟ್ರೆಂಡ್ ವ್ಯಾಪಿಸತೊಡಗಿದೆ. ಪ್ರತಿ ದಿನವೂ ರಾಷ್ಟ್ರಗೀತೆ ಹಾಡುವುದರಿಂದ ಜನರಲ್ಲಿ ದೇಶಭಕ್ತಿಯ ಉದ್ದೀಪನ ಆಗುತ್ತದೆ ಎನ್ನುವ ನಂಬಿಕೆಯಿಂದ ಈ ಆಚರಣೆಯನ್ನು ಜಾರಿಗೆ ತರಲಾಗಿದೆ.
ಇದಕ್ಕಾಗಿ ನಲ್ಗೊಂಡಾದಲ್ಲಿ ಜನ ಗಣ ಮನ ಉತ್ಸವ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದ್ದು ಕರ್ಣಾಟಿ ವಿಜಯ ಕುಮಾರ್ ಇದರ ಅಧ್ಯಕ್ಷರು. ಅಂದಹಾಗೆ, ಈ ಹೊಸ ರೀತಿಯ ಆಚರಣೆಗೆ ಪ್ರೇರಣೆಯಾಗಿರುವುದು 75ನೇ ಸ್ವಾತಂತ್ರ್ಯೋತ್ಸವ. ಈ ಬಾರಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಜನವರಿ 23ರಿಂದಲೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ನಡೆಸಲಾಗಿತ್ತು. ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸುಭಾಶ್ಚಂದ್ರ ಬೋಸರ 125ನೇ ಜನ್ಮ ದಿನಾರಣೆ ನಿಮಿತ್ತ ಗಣರಾಜ್ಯೋತ್ಸವದ ಸಂಭ್ರಮವನ್ನು ಅಂದಿನಿಂದಲೇ ಆರಂಭಿಸಲಾಗಿತ್ತು.
ಅದೇ ಸಂದರ್ಭದಲ್ಲಿ ಕರ್ಣಾಟಿ ವಿಜಯ ಕುಮಾರ್ ನೇತೃತ್ವದಲ್ಲಿ ಸಾರ್ವಜನಿಕ ರಾಷ್ಟ್ರ ಗೀತೆ ಹಾಡುವ ಕಾರ್ಯಕ್ರಮ ಜಾರಿಗೆ ತರಲಾಗಿತ್ತು. ಹೊಸ ಆಚರಣೆಯೀಗ ನಲ್ಗೊಂಡಾ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಟ್ರೆಂಡ್ ಆಗಿದ್ದು, ಒಂದು ವಾರದಲ್ಲಿ 12 ಕಡೆಗಳಲ್ಲಿ ರಾಷ್ಟ್ರಗೀತೆ ಮೊಳಗಲಾರಂಭಿಸಿದೆ. ಪ್ರತಿ ದಿನವೂ ಬೆಳಗ್ಗೆ 8.30 ಆಗುತ್ತಿದ್ದಂತೆ ಜನರು ತಮ್ಮ ಕೆಲಸ ಕಾರ್ಯಗಳನ್ನು ರಾಷ್ಟ್ರಗೀತೆ ಕೇಳುತ್ತಿದ್ದಂತೆ ಸೆಲ್ಯೂಟ್ ಹೊಡೆದು ಎದ್ದು ನಿಲ್ಲುತ್ತಾರೆ. ಗೌರವದ ನಮನ ಸಲ್ಲಿಸುತ್ತಾರೆ.
ಕಳೆದ ಬಾರಿ 2020ರ ಜುಲೈನಲ್ಲಿ ಲಡಾಖ್ ಗಡಿಯಲ್ಲಿ ಚೀನಾ ಸೈನಿಕರ ಜೊತೆಗಿನ ಸಂಘರ್ಷದಲ್ಲಿ ಮಡಿದಿದ್ದ ಕರ್ನಲ್ ಸಂತೋಷ್ ಬಾಬು ತೆಲಂಗಾಣದ ನಲ್ಗೊಂಡಾ ಜಿಲ್ಲೆಯವರು. ಇದೇ ನಲ್ಗೊಂಡಾ ನಗರದಲ್ಲಿ ಹುಟ್ಟಿ ಬೆಳೆದಿದ್ದು, ಹುತಾತ್ಮ ಶವ ಬಂದಿದ್ದಾಗ ಇಲ್ಲಿನ ಜನ ಶೋಕ ಸಾಗರದಲ್ಲಿ ಮುಳುಗಿದ್ದರು. ಇದೀಗ ದೇಶ, ದೇಶದ ಸೈನಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಇದೇ ನಲ್ಗೊಂಡಾ ನಗರದಲ್ಲಿ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ರಾಷ್ಟ್ರಗೀತೆಯನ್ನು ಸಾರ್ವಜನಿಕವಾಗಿ ಹಾಡಲು ಆರಂಭಿಸಲಾಗಿದೆ.
Every day, at exactly 8.30 am, the national anthem is played at twelve major junctions in Nalgonda town in Telangana. All citizens, no matter what they are doing, stand still for those 52 seconds every morning.
09-10-25 12:57 pm
Bangalore Correspondent
ಕಾಂತಾರ ಭರ್ಜರಿ ರೆಸ್ಪಾನ್ಸ್ ; ಏಳೇ ದಿನಕ್ಕೆ 450 ಕೋ...
08-10-25 11:04 pm
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
09-10-25 10:31 pm
HK News Desk
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
Navi Mumbai International Airport, PM Narendr...
08-10-25 08:57 pm
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
09-10-25 08:22 pm
Mangalore Correspondent
ಮಹೇಶ್ ಶೆಟ್ಟಿ ತಿಮರೋಡಿಗೆ ಕೋರ್ಟಿನಲ್ಲಿ ಹಿನ್ನಡೆ ;...
09-10-25 07:23 pm
13 ವರ್ಷಗಳ ಬಳಿಕ ಮನೆ ಸೇರಿದ ಯುವಕ ; ಪಿಯುಸಿ ಪರೀಕ್ಷ...
09-10-25 01:59 pm
ರಾಜಕೀಯ ಲಾಭಕ್ಕೆ ಶಾರದೋತ್ಸವ ಘಟನೆಯನ್ನ ಬಿಜೆಪಿ ಹಿಂದ...
09-10-25 11:58 am
Ullal, Fish Meal Factory Fire Breaks: ಉಳ್ಳಾಲ...
08-10-25 10:09 pm
09-10-25 05:30 pm
Mangalore Correspondent
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm