ಬ್ರೇಕಿಂಗ್ ನ್ಯೂಸ್
19-01-22 01:24 pm HK Desk news ದೇಶ - ವಿದೇಶ
ಲಕ್ನೋ, ಜ.19 : ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು ಮುಂದಾಗಿದೆ. ಸರದಿಯಂತೆ ಬಿಜೆಪಿ ಶಾಸಕರು ಪಕ್ಷ ಬಿಟ್ಟು ಬಿಸ್ಪಿ ಸೇರಿದ ಬೆನ್ನಲ್ಲೇ ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಸೊಸೆಯನ್ನೇ ಬಿಜೆಪಿ ತನ್ನತ್ತ ಸೆಳೆದುಕೊಂಡಿದೆ. ಮುಲಾಯಂ ಸಿಂಗ್ ಸೊಸೆ ಅವರ ಸೊಸೆ ಅಪರ್ಣಾ ಯಾದವ್ ಬುಧವಾರ ಬಿಜೆಪಿ ಸೇರಿದ್ದು, ಉತ್ತರ ಪ್ರದೇಶ ರಾಜಕೀಯದಲ್ಲಿ ಎಸ್ಪಿಗೆ ದೊಡ್ಡ ಠಕ್ಕರ್ ಕೊಟ್ಟಂತಾಗಿದೆ.
ಠಾಕೂರ್ ಬಿಷ್ತ್ ಸಮುದಾಯದ ಅಪರ್ಣಾ ಯಾದವ್, ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿಯ ಪುತ್ರ ಪ್ರತೀಕ್ ಅವರನ್ನು ಮದುವೆಯಾಗಿದ್ದರು. ಮಾಜಿ ಪತ್ರಕರ್ತ ಅರವಿಂದ್ ಸಿಂಗ್ ಬಿಷ್ತ್ ಅವರ ಪುತ್ರಿಯಾಗಿರುವ ಅಪರ್ಣಾ ಯಾದವ್ ಇಂಗ್ಲೆಂಡಿನ ಮ್ಯಾಂಚೆಸ್ಟರ್ ಯುನಿವರ್ಸಿಟಿಯಲ್ಲಿ ಅಂತಾರಾಷ್ಟ್ರೀಯ ರಾಜಕೀಯ ಮತ್ತು ಸಂಬಂಧ ವಿಚಾರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದರು.
ಸಮಾಜವಾದಿ ಪಾರ್ಟಿಯಲ್ಲಿ ಯಾವುದೇ ಹುದ್ದೆ ಹೊಂದಿರದಿದ್ದರೂ, ಅಪರ್ಣಾ ಯಾದವ್ ಸಮಾಜಮುಖಿ ಕೆಲಸದಲ್ಲಿ ನಿರತರಾಗಿದ್ದರು. 2017ರಲ್ಲಿ ಲಕ್ನೋದ ಅಸೆಂಬ್ಲಿ ಕ್ಷೇತ್ರವೊಂದರಲ್ಲಿ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ರೀಟಾ ಬಹುಗುಣ ವಿರುದ್ಧ ಸೋಲು ಕಂಡಿದ್ದರು. ರೀಟಾ ಬಹುಗುಣ ಜೋಷಿ ಆಬಳಿಕ ಸಂಸದೆಯಾಗಿದ್ದು, ಈಗ ತನ್ನ ಪುತ್ರನನ್ನು ಅಸೆಂಬ್ಲಿ ಕ್ಷೇತ್ರದಿಂದ ಕಣಕ್ಕಿಳಿಸಲು ತಯಾರಿ ನಡೆಸಿದ್ದರು.
B-aware ಎನ್ನುವ ಸಮಾಜ ಸೇವಾ ಸಂಸ್ಥೆಯನ್ನು ನಡೆಸುತ್ತಿರುವ ಅಪರ್ಣಾ ಯಾದವ್, ಮಹಿಳೆಯರ ಪರವಾಗಿ ಹೋರಾಟ ನಡೆಸುತ್ತಿದ್ದಾರೆ. ಅಲ್ಲದೆ, ಲಕ್ನೋದಲ್ಲಿ ಗೋವಿನ ಆಶ್ರಮ ಹೊಂದಿದ್ದು, ಗೋವುಗಳ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಬಾರಿ ಪ್ರಧಾನಿ ಮೋದಿಯ ಅಭಿವೃದ್ಧಿ ಕೆಲಸಗಳನ್ನು ಪ್ರಶಂಸೆ ಮಾಡಿದ್ದಕ್ಕಾಗಿ ಅವರ ಹೆಸರು ರಾಷ್ಟ್ರೀಯ ಮಾಧ್ಯಮಗಳಲ್ಲಿ ಗಮನ ಸೆಳೆದಿತ್ತು. ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮನ ದೇಗುಲಕ್ಕಾಗಿ 11 ಲಕ್ಷ ರೂ. ದೇಣಿಗೆ ಕೊಟ್ಟಿದ್ದರು.
ಬಿಎಸ್ಪಿ ಪಕ್ಷ ಮತ್ತು ಅದರ ನೇತೃತ್ವ ವಹಿಸಿರುವ ಅಖಿಲೇಶ್ ಯಾದವ್ ಪಾಲಿಗೆ ಕುಟುಂಬದ ಸದಸ್ಯೆ ಎದುರಾಳಿ ಪಕ್ಷ ಬಿಜೆಪಿಯನ್ನು ಸೇರಿದ್ದು ದೊಡ್ಡ ಮುಖಭಂಗ ಆಗಿದೆ. ಅಲ್ಲದೆ, ಅಖಿಲೇಶ್ ಯಾದವ್ ಮತ್ತು ಮಾವ ಶಿವಪಾಲ್ ಯಾದವ್ ಬಹು ವರ್ಷಗಳ ಬಳಿಕ ಒಂದಾಗಿರುವ ಸಂದರ್ಭದಲ್ಲೇ ಅದೇ ಕುಟುಂಬದ ಸದಸ್ಯೆ ಪಕ್ಷ ಬಿಟ್ಟು ಎದುರಾಳಿ ಪಾಳಯವನ್ನು ಸೇರಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗಷ್ಟೇ ಆಡಳಿತಾರೂಢ ಬಿಜೆಪಿಯಿಂದ 11 ಶಾಸಕರು ಹೊರಬಂದು ಬಿಎಸ್ಪಿ ಸೇರಿದ್ದಾರೆ. ಹಿಂದುಳಿದ ವರ್ಗದ ಶಾಸಕರು ಪಕ್ಷದಿಂದ ಹೊರಬಂದಿದ್ದು ಬಿಜೆಪಿಗೆ ದೊಡ್ಡ ಹೊಡೆತ ಎಂದೇ ಭಾವಿಸಲಾಗಿತ್ತು.
ಕೆಲವು ಮೂಲಗಳ ಪ್ರಕಾರ, ಅಪರ್ಣಾ ಯಾದವ್ ಅವರಿಗೆ ವಿಧಾನ ಪರಿಷತ್ ಸ್ಥಾನ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಅಸೆಂಬ್ಲಿ ಕ್ಷೇತ್ರದಲ್ಲಿ ಕಣಕ್ಕಿಳಿಸುತ್ತಾರೆಯೇ ಎನ್ನುವುದು ಖಾತ್ರಿಯಾಗಿಲ್ಲ. ಬುಧವಾರ ಅವರನ್ನು ಬಿಜೆಪಿ ರಾಜ್ಯ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಮತ್ತು ಡಿಸಿಎಂ ಕೇಶವ ಪ್ರಸಾದ್ ಮೌರ್ಯ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಈ ವೇಳೆ, ಮಾತನಾಡಿದ ಅಪರ್ಣಾ ಯಾದವ್ ಪ್ರಧಾನಿ ಮೋದಿಯವರಿಂದ ತುಂಬ ಪ್ರಭಾವಿತಳಾಗಿದ್ದೆ. ನನಗೂ ದೇಶ ಮೊದಲು. ಇನ್ನಷ್ಟು ಹೆಚ್ಚಿನ ದೇಶ ಸೇವೆಗಾಗಿ ನಾನು ಮುಂದಡಿ ಇಟ್ಟಿದ್ದೇನೆ ಎಂದು ಹೇಳಿದ್ದಾರೆ.
In a major blow for the Samajwadi Party ahead of elections, SP patriarch Mulayam Singh Yadav’s daughter-in-law Aparna Yadav, joined the BJP on Wednesday, in a move that is being seen as tit-for-tat after several defectors from the saffron party joined hands with Akhilesh Yadav. Aparna Yadav, who is married to Mulayam and Sadhna Gupta’s son Prateek, comes from a Thakur-Bisht background, just like Uttar Pradesh Chief Minister Yogi Adityanath.
18-08-25 10:47 pm
Bangalore Correspondent
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
SIT, Dharmasthala Case, Pralhad Joshi: ಯಾರೋ ಅ...
18-08-25 01:25 pm
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
18-08-25 09:19 pm
HK News Desk
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
18-08-25 06:14 pm
Mangalore Correspondent
Unidentified Girl Body Found, Dharmasthala, R...
18-08-25 04:07 pm
ವಿಟ್ಲ ; ಖ್ಯಾತ ಇಂಟೀರಿಯರ್ ಡಿಸೈನರ್, ಪ್ರಗತಿ ಪರ ಕೃ...
17-08-25 11:06 pm
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am