ಬ್ರೇಕಿಂಗ್ ನ್ಯೂಸ್
11-09-20 11:35 am Headline Karnataka News Network ದೇಶ - ವಿದೇಶ
ಮುಂಬೈ, ಸೆಪ್ಟೆಂಬರ್ 11: ತನ್ನ ಮನೆಯನ್ನು ಕೆಡವಿದ ಸಿಟ್ಟಿನಲ್ಲಿರುವ ನಟಿ ಕಂಗನಾ ರನೌತ್ ಮತ್ತೆ ಶಿವಸೇನೆಯ ವಿರುದ್ಧ ಹರಿಹಾಯ್ದಿದ್ದಾರೆ. ಉದ್ಧವ್ ಠಾಕ್ರೆ ಹೆಸರೆತ್ತದೆ ಟ್ವೀಟ್ ವಾರ್ ನಡೆಸಿರುವ ಕಂಗನಾ, ಅಧಿಕಾರಕ್ಕಾಗಿ ತಮ್ಮ ಸಿದ್ಧಾಂತವನ್ನು ಮಾರಿಕೊಂಡಿರುವ ಶಿವಸೇನೆ ಈಗ ಸೋನಿಯಾ ಸೇನೆ ಆಗಿಹೋಗಿದೆ ಎಂದು ಮೂದಲಿಸಿದ್ದಾರೆ.
ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಕಿತ್ತು. ಆದರೆ ಚುನಾವಣೆಯಲ್ಲಿ ಸೋತ ಶಿವಸೇನೆ ಅಧಿಕಾರಕ್ಕಾಗಿ ನಾಚಿಕೆ ಇಲ್ಲದೆ ಹಿಂಬಾಗಿಲ ಮೂಲಕ ಮೈತ್ರಿ ಸರಕಾರ ಮಾಡಿಕೊಂಡಿದೆ. ಆಮೂಲಕ ಶಿವಸೇನೆ ಸೋನಿಯಾ ಸೇನೆ ಆಗಿ ಪರಿವರ್ತನೆ ಆಗುವಂತಾಗಿದೆ ಎಂದು ಹೇಳಿದ್ದಾರೆ. ಬಾಳಾ ಸಾಹೇಬ್ ಠಾಕ್ರೆ ಒಂದು ಸಿದ್ಧಾಂತ ಇಟ್ಟುಕೊಂಡು ಶಿವಸೇನೆಯನ್ನು ಕಟ್ಟಿ ಬೆಳೆಸಿದ್ದರು. ಆದರೆ ಇಂದಿನವರು ಆ ಸಿದ್ಧಾಂತವನ್ನೇ ಮಾರಿಕೊಂಡಿದ್ದಾರೆ. ನಾನು ಇಲ್ಲದಿರುವ ವೇಳೆಯಲ್ಲಿ ನನ್ನ ಮನೆಯನ್ನು ಕೆಡವಿದ ಗೂಂಡಾಗಳನ್ನು ಆಡಳಿತದ ಒಂದು ಅಂಗ ಎನ್ನುವುದಿಲ್ಲ. ಹಾಗೆ ಹೇಳಿ ಸಂವಿಧಾನವನ್ನು ಅಪಮಾನಿಸಲು ಬಯಸುವುದಿಲ್ಲ ಎಂದಿದ್ದಾರೆ.

"ನಿಮ್ಮ ತಂದೆಯ ಒಳ್ಳೆತನದಿಂದ ನೀವು ಸಂಪತ್ತು ಪಡೆದಿರಬಹುದು. ಆದರೆ ನೀವು ಗೌರವ ಬೇಕಿದ್ದರೆ ಅದನ್ನು ಸ್ವತಃ ಗಳಿಸಬೇಕು. ನನ್ನ ಧ್ವನಿಯನ್ನು ನೀವು ಚಿವುಟಬಹುದು. ಆದರೆ ನನ್ನ ಧ್ವನಿ ಸಾವಿರ, ಲಕ್ಷಗಳ ಸಂಖ್ಯೆಯಲ್ಲಿ ಪರಿವರ್ತನೆ ಆಗಿ ನಿಮ್ಮತ್ತ ತೂರಿ ಬರಲಿದೆ. ಹಾಗಾದಾಗ, ನೀವು ಎಷ್ಟು ಮಂದಿಯ ಧ್ವನಿಯನ್ನು ಹತ್ತಿಕ್ಕಬಹುದು. ಸತ್ಯ ಮುಚ್ಚಿಟ್ಟು ಎಷ್ಟು ದಿನ ಓಡಾಡಬಹುದು. ನಿಮ್ಮ ಆಡಳಿತ ಸರ್ವಾಧಿಕಾರಿಯ ರಾಜಪ್ರಭುತ್ವ ಅಷ್ಟೇ ವಿನಾ ಬೇರೇನೂ ಅಲ್ಲ " ಎಂದು ಕಂಗನಾ ಕಟು ಮಾತುಗಳಿಂದ ತಿವಿದಿದ್ದಾರೆ.
ಶಿವಸೇನೆ ಆಗಲೀ, ಮಹಾರಾಷ್ಟ್ರ ಸರಕಾರದಿಂದ ಆಗಲೀ ಕಂಗನಾ ಟ್ವೀಟ್ ಬಗ್ಗೆ ಉತ್ತರ ನೀಡಲು ಮುಂದಾಗಿಲ್ಲ. ಶಿವಸೇನೆಯ ಯಾರು ಕೂಡ ತುಟಿ ಬಿಚ್ಚಬಾರದು ಎಂದು ಹುಕುಂ ಜಾರಿ ಮಾಡಲಾಗಿದೆ. ಅಗತ್ಯ ಬಿದ್ದರೆ ಪಕ್ಷದ ವಕ್ತಾರ ಸಂಜಯ್ ರಾವತ್ ಮಾತಾಡುತ್ತಾರೆ ಎನ್ನುವ ಸೂಚನೆ ನೀಡಲಾಗಿದೆ. ಆದರೆ ಚಿತ್ರನಟಿಯ ತಿವಿಯುವ ಬಾಣಗಳಿಗೆ ಉತ್ತರ ನೀಡಲು ರಾವುತ್ ಕೂಡ ಮುಂದೆ ಬಂದಿಲ್ಲ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am