ಬ್ರೇಕಿಂಗ್ ನ್ಯೂಸ್
10-09-20 11:32 am Headline Karnataka News Network ದೇಶ - ವಿದೇಶ
ನವದೆಹಲಿ, ಸೆಪ್ಟೆಂಬರ್ 10: ಇತ್ತೀಚೆಗೆ ಭಾರತದಲ್ಲಿ ಬ್ಯಾನ್ ಆಗಿದ್ದ ಪಬ್ ಜಿ ವಿಡಿಯೋ ಗೇಮ್ ಮತ್ತೆ ಭಾರತಕ್ಕೆ ಬರಲು ಶತಪ್ರಯತ್ನ ಮಾಡುತ್ತಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ್ದ ಪಬ್ ಜಿ ಗೇಮ್ ಭಾರತದ್ದೇ ಕಂಪನಿ ಒಂದಕ್ಕೆ ವಿತರಣೆಯ ಗುತ್ತಿಗೆ ನೀಡಲು ಬಯಸಿದೆ. ಇದಕ್ಕಾಗಿ ಭಾರತದ ಕಂಪನಿಯ ತಲಾಶೆ ಆರಂಭಿಸಿದೆ.
ಸೌತ್ ಕೊರಿಯಾ ಮೂಲದ ಪಬ್ ಜಿ ಗೇಮ್ಗಳನ್ನು ಚೀನಾ ಮೂಲದ ಟೆನ್ಸೆಂಟ್ ಕಂಪನಿ ಭಾರತ ಮತ್ತು ಚೀನಾದಲ್ಲಿ ಮಾರ್ಕೆಟ್ ಮಾಡಿತ್ತು. ಈಗ ಭಾರತದಲ್ಲಿ ಚೀನಾ ಮೂಲದ ಕಂಪನಿಗಳ ಮೇಲೆ ನಿಯಂತ್ರಣ ಹೇರಿದ್ದರಿಂದ ಟೆನ್ಸೆಂಟ್ ಕಂಪನಿಯ ಜೊತೆಗಿನ ಒಪ್ಪಂದವನ್ನು ಕಡಿದುಕೊಳ್ಳಲಿದ್ದು ಭಾರತದಲ್ಲಿ ಭಾರತದ್ದೇ ಕಂಪನಿಗೆ ವಿತರಣೆ ಹಕ್ಕನ್ನು ನೀಡಲು ಮುಂದಾಗಿದೆ. ಆಮೂಲಕ ಭಾರತೀಯರ ಮನಗೆದ್ದಿದ್ದ ಪಬ್ ಜಿ ಗೇಮ್ಗಳನ್ನು ಮತ್ತೆ ಭಾರತಕ್ಕೆ ತರಲು ಯೋಜನೆ ಹಾಕಲಾಗಿದೆ.

ಹೊಸ ಒಪ್ಪಂದ ಕುದುರಿಸಲಿರುವ ಭಾರತೀಯ ಅಥವಾ ಇನ್ನಾವುದೇ ಕಂಪನಿಗೆ ಸಂಪೂರ್ಣ ಭಾರತೀಯ ಮಾರುಕಟ್ಟೆಯ ಹೊಣೆಯನ್ನು ನೀಡುವ ಭರವಸೆ ನೀಡಿದೆ. ಇದಕ್ಕಾಗಿ ಭಾರತದ್ದೇ ಕಂಪನಿ ಸಿಗಬಹುದೇ ಅನ್ನುವ ನೆಲೆಯಲ್ಲಿ ಪಬ್ ಜಿ ಕಾರ್ಪೊರೇಷನ್ ಹುಡುಕಾಟ ಆರಂಭಿಸಿದೆ. ಭಾರತದಲ್ಲಿ ಅಂದಾಜು 20 ಕೋಟಿ ಗ್ರಾಹಕರು ಪಬ್ ಜಿ ಗೇಮ್ ಆಟಕ್ಕೆ ಇದ್ದರು. ಹೀಗಾಗಿ ಅನಿರೀಕ್ಷಿತ ಎನ್ನುವಂತೆ ಪಬ್ ಜಿಯನ್ನು ಭಾರತ ಸರಕಾರ ಬ್ಯಾನ್ ಮಾಡಿದ್ದು ಕಂಪನಿಗೆ ದೊಡ್ಡ ನಷ್ಟ ಉಂಟುಮಾಡಿತ್ತು. ಚೀನಾದ ಇಲೆಕ್ಟ್ರಾನಿಕ್ ದೈತ್ಯ ಟೆನ್ಸೆಂಟ್ ಕಂಪನಿಯ ಷೇರು ಒಂದೇ ದಿನದಲ್ಲಿ ಪಾತಾಳಕ್ಕೆ ಬಿದ್ದು 14 ಬಿಲಿಯನ್ ಡಾಲರ್ ನಷ್ಟ ಆಗಿತ್ತು ಎನ್ನುವ ಲೆಕ್ಕಾಚಾರ ನೀಡಲಾಗಿತ್ತು.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am