ಬ್ರೇಕಿಂಗ್ ನ್ಯೂಸ್
07-09-20 06:06 pm Headline Karnataka News Network ದೇಶ - ವಿದೇಶ
ನವದೆಹಲಿ, ಸೆಪ್ಟೆಂಬರ್ 7: ದೇಶೀಯ ರಕ್ಷಣಾ ತಂತ್ರಜ್ಞಾನಗಳಲ್ಲಿ ದೈತ್ಯ ಎಂದು ಕರೆಯಬಹುದಾದ ಮತ್ತು ಆತ್ಮನಿರ್ಭರ ಭಾರತದತ್ತ ಮಹತ್ವದ ಮೈಲಿಗಲ್ಲು ಎಂದು ಗುರುತಿಸಬಹುದಾದ ಹೈಪರ್ಸಾನಿಕ್ ಟೆಕ್ನಾಲಜಿ ಡೆಮನ್‌ಸ್ಟ್ರೇಟರ್ ವೆಹಿಕಲ್ (ಎಚ್‌ಎಸ್‌ಟಿಡಿವಿ)ಹಾರಾಟ ಪರೀಕ್ಷೆ ಯಶಸ್ವಿಯಾಗಿದೆ.
ಒಡಿಶಾದ ಕರಾವಳಿ ತೀರ ಪ್ರದೇಶದಲ್ಲಿರುವ ಡಾ. ಎಪಿಜೆ ಅಬ್ದುಲ್ ಕಲಾಂ ಕ್ಷಿಪಣಿ ಉಡಾವಣಾ ಕೇಂದ್ರದಿಂದ ಇಂದು ಬೆಳಗ್ಗೆ 11ಗಂಟೆ ಸುಮಾರಿನಲ್ಲಿ ಎಚ್ ಎಸ್ ಟಿಡಿವಿ ಯಶಸ್ವಿಯಾಗಿ ಹಾರಾಟ ನಡೆಸಿದೆ. ಈ ವಾಹಕ 6 ಮಾಕ್ ವೇಗದಲ್ಲಿ ಕೇವಲ 20 ಸೆಕೆಂಡ್ ಗಳಲ್ಲಿ 32.5 ಎತ್ತರಕ್ಕೆ ಚಲಿಸಬಲ್ಲ ಸಾಮರ್ಥ್ಯ ಹೊಂದಿದೆ.
ಮೊದಲಿಗೆ ಹೈಪರ್ಸೋನಿಕ್ ವಾಹನವನ್ನು ಮಿಸೈಲ್ ಬೂಸ್ಟರ್ ಮೂಲಕ 30 ಕಿಮೀ ಎತ್ತರಕ್ಕೆ ಉಡಾಯಿಸಲಾಯಿತು. ಅಷ್ಟು ಎತ್ತರ ತಲುಪಿದ ಬಳಿಕ ವಾಹನವು ಬೂಸ್ಟರ್ನಿಂದ ಬೇರ್ಪಟ್ಟಿತು. ಆ ಬಳಿಕ ವಾಹನದ ಒಳಕ್ಕೆ ಗಾಳಿಯನ್ನು ಸೆಳೆಯಲಾಯಿತು. ಆಗ ಸ್ಕ್ರಾಮ್ಜೆಟ್ ಎಂಜಿನ್ ಚಾಲನೆಗೊಂಡು 20 ಸೆಕೆಂಡುಗಳ ಕಾಲ ವಾಹನ ಮಾಚ್6 ವೇಗದಲ್ಲಿ ಸಾಗಿತು. ಬರೋಬ್ಬರಿ 2,500 ಡಿಗ್ರಿ ಸೆಲ್ಷಿಯಸ್ನಷ್ಟು ಶಾಖ ಹಾಗೂ ಗಾಳಿಯ ವೇಗವನ್ನು ಈ ವಾಹನ ತಡೆದುಕೊಂಡು ಯಶಸ್ವಿಯಾಗಿ ಸಾಗಿತು.
ಡಿಆರ್‌ಡಿಒ ಮುಖ್ಯಸ್ಥ ಸತೀಶ್ ರೆಡ್ಡಿ ನೇತೃತ್ವದ ಹೈಪರ್ಸಾನಿಕ್ ಮಿಸೈಲ್ ತಂಡ ಇದನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸಿದೆ. ಭವಿಷ್ಯದ ಕ್ಷಿಪಣಿಗಳಿಗೆ ಈ ಪರೀಕ್ಷೆ ಮುನ್ನುಡಿ ಬರೆದಿದೆ. ಮುಂದಿನ 5 ವರ್ಷದಲ್ಲಿ ಸ್ಕ್ರಾಮ್ಜೆಟ್ ಎಂಜಿನ್ ಹೊಂದಿರುವ ಹೈಪರ್ ಸೋನಿ ಮಿಸೈಲ್ಗಳನ್ನ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ಹೈಪರ್ಸೋನಿಕ್ ಎಂದರೆ ಶಬ್ದದ ವೇಗಕ್ಕೆ ಹಲವು ಪಟ್ಟು ವೇಗ ಎಂದರ್ಥ. ಡಿಆರ್‌ಡಿಒ ಮೂಲಗಳ ಪ್ರಕಾರ, ಮಾಚೋ-6 ವೇಗದಲ್ಲಿ, ಅಂದರೆ ಸೆಕೆಂಡ್ಗೆ 2 ಕಿಮೀಯಷ್ಟು ವೇಗದಲ್ಲಿ ಈ ಭವಿಷ್ಯದ ಕ್ಷಿಪಣಿಗಳು ಹೋಗಬಲ್ಲುವು.
ಹೆಚ್ಎಸ್ಟಿಡಿವಿ ವಾಹನದ ಪ್ರಯೋಗ ಯಶಸ್ವಿಯಾಗುತ್ತಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್ಡಿಒಗೆ ಅಭಿನಂದನೆ ಸಲ್ಲಿಸಿದರು. ಇದು ಸ್ವಾವಲಂಬಿ ಭಾರತದ ಆಶಯವನ್ನು ಈಡೇರಿಸುವತ್ತ ಒಂದು ಹೆಜ್ಜೆಯಾಗಿದೆ ಎಂದು ಬಣ್ಣಿಸಿದರು.
ದೇಶೀಯವಾಗಿ ಅಭಿವೃದ್ಧಿ ಹೊಂದಿದ ಹೈಪರ್ಸಾನಿಕ್ ಟೆಕ್ನಾಲಜಿ ಡೆಮೋನ್‌ಸ್ಟ್ರೇಟರ್ ವೆಹಿಕಲ್ (ಎಚ್‌ಎಸ್‌ಟಿಡಿವಿ) ಯನ್ನು ಯಶಸ್ವಿಯಾಗಿ ಹಾರಾಟ ಪರೀಕ್ಷಿಸಿದ್ದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯನ್ನು ಅಭಿನಂದಿಸಿದ್ದಾರೆ.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 07:06 pm
Mangaluru Staffer
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm