ಬ್ರೇಕಿಂಗ್ ನ್ಯೂಸ್
01-09-20 09:20 am Dhruthi Anchan - Correspondent ದೇಶ - ವಿದೇಶ
ಹೊಸದಿಲ್ಲಿ, ಸೆಪ್ಟೆಂಬರ್.1: ನಿರೀಕ್ಷೆಯಂತೆ ಐತಿಹಾಸಿಕ ಆರ್ಥಿಕ ಕುಸಿತಕ್ಕೆ ಭಾರತ ಸಾಕ್ಷಿಯಾಗಿದ್ದು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 23.9ರಷ್ಟು ಭಾರಿ ಕುಸಿತ ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ. 3.1ರಷ್ಟು ಬೆಳವಣಿಗೆ ದರ ದಾಖಲಾಗಿತ್ತು.
ಇದು 2020-21ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕವಾದ ಏಪ್ರಿಲ್-ಜೂನ್ ತಿಂಗಳ ಅವಧಿಯಲ್ಲಿ ಉಂಟಾದ ಕುಸಿತವಾಗಿದೆ. 2019-20ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿಯ ಗಾತ್ರ 35.25 ಲಕ್ಷ ಕೋಟಿ ರು. ಇತ್ತು.2020-21ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಅದು 26.90 ಲಕ್ಷ ಕೋಟಿ ರು.ಗೆ ಕುಸಿತವಾಗಿದೆ. ಹೀಗಾಗಿ ಈ ತ್ರೈಮಾಸಿಕ ಅವಧಿಯಲ್ಲಿ ಶೇ.23.9ರಷ್ಟು ಇಳಿಕೆ ಕಂಡಿದೆ.

ದೇಶದಲ್ಲಿ ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.3.4ರಷ್ಟುಬೆಳವಣಿಗೆ ಕಂಡ ಏಕೈಕ ಕ್ಷೇತ್ರವೆಂದರೆ ಅದು ಕೃಷಿ. ಕಳೆದ ವರ್ಷದ ಈ ಅವಧಿಯಲ್ಲಿ ಕೃಷಿ ಕ್ಷೇತ್ರ ಶೇ.3ರಷ್ಟು ಬೆಳವಣಿಗೆ ಸಾಧಿಸಿತ್ತು. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅದು ಶೇ.0.4ರಷ್ಟು ಹೆಚ್ಚು ಬೆಳವಣಿಗೆ ಕಂಡಿದೆ.
ಸೋಮವಾರ ಭಾರತೀಯ ಸಂಖ್ಯಾ ಶಾಸ್ತ್ರೀಯ ಕಚೇರಿ ಈ ಮಾಹಿತಿ ಬಿಡುಗಡೆ ಮಾಡಿದ್ದು, 1996ರಲ್ಲಿ ತ್ರೈಮಾಸಿಕ ಜಿಡಿಪಿ ವರದಿ ಬಿಡುಗಡೆ ಮಾಡುವ ಸಂಪ್ರದಾಯ ಆರಂಭವಾದ ನಂತರ ಇಲ್ಲಿಯವರೆಗೆ ಈ ಪ್ರಮಾಣದ ಆರ್ಥಿಕ ಕುಸಿತ ದಾಖಲಾಗಿರಲಿಲ್ಲ.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
10-01-26 03:22 pm
HK News Desk
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
11-01-26 12:56 pm
Mangaluru Staffer
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮ...
10-01-26 06:23 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm