ಬ್ರೇಕಿಂಗ್ ನ್ಯೂಸ್
31-07-20 03:20 pm Headline Karnataka News Network ದೇಶ - ವಿದೇಶ
ನವದೆಹಲಿ: ರಕ್ಷಾ ಬಂಧನದ ಪ್ರಯುಕ್ತ ಪಾಕಿಸ್ತಾನ ಮಹಿಳೆ ಖಮರ್ ಮೊಹ್ಸಿನ್ ಶೈಖ್ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿಯನ್ನು ಕಳುಹಿಸಿದ್ದಾರೆ.
ಶೈಖ್ ಅವರು ಕಳೆದ 25 ವರ್ಷಗಳಿಂದ ಪ್ರತಿ ರಕ್ಷಾ ಬಂಧನಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿ ಕಳುಹಿಸುತ್ತಿದ್ದು, ಭಾರತದಿಂದ ಆಹ್ವಾನ ನೀಡಿದರೆ ದೆಹಲಿಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ವರ್ಷಕ್ಕೊಂದು ಬಾರಿ ನನ್ನ ಹಿರಿಯ ಸಹೋದರನಿಗೆ ರಾಖಿ ಕಟ್ಟುವ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ಮುಂದಿನ ಐದು ವರ್ಷಗಳು ಅವರಿಗೆ ಉತ್ತಮವಾಗಿರಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಧನಾತ್ಮಕ ನಿರ್ಧಾರವನ್ನು ವಿಶ್ವವೇ ಗುರುತಿಸುತ್ತಿದೆ ಎಂದು ಕಳೆದ ವರ್ಷ ಅವರು ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದರು. ಇದಕ್ಕೂ ಮುನ್ನ ಭಾರತದಲ್ಲಿ ತ್ರಿವಳಿ ತಲಾಖ್ ನಿಷೇಧಿಸುವ ಭಾರತ ಸರ್ಕಾರದ ನಿರ್ಧಾರವನ್ನು ಅವರು ಸ್ವಾಗತಿಸಿದ್ದಾರೆ. ಅಲ್ಲದೆ ಪತಿ ರಚಿಸಿದ ಪೇಂಟಿಂಗ್‍ನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆ ನೀಡಲು ಉತ್ಸುಕರಾಗಿದ್ದಾರಂತೆ.
ಖುರಾನ್ ಹಾಗೂ ಇಸ್ಲಾಂನಲ್ಲಿ ತ್ರಿವಳಿ ತಲಾಖ್ ಕುರಿತು ನಿಬಂಧನೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಹೊರತು ಇನ್ನಾರೂ ತ್ರಿವಳಿ ತಲಾಖ್ ನಿಷೇಧಿಸುವ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಮುಸ್ಲಿಂ ಮಹಿಳೆಯರ ಹಿತದೃಷ್ಟಿಯಿಂದ ಮೋದಿಯವರು ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ತ್ರಿವಳಿ ತಲಾಖ್ ಕುರಿತ ಕಾನೂನು ರೂಪಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ದುಪಡಿಸಿದ ಭಾರತ ಸರ್ಕಾರದ ನಿರ್ಧಾರವನ್ನೂ ಶೈಖ್ ಶ್ಲಾಘಿಸಿದ್ದಾರೆ. ಕಳೆದ 25 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿ ಕಳುಹಿಸುತ್ತಿರುವ ಶೈಖ್ ಅವರು, ಜಮ್ಮು ಕಾಶ್ಮೀರದ ಕುರಿತು ಭಾರತದ ಸರ್ಕಾರದ ನಿರ್ಧಾರವನ್ನು ಪಾಕಿಸ್ತಾನ ವಿರೋಧಿಸುತ್ತಿರುವುದರ ಮಧ್ಯೆಯೂ ಈ ನಡೆ ಅನುಸರಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ಆಗಸ್ಟ್ 3ರಂದು ರಕ್ಷಾ ಬಂಧನ ಆಚರಿಸಲಾಗುತ್ತಿದ್ದು, ಮಹಿಳಾ ಕುಶಲಕರ್ಮಿಗಳು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಗಲ್ವಾನ್‍ನ ಗಡಿ ವಾಸ್ತವ ರೇಖೆ(ಎಲ್‍ಎಸಿ)ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕರಿಗೆ ರಾಖಿಯನ್ನು ಕಳುಹಿಸಿದ್ದಾರೆ. ಹೀಗೆ ರಕ್ಷಾ ಬಂಧನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am