ಬ್ರೇಕಿಂಗ್ ನ್ಯೂಸ್
08-01-21 03:53 pm Headline Karnataka News Network ದೇಶ - ವಿದೇಶ
ನವದೆಹಲಿ, ಜ.8: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ದೊಡ್ಡ ಏರಿಕೆ ಕಂಡಿರದಿದ್ದರೂ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಸಾರ್ವಕಾಲಿಕ ಎತ್ತರದತ್ತ ಮುನ್ನುಗ್ಗಿದೆ. ಕಳೆದ ಎರಡು ವಾರದಲ್ಲಿ ದಿನವೂ ಏರಿಕೆಯಾಗುತ್ತಿದ್ದು ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರಿಗೆ 84 ರೂ. ಮುಟ್ಟಿದೆ. ಇದೇ ವೇಳೆ, ಡೀಸೆಲ್ ಬೆಲೆ ಒಂದೇ ದಿನ ಲೀಟರಿಗೆ 26 ಪೈಸೆ ಏರಿಕೆಯಾಗಿದ್ದು, 74.40 ರೂ.ಗೆ ತಲುಪಿದೆ.
ದೇಶಾದ್ಯಂತ ಪೆಟ್ರೋಲ್ ದರದಲ್ಲಿ ವ್ಯತ್ಯಾಸ ಇದ್ದು, ಮುಂಬೈನಲ್ಲಿ ಪೆಟ್ರೋಲಿಗೆ ದೇಶದಲ್ಲೇ ಅತಿ ಹೆಚ್ಚು 90.83 ಆಗಿದ್ದರೆ, ಡೀಸೆಲ್ ಬೆಲೆ 81ಕ್ಕೆ ಏರಿಕೆಯಾಗಿ ಗರಿಷ್ಠ ದಾಖಲೆ ನಿರ್ಮಿಸಿದೆ. ಇದೇ ವೇಳೆ, ಬೆಂಗಳೂರಿನಲ್ಲಿ ಪೆಟ್ರೋಲಿಗೆ 87.4 ರೂ. ಆಗಿದ್ದರೆ, ಡೀಸೆಲ್ ಬೆಲೆ 78.87 ರೂ.ಗೆ ಏರಿಕೆಯಾಗಿದೆ.
ಇದೇ ವೇಳೆ, ಅಂತಾರಾಷ್ಟ್ರೀಯ ಕಚ್ಚಾ ತೈಲದ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲ್ ತೈಲದ ಬೆಲೆ 50.29 ಡಾಲರ್ ಇದ್ದು ಸ್ಥಿರತೆ ಕಾಯ್ದುಕೊಂಡಿದೆ. ಆದರೆ, ಭಾರತ ಸರಕಾರ ಅಬಕಾರಿ, ಸೆಸ್, ವ್ಯಾಟ್ ಸೇರಿ ಶೇ.60 ರಷ್ಟು ತೆರಿಗೆ ವಿಧಿಸುತ್ತಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಜನರ ಪಾಲಿಗೆ ಹೊರೆಯಾಗಿ ಪರಿಣಮಿಸುತ್ತಿದೆ.

ಅಬಕಾರಿ ಸುಂಕ ಏರಿಸಿದ್ದೇ ಹೊರೆ !
ಕಳೆದ ಲಾಕ್ಡೌನ್ ಸಂದರ್ಭದಲ್ಲಿ ತೈಲದ ಬೇಡಿಕೆ ಕುಸಿತವಾಗಿ ಕಚ್ಚಾ ತೈಲದ ಬೆಲೆ ತೀವ್ರ ಇಳಿಕೆಯಾಗಿತ್ತು. ಪ್ರತೀ ಬ್ಯಾರಲ್ ಬೆಲೆ 20 ಡಾಲರ್ ಗೆ ಇಳಿದಿತ್ತು. ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆ ಆಧರಿಸಿ, ದೇಶದೊಳಗಿನ ತೈಲದ ಬೆಲೆ ನಿರ್ಧರಿತವಾಗುವುದರಿಂದ ಒಮ್ಮೆಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸರಕಾರ ಇಳಿಸಬೇಕಾಗಿತ್ತು. ಆದರೆ, ಹೀಗೆ ಬೆಲೆ ಇಳಿಸಿ ಲಾಭದ ಅಂಶವನ್ನು ಜನರಿಗೆ ವರ್ಗಾಯಿಸುವ ಬದಲು ಸರಕಾರ ಅಬಕಾರಿ ಸುಂಕವನ್ನು ಏರಿಸಿ ಲಾಭ ಮಾಡಿಕೊಂಡಿತ್ತು. ಪೆಟ್ರೋಲಿಗೆ ಪ್ರತಿ ಲೀಟರಿಗೆ 13 ರೂ. ಮತ್ತು ಡೀಸೆಲ್ ಗೆ 16 ರೂ. ಅಬಕಾರಿ ತೆರಿಗೆ ಏರಿಸಿ, ಇಳಿಕೆಯನ್ನು ಸರಿದೂಗಿಸಿತ್ತು. ಇದರಿಂದ ಕಳೆದ ಎಪ್ರಿಲ್, ಮೇ ತಿಂಗಳಲ್ಲಿ ಭಾರತ ಸರಕಾರಕ್ಕೆ ಸುಮಾರು 2 ಲಕ್ಷ ಕೋಟಿ ರೂಪಾಯಿ ಲಾಭ ಆಗಿತ್ತು.

ಈಗ ನಿಧಾನಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಹೆಚ್ಚುತ್ತಿದ್ದಂತೆ ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಲೀಟರ್ ಮೇಲೆ ಮತ್ತೆ ಗ್ರಾಹಕನಿಗೆ ಬರೆ ಹಾಕಲು ಆರಂಭಿಸಿದೆ. ಇದರಿಂದ ನೇರ ಹೊರೆ ಗ್ರಾಹಕನ ಮೇಲೆ ಬೀಳತೊಡಗಿದೆ. ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ, ಈವರೆಗೆ ಹೆಚ್ಚುವರಿ ಲಾಭ ಗಿಟ್ಟಿಸಿಕೊಂಡಿರುವ ಅಬಕಾರಿ ತೆರಿಗೆಯನ್ನು ಇಳಿಕೆ ಮಾಡಬೇಕಿದೆ. ಒಂದು ಲೀಟರ್ ಮೇಲೆ 60 ಶೇಕಡಾ ತೆರಿಗೆಯನ್ನು ವಿಧಿಸುತ್ತಿರುವ ಸರಕಾರ ಅದರಿಂದ ಬರುವ ಲಾಭವನ್ನು ಬೇರೆ ಯೋಜನೆಗಳಿಗೆ ಖರ್ಚು ಮಾಡಲಾಗುತ್ತಿದೆ ಎನ್ನುತ್ತಿದೆ. ಆದರೆ, ಗರಿಷ್ಠ ದರಕ್ಕಿಂತ ಹೆಚ್ಚಾಗಿ ಮುನ್ನುಗ್ಗಿದರೆ ಇನ್ನೊಂದು ರೀತಿಯಲ್ಲಿ ಅಪಾಯ ಎದುರಾಗುತ್ತದೆ. ಸಾರಿಗೆ, ಸಂಚಾರದ ಮೇಲೆ ಪ್ರಭಾವ ಬೀರಿ ಪರೋಕ್ಷವಾಗಿ ಜನರ ಮೇಲೆ ಮತ್ತಷ್ಟು ಹೊರೆ ಬೀಳುವುದಲ್ಲದೆ ಮತ್ತೆ ಹಣದುಬ್ಬರದ ಗತಿ ಏರುಪೇರಿಗೆ ಕಾರಣವಾಗುತ್ತದೆ. ಈ ವಿಚಾರ ಸರಕಾರದಲ್ಲಿ ಕುಳಿತಿರುವ ಪಂಡಿತರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಆದರೆ, ಜನರ ಪ್ರತಿಕ್ರಿಯೆಗಾಗಿ ಕಾದು ಕುಳಿತಿದ್ದಾರೆ.

2018ರಲ್ಲಿ ಗರಿಷ್ಠ ದರ ದಾಖಲಾಗಿತ್ತು !
2018ರಲ್ಲಿ ಅ.4ರಂದು ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 84 ಮತ್ತು ಡೀಸೆಲ್ ಬೆಲೆ 75.45 ಆಗಿದ್ದು ಈವರೆಗಿನ ಗರಿಷ್ಠ ದಾಖಲೆ. ಇದರಿಂದ ಹಣದುಬ್ಬರ ಆಗುವ ಅಪಾಯವನ್ನರಿತ ಸರಕಾರ ಅಬಕಾರಿ ಸುಂಕವನ್ನು 1.50 ರೂ. ಇಳಿಸಿತ್ತು. ಈಗ ಮತ್ತೆ ಪೆಟ್ರೋಲ್ ದರ ತೀವ್ರ ಗತಿಯಲ್ಲಿ ಏರಿಕೆ ಕಂಡಿದ್ದು ಮುಂಬೈನಲ್ಲಿ 90ರ ಗಡಿಯನ್ನು ದಾಟಿದೆ.

ಮೊದಲೇ ಲಾಕ್ಡೌನ್ ಎಫೆಕ್ಟ್, ಉದ್ಯೋಗ ನಷ್ಟದಿಂದಾಗಿ ಜನ ಸಾಮಾನ್ಯರಲ್ಲಿ ಹಣ ಇಲ್ಲ. ಈಗಷ್ಟೇ ವಹಿವಾಟು ಚೇತರಿಕೆ ಕಾಣುವ ಹಾದಿಯಲ್ಲಿದೆ. ಆದರೆ, ತೈಲದ ಬೆಲೆಯ ಹೆಸರಲ್ಲಿ ಈವರೆಗೂ ಭಾರೀ ಲಾಭ ಮಾಡಿಕೊಂಡಿರುವ ಕೇಂದ್ರದ ಬಿಜೆಪಿ ಸರಕಾರ ಈಗ ಪೆಟ್ರೋಲ್ ದರದಲ್ಲಿ ಸೆಸ್ ಇಳಿಕೆ ಮಾಡದಿದ್ದರೆ ಜನರನ್ನು ಬೆಂಕಿಯಿಂದ ಬಾಣಲೆಗೆ ತಳ್ಳಿದಂತಾಗುತ್ತದೆ. ಯಾಕಂದ್ರೆ, ಈ ಹಿಂದೆ ಬ್ಯಾರಲ್ ಬೆಲೆ 75 ಡಾಲರ್ ಆಗಿದ್ದರೂ, ಪೆಟ್ರೋಲ್ ಲೀಟರ್ ಬೆಲೆ ಭಾರತದಲ್ಲಿ ರೂ. 75ರಲ್ಲೇ ಇತ್ತು. ತೈಲದ ಮೇಲಿನ ಏರಿಕೆ ಇಡೀ ದೇಶದಲ್ಲಿ ವಾಣಿಜ್ಯ ವಹಿವಾಟಿನ ಮೇಲೆ ಪರಿಣಾಮ ಬೀರುವುದಲ್ಲದೆ, ಸಾಗಾಟ ವೆಚ್ಚ ಆಧರಿಸಿ ವಸ್ತುಗಳ ಬೆಲೆ ನಿಗದಿಯಾಗುತ್ತದೆ. ಈಗ ಕಚ್ಚಾ ತೈಲದ ಬ್ಯಾರೆಲ್ ಬೆಲೆ 50 ಡಾಲರ್ ಇರುವಾಗಲೇ ದೇಶದಲ್ಲಿ ಪೆಟ್ರೋಲ್ ಗರಿಷ್ಠ ಬೆಲೆಯನ್ನು ದಾಟಿ ಹೋದರೆ, ಮುಂದೆ ವಿದೇಶಗಳಲ್ಲಿ ಪೂರ್ತಿ ಲಾಕ್ಡೌನ್ ತೆರವಾದಾಗ ಮತ್ತು ತೈಲದ ಬೇಡಿಕೆ ಇನ್ನಷ್ಟು ಹೆಚ್ಚಿದಾಗ ಭಾರತದಲ್ಲಿ ಪೆಟ್ರೋಲ್ ಸ್ಥಿತಿ ಹೇಗಿರಬಹುದು ಎನ್ನೋದನ್ನು ಊಹಿಸಲು ಸಾಧ್ಯವೇ..?
Petrol prices in India today hiked by 23 paise to an all-time high of ₹84.2 amid firming international oil prices. Diesel prices were today raised by 26 paise to ₹74.38 a litre.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm