ಬ್ರೇಕಿಂಗ್ ನ್ಯೂಸ್
04-06-26 04:19 pm HK News Staffer ದೇಶ - ವಿದೇಶ
ಲಕ್ನೋ, ಜೂನ್ 4: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ಕಠಿಣ ಪೊಲೀಸ್ ಕ್ರಮಗಳಿಂದಾಗಿ ರೌಡಿಸಂ ಲೋಕವೇ ಬೆಚ್ಚಿಬಿದ್ದಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಗಾಜಿಯಾಬಾದ್ ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ರೌಡಿ ಹಿನ್ನೆಲೆಯಿದ್ದವರು “ಯೋಗಿ ಜೀ ನಮ್ಮನ್ನು ಕ್ಷಮಿಸಿ” ಎಂಬ ಪೋಸ್ಟರ್ಗಳನ್ನು ಹಿಡಿದು ಬಹಿರಂಗವಾಗಿಯೇ ಪೊಲೀಸರ ಮುಂದೆ ಶರಣಾಗಿದ್ದಾರೆ.
ಗಾಜಿಯಾಬಾದ್ನಲ್ಲಿ ಇತ್ತೀಚೆಗೆ ಹದಿಹರೆಯದ ಯುವಕನೊಬ್ಬನ ಭೀಕರ ಕೊಲೆ ನಡೆದಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಅಪರಾಧಿಗಳ ಸದ್ದಡಗಿಸಲು ‘ಆಪರೇಷನ್ ಕ್ಲೀನ್ ಸ್ವೀಪ್’ ಎಂಬ ವಿಶೇಷ ಅಭಿಯಾನ ಕೈಗೊಂಡಿದ್ದರು. ಡಿಸಿಪಿ ಧವಲ್ ಜೈಸ್ವಾಲ್ ನೇತೃತ್ವದಲ್ಲಿ ಹಳೆ ಅಪರಾಧಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು.
ಅಭಿಯಾನದ ಭಾಗವಾಗಿ ಪೊಲೀಸರು ಸುಮಾರು 150 ರೌಡಿಶೀಟರ್ಗಳನ್ನು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಕರೆಯಿಸಿದ್ದರು. ಆದರೆ ಯೋಗಿ ಸರ್ಕಾರದ ಬುಲ್ಡೋಜರ್ ಮತ್ತು ಎನ್ಕೌಂಟರ್ ಕ್ರಮಗಳ ಭೀತಿಯಲ್ಲಿದ್ದ ಅಪರಾಧಿಗಳು, ತಾವಾಗಿಯೇ ಕೈಯಿಂದ ಬರೆದಿದ್ದ ಪೋಸ್ಟರ್ಗಳನ್ನು ಹಿಡಿದುಕೊಂಡು ಠಾಣೆಗೆ ಬಂದಿದ್ದರು.

“ಯೋಗಿ ಜೀ, ಮುಝೆ ಮಾಫ್ ಕರ್ ದೋ. ಮೈ ಭವಿಷ್ಯ ಮೇ ಕೋಯಿ ಅಪ್ರಾದ್ ನ ಕರ್ನೆ ಕೀ ಶಪಥ್ ಲೇತಾ ಹೂ” (ಯೋಗಿ ಜೀ, ನನ್ನನ್ನು ಕ್ಷಮಿಸಿ. ನಾನು ಭವಿಷ್ಯದಲ್ಲಿ ಯಾವುದೇ ಅಪರಾಧ ಮಾಡುವುದಿಲ್ಲ ಎಂದು ಪ್ರಮಾಣ ಮಾಡುತ್ತೇನೆ) ಎಂದು ಪೋಸ್ಟರ್ ನಲ್ಲಿ ಬರೆಯಲಾಗಿತ್ತು. ಯುವಕರು ಮತ್ತು ಮಧ್ಯವಯಸ್ಕರಾಗಿದ್ದ ಈ ರೌಡಿಶೀಟರ್ಗಳೆಲ್ಲರೂ ಸಾಲಾಗಿ ನಿಂತು, ಕೈಗಳನ್ನು ಮೇಲಕ್ಕೆತ್ತಿ “ಇನ್ಮುಂದೆ ಯಾವುದೇ ಕಾನೂನುಬಾಹಿರ ಕೃತ್ಯ ಎಸಗುವುದಿಲ್ಲ” ಎಂದು ಪ್ರಮಾಣ ಮಾಡಿದ್ದು ವಿಶೇಷವಾಗಿತ್ತು.
"ಕ್ಷಮೆ ಕೇಳಿದ ತಕ್ಷಣ ಅಪರಾಧಿಗಳ ಮೇಲಿನ ಹಳೆಯ ಪ್ರಕರಣಗಳು ರದ್ದಾಗುವುದಿಲ್ಲ. ಸದ್ಯಕ್ಕೆ ಈ ಎಲ್ಲಾ 150 ರೌಡಿಶೀಟರ್ಗಳ ಚಟುವಟಿಕೆಗಳನ್ನು ಗಮನಿಸುತ್ತೇವೆ. ಭವಿಷ್ಯದಲ್ಲಿ ಯಾವುದೇ ಸಣ್ಣ ತಪ್ಪು ಮಾಡಿದರೂ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಡಿಸಿಪಿ ಧವಲ್ ಜೈಸ್ವಾಲ್ ಹೇಳಿದ್ದಾರೆ.
ಅಪರಾಧಿಗಳು ಪೋಸ್ಟರ್ ಹಿಡಿದು ಕ್ಷಮೆ ಯಾಚಿಸುತ್ತಿರುವ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರ ಕಠಿಣ ಕಾನೂನು ಸುವ್ಯವಸ್ಥೆಯ ನೀತಿಯಿಂದಾಗಿ ಅಪರಾಧ ಲೋಕ ಹೇಗೆ ನಡುಗುತ್ತಿದೆ ಎಂಬುದಕ್ಕೆ ಈ ದೃಶ್ಯಗಳೇ ಸಾಕ್ಷಿ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.
VIDEO | Ghaziabad: 150 history-sheeters took oath to quit crime as part of rehabilitation program.#GhaziabadNews #GhaziabadPolice
— Press Trust of India (@PTI_News) June 3, 2026
(Full video available on PTI Videos - https://t.co/n147TvrpG7) pic.twitter.com/7GBA9e1o3q
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am