ಬ್ರೇಕಿಂಗ್ ನ್ಯೂಸ್
23-05-26 01:59 pm HK News Staffer ದೇಶ - ವಿದೇಶ
ಬೆಂಗಳೂರು, ಮೇ 23: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನಿರುದ್ಯೋಗಿ ಜಿರಳೆಗಳು ಹೇಳಿಕೆಯನ್ನು ವಿರೋಧಿಸಿ, ಆನ್ ಲೈನ್ ನಲ್ಲಿ ಅಭಿಯಾನ ನಡೆಸಿ ಅಪಾರ ಸಂಖ್ಯೆಯ ಫಾಲೋವರ್ಸ್ ಗಳಿಸಿದ "ಕಾಕ್ರೋಚ್ ಜನತಾ ಪಾರ್ಟಿಗೆ" ರಾಜ್ಯದಲ್ಲೂ ಆನ್ಲೈನ್ ಮೂಲಕ ಭಾರಿ ಬೆಂಬಲ ವ್ಯಕ್ತವಾಗಿತ್ತು. ಆದರೆ ಅವರು ಮೇ 24 ಭಾನುವಾರದಂದು ಟೌನ್ ಹಾಲ್ ಬಳಿ ಕರೆದ ಶಾಂತಿಯುತ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮಕ್ಕೆ ಹಿನ್ನಡೆಯಾಗಿದೆ.
ಅನುಮತಿಯಿಲ್ಲದೆ ಟೌನ್ ಹಾಲ್ ಮುಂಭಾಗ ಯಾರೂ ಜನ ಸೇರಿಸುವಂತಿಲ್ಲ. ಪ್ರತಿಭಟನೆ, ಅಥವಾ ರ್ಯಾಲಿಗಳಿಗೆ ಫ್ರೀಡಂ ಪಾರ್ಕ್ ನಲ್ಲಿ ಮಾತ್ರ ಉದ್ದೇಶ.ಜನ ಯಾರೂ ಸೇರಬಾರದು, ಸೇರಿದರೂ ಹೈಕೋರ್ಟ್ ಆದೇಶದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸ್ ನೋಟಿಸ್ ಹೊರಡಿಸಿದ್ದಾರೆ.
ಬೆಲೆ ಏರಿಕೆ, ನಿರುದ್ಯೋಗ, ನೀಟ್ ಪರೀಕ್ಷೆ ಅಕ್ರಮ, ಪ್ರಧಾನಿ ಮೋದಿ ವಿದೇಶ ಪ್ರವಾಸ ವಿಷಯಗಳನ್ನು ವಿರೋಧಿಸಿ, ಪಕ್ಷದ ಎಲ್ಲಾ ಅಭಿಮಾನಿಗಳು, ಬನ್ನಿ ಶಕ್ತಿ ಪ್ರದರ್ಶಿಸೋಣ, ಆನ್ ನೈನಲ್ಲಿ ಮಾತ್ರವಲ್ಲದೆ ಬೀದಿಯಲ್ಲಿ ಶಕ್ತಿ ತೋರಿಸುವ ಸಮಯ ಇದು. ಆತ್ಮವಂಚಕ ಆಡಳಿತಕ್ಕೆ ಸಂದೇಶ ರವಾನಿಸಬೇಕು. ಹೀಗಾಗಿ ಭಾನುವಾರ ಬೆಳಗ್ಗೆ 11 ಕ್ಕೆ ಟೌನ್ ಹಾಲ್ ಮುಂಭಾಗ ಶಾಂತಿಯುತ ಮಾನವ ಸರಪಳಿ ನಿರ್ಮಾಣಕ್ಕೆ ಎಲ್ಲರೂ ಬನ್ನಿ ಎಂದು ಆನ್ ಲೈನ್ ಮೂಲಕ ಆಹ್ವಾನ ಇಟ್ಟಿತ್ತು. ಅಲ್ಲದೆ ಇಲ್ಲಿ ನಾಯಕರು ಇಲ್ಲ. ನಮಗೆ ನಾವೇ ನಾಯಕರು. ಇಲ್ಲಿ ಸಂಘಟನೆಯೂ ಇಲ್ಲ. ಪ್ರಜೆಗಳು ಕೈಜೋಡಿಸುವುದೇ ಸಂಘಟನೆ ಎಂದು ಹೇಳಿದ್ದರು. ..
ಈ ಕಾರ್ಯಕ್ರಮದ ಬಗ್ಗೆ ಮೇ 22 ರಂದು ಬೆಂಗಳೂರು ನಗರದ ಪೊಲೀಸ್ ಆಯುಕ್ತರ ಕಚೇರಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿರುವ ಕಾಕ್ರೋಚ್ ಜನತಾ ಪಾರ್ಟಿಯ ಬೃಹತ್ ಮಾನವ ಸರಪಳಿ ನಡೆಸಲು, ಯಾವುದೇ ವ್ಯಕ್ತಿ, ಸಂಘಟನೆ ಅಥವಾ ರಾಜಕೀಯ ಪಕ್ಷ ಟೌನ್ ಹಾಲ್ ನಲ್ಲಿ ನಡೆಸಲು ಅನುಮತಿ ಕೇಳ್ಳಿಲ್ಲ. ಜಿಬಿಎ ನಿಂದಲೂ ಅನುಮತಿ ಪಡೆದಿಲ್ಲ. ಹೈಕೋರ್ಟ್ ನಿಯಮವೂ ಪ್ರತಿಭಟನೆ ,ಧರಣಿ, ರ್ಯಾಲಿಗಳಿದ್ದರೆ ಫ್ರೀಡಂ ಪಾರ್ಕ್ ಮಾತ್ರ ಅನುಮತಿ ಇದೆ ಎಂದಿದೆ.
ಹೀಗಾಗಿ ಜನರು, ಗೊತ್ತಿದ್ದೂ ಅಥವಾ ಗೊತ್ತಿಲ್ಲದೆ ಕಾಕ್ರೋಚ್ ಪಾರ್ಟಿಯ ಆಹ್ವಾನವನ್ನು ವಾಟ್ಸಾಪ್,ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಬಾರದು, ಹಾಗೂ ಟೌನ್ ಹಾಲ್ ಬಳಿ ಸೇರಬಾರದು ಎಂದು ನೋಟಿಸ್ ನಲ್ಲಿ ತಿಳಿಸಿದೆ. ಜನರಿಗೆ ಕಾನೂನಿನ ಅರಿವು ಮೂಡಿಸಲು ಈ ನೋಟಿಸ್ ಮಾಡಲಾಗಿದೆ ಎಂದೂ ಪೊಲೀಸ್ ಇಲಾಖೆ ತಿಳಿಸಿದೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am