ಬ್ರೇಕಿಂಗ್ ನ್ಯೂಸ್
10-05-26 09:38 pm HK News Desk ದೇಶ - ವಿದೇಶ
ಕೊಲ್ಕತ್ತಾ, ಮೇ 10: ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ತಮ್ಮ ಪಕ್ಷದ ಬೆಂಬಲಿತ ನಾಯಕರ ಪತ್ರಿಕೆ, ತಮ್ಮ ಪರವಾಗಿರುವ ಪತ್ರಿಕೆಗಳು ಅಥವಾ ಇನ್ನಿತರ ಮಾಧ್ಯಮಗಳಿಗೆ ಮಾತ್ರ ಸರ್ಕಾರಿ ಜಾಹೀರಾತು ನೀಡುವ ಪದ್ಧತಿ ಜಾರಿಗೆ ತರಲಾಗಿತ್ತು. ಇದೀಗ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಬಂದ ಬೆನ್ನಲ್ಲೇ ಸಿಪಿಎಂ ಪಕ್ಷದ ಪತ್ರಿಕೆಗೆ ಬಹುಕಾಲದ ಬಳಿಕ ಜಾಹೀರಾತು ಸಿಕ್ಕಿದೆ.
ಪಶ್ಚಿಮ ಬಂಗಾಳದಲ್ಲಿ ಬರೋಬ್ಬರಿ 35 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸಿಪಿಎಂ, ಅಧಿಕಾರ ಕಳೆದುಕೊಂಡ ನಂತರ ಮಮತಾ ಬ್ಯಾನರ್ಜಿ ಅವರ ದ್ವೇಷದ ರಾಜಕಾರಣದಿಂದಾಗಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿತ್ತು. ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾದ ಮೇಲೆ, ಕಳೆದ 15 ವರ್ಷಗಳಲ್ಲಿ ಸಿಪಿಎಂ ಪಕ್ಷದ ಪರವಾಗಿದ್ದ ಯಾವುದೇ ಪತ್ರಿಕೆಗೆ ಸರ್ಕಾರಿ ಜಾಹೀರಾತುಗಳೇ ಸಿಕ್ಕಿರಲಿಲ್ಲ. ಆದರೆ ಈಗ, ಬಿಜೆಪಿ ಅಧಿಕಾರಕ್ಕೆ ಬಂದು, ಪ್ರಮಾಣ ವಚನ ಸ್ವೀಕರಿಸಿದ ದಿನವೇ ಎಲ್ಲ ಪತ್ರಿಕೆಗಳಿಗೆ ನೀಡಿದಂತೆ ಸಿಪಿಎಂ ಪತ್ರಿಕೆಗೂ ಸರ್ಕಾರಿ ಜಾಹೀರಾತು ನೀಡಲಾಗಿದೆ.
ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ತನ್ನ ಪರವಾಗಿಲ್ಲದ ಹಲವು ಪತ್ರಿಕೆಗಳಿಗೆ ಜಾಹೀರಾತು ನಿಷೇಧಿಸಲಾಗಿತ್ತು. ಆದರೆ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಸಿಪಿಎಂ ಮುಖವಾಣಿ 'ಗಣಶಕ್ತಿ' ಪತ್ರಿಕೆಯ ಮೊದಲ ಪುಟದಲ್ಲೇ ಸರ್ಕಾರದ ಅಧಿಕೃತ ಜಾಹೀರಾತು ಪ್ರಕಟವಾಗಿದೆ. ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹೊಸ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಸುವೇಂದು ಅಧಿಕಾರಿ ಅವರ ಫೋಟೋಗಳನ್ನು ಕೊಡಲಾಗಿದ್ದು ಮತದಾರರಿಗೆ ಅಭಿನಂದನೆ ಸಲ್ಲಿಸಿದ ಸಂದೇಶಗಳಿವೆ.
ಬ್ಯಾನರ್ಜಿ ಸರ್ಕಾರದ ಸರ್ವಾಧಿಕಾರಿ ಧೋರಣೆಯ ಬಳಿಕ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಮ್ಮ ಪಕ್ಷದ ಪತ್ರಿಕೆಗೆ ಜಾಹೀರಾತು ಸಿಕ್ಕ ವಿಷಯದ ಬಗ್ಗೆ ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ಹಾಗೂ ಪಶ್ಚಿಮ ಬಂಗಾಳ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಪ್ರತಿಕ್ರಿಯಿಸಿದ್ದಾರೆ. 'ಗಣಶಕ್ತಿ'ಗೆ ಜಾಹೀರಾತು ನಿಷೇಧಿಸಿದ್ದ ಮಮತಾ ಸರ್ಕಾರದ ನಿಲುವಿನ ವಿರುದ್ಧ ಸಿಪಿಎಂ ಕಾನೂನು ಹೋರಾಟವನ್ನೂ ನಡೆಸಿತ್ತು, ಆದರೆ ಅದರಿಂದ ಪ್ರಯೋಜನ ಏನೂ ಆಗಿರಲಿಲ್ಲ. ಈ ಸಮಯದಲ್ಲಿ ಪತ್ರಿಕೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಈಗ ಬಿಜೆಪಿ ಅಧಿಕಾರಕ್ಕೆ ಬಂದಿದ್ದರಿಂದ ಸಂಕಷ್ಟ ದೂರವಾಗುವ ಲಕ್ಷಣ ಇದೆ ಎಂದು ಸಿಪಿಎಂ ರಾಜ್ಯ ನಾಯಕರು ಹೇಳುತ್ತಿದ್ದಾರೆ.
ಪ್ರಮಾಣ ವಚನ ಸಮಾರಂಭದಲ್ಲೂ ಬಿಜೆಪಿ ನಾಯಕರು ಬಂಗಾಳವನ್ನು ಹಿಂದೆ ಆಳಿದ್ದ ಸಿಪಿಎಂ ನಾಯಕರನ್ನು ಹಾಡಿ ಹೊಗಳಿದ್ದು ವಿಶೇಷ. ಮಾಜಿ ಮುಖ್ಯಮಂತ್ರಿ, ದಿವಂಗತ ಬುದ್ಧದೇವ್ ಭಟ್ಟಾಚಾರ್ಯ ಮತ್ತು ಪಶ್ಚಿಮ ಬಂಗಾಳ ಎಡರಂಗದ ಅಧ್ಯಕ್ಷ ಬಿಮನ್ ಬೋಸ್ ಅವರನ್ನು ಬಿಜೆಪಿ ನಾಯಕರು ಪ್ರಶಂಸಿದ್ದಾರೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am