ಬ್ರೇಕಿಂಗ್ ನ್ಯೂಸ್
08-05-26 12:06 pm HK News Staffer ದೇಶ - ವಿದೇಶ
ಮುಂಬೈ, ಮೇ 8: ನವಿ ಮುಂಬೈನಿಂದ ಮಂಗಳೂರಿಗೆ ತೆರಳಬೇಕಿದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕನ ಗಲಾಟೆ ಇಡೀ ಪ್ರಯಾಣವನ್ನು ಗೊಂದಲದ ಗೂಡನ್ನಾಗಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಉದ್ದ ಸಾಲುಗಳು, ಭದ್ರತಾ ತಪಾಸಣೆ, ಗೇಟ್ ಬದಲಾವಣೆ ಮತ್ತು ವಿಳಂಬಗಳಿಂದಲೇ ವಿಮಾನ ಪ್ರಯಾಣಿಕರು ಬೇಸತ್ತಿರುತ್ತಾರೆ. ಆದರೆ ಈ ಬಾರಿ ಪರಿಸ್ಥಿತಿ ಮತ್ತಷ್ಟು ಕಿರಿಕಿರಿಯಾಗಿದ್ದು, ವಿಮಾನದೊಳಗೇ ವಾಗ್ವಾದ ಮತ್ತು ಉದ್ವಿಗ್ನತೆ ಸೃಷ್ಟಿಯಾಗಿದೆ.
ಮಾಹಿತಿ ಪ್ರಕಾರ, ಮುಂಬೈಯಿಂದ ಗುರುವಾರ ಬೆಳಗ್ಗೆ 11 ಗಂಟೆಗೆ ಟೇಕ್ ಆಫ್ ಆಗಬೇಕಿದ್ದ ವಿಮಾನ, ಓರ್ವ ಪ್ರಯಾಣಿಕ ತನ್ನ ಪತ್ನಿಯೊಂದಿಗೆ ತಡವಾಗಿ ಆಗಮಿಸಿದ ಕಾರಣ ಮಧ್ಯಾಹ್ನ 12.23ಕ್ಕೆ ಹೊರಟಿದೆ. ಆ ವೇಳೆ ಉಳಿದ ಎಲ್ಲಾ ಪ್ರಯಾಣಿಕರು ಅದಾಗಲೇ ವಿಮಾನದಲ್ಲಿ ಕುಳಿತು ಕಾಯುತ್ತಿದ್ದರು. ಸಾಮಾಜಿಕ ಜಾಲತಾಣ X ನಲ್ಲಿ ವೈರಲ್ ಆದ ವಿಡಿಯೋದಲ್ಲಿ, ತಡವಾಗಿ ಬಂದ ಪ್ರಯಾಣಿಕ ಹಾಗೂ ಬಳಿಕ ವಿಮಾನಕ್ಕೇರಿದ ಅವರ ಪತ್ನಿಯನ್ನು ನೋಡಿ ಕೆಲವರು ವ್ಯಂಗ್ಯವಾಗಿ ಚಪ್ಪಾಳೆ ತಟ್ಟಿ ಅಸಮಾಧಾನ ಹೊರಹಾಕಿರುವುದು ಕಂಡುಬಂದಿದೆ.
ಆದರೆ ಘಟನೆ ಅಲ್ಲಿಗೇ ನಿಲ್ಲಲಿಲ್ಲ. ಬಳಿಕ ವಿಮಾನದೊಳಗೆ ಕೆಲ ಪ್ರಯಾಣಿಕರು ತೀವ್ರ ವಾಗ್ವಾದ ನಡೆಸಿದ್ದಾರೆ. ಆತ ಸಹ ಪ್ರಯಾಣಿಕರೊಂದಿಗೆ ಆಕ್ರೋಶದಿಂದ ಮಾತನಾಡಿ, ಅಸಭ್ಯ ಪದ ಬಳಕೆ ಮಾಡಿದ್ದಲ್ಲದೆ, “ನೀಚೇ ಉತರ್ ದಿಖಾತಾ ಹೂಂ ಕೌನ್ ಹೂಂ ಮೈ…” (ಕೆಳಗಿಳಿದ ಬಳಿಕ ನಾನ್ಯಾರೆಂದು ತೋರಿಸುತ್ತೇನೆ) ಎಂದು ಬೆದರಿಕೆ ಹಾಕಿದ್ದಾನೆ.
ತನ್ನ ವಿಳಂಬವನ್ನು ಸಮರ್ಥಿಸಿಕೊಳ್ಳಲು “ವಿಮಾನಗಳು ಯಾವಾಗಲೂ ತಡವಾಗುತ್ತವೆ” ಎಂದು ಆತ ಹೇಳಿದ ಮಾತು ಉಳಿದ ಪ್ರಯಾಣಿಕರ ಕೋಪವನ್ನು ಇನ್ನಷ್ಟು ಹೆಚ್ಚಿಸಿದೆ. ಕೊನೆಗೆ ಪ್ರಯಾಣಿಕರ ಒತ್ತಾಯದ ಮೇರೆಗೆ ಆತ ಕ್ಷಮೆ ಕೇಳಿದ್ದಾನೆ. ಬಳಿಕ ವಿಮಾನ ಮಂಗಳೂರು ಕಡೆ ಪ್ರಯಾಣ ಮುಂದುವರಿಸಿತು.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕ ಶಿಸ್ತು ಮತ್ತು ಪರಸ್ಪರ ಗೌರವದ ಬಗ್ಗೆ ದೊಡ್ಡ ಚರ್ಚೆ ಆರಂಭವಾಗಿದೆ. ಸಮಯಕ್ಕೆ ಸರಿಯಾಗಿ ಬಂದು ಎಲ್ಲಾ ನಿಯಮಗಳನ್ನು ಪಾಲಿಸುವ ಪ್ರಯಾಣಿಕರಿಗೆ, ಕೆಲವರು ಮಾತ್ರ ತಮ್ಮ ಅನುಕೂಲಕ್ಕೆ ತಕ್ಕಂತೆ ವರ್ತಿಸುವುದು ಅಸಮಾಧಾನ ಮೂಡಿಸಿದೆ.
@Ministry_CA @mohol_murlidhar @Dev_Fadnavis @NidhiKamdarMH
— Punita Toraskar (@impuni) May 7, 2026
I am on board Mangaluru flight from Navi Mumbai . Our flight which was supposed to take off at 11.00 is taking off now at 12.23 bcoz of one passenger who arrived at 1100 for a flight supposed to take off at 1100 .
And… pic.twitter.com/LsMTz9I6yW
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am