ಬ್ರೇಕಿಂಗ್ ನ್ಯೂಸ್
07-05-26 08:57 pm HK News Staffer ದೇಶ - ವಿದೇಶ
ತಿರುವನಂತಪುರಂ, ಮೇ 7: ಕೇರಳದಲ್ಲಿ ಹತ್ತು ವರ್ಷಗಳ ಬಳಿಕ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಮರಳಿದ್ದು, ಆಡಳಿತದ ಚುಕ್ಕಾಣಿ ಹಿಡಿಯಲು ಪ್ರಮುಖ ನಾಯಕರ ನಡುವೆ ಪೈಪೋಟಿ ಜೋರಾಗಿದೆ. ಕಳೆದ ಬಾರಿ ವಿಪಕ್ಷ ನಾಯಕರಾಗಿದ್ದ ವಿ.ಡಿ ಸತೀಶನ್, ಕೆಸಿ ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಈ ನಡುವೆ, ಗುರುವಾರ ಬೆಳಗ್ಗೆ ಎಐಸಿಸಿ ವೀಕ್ಷಕರು ಕಾಂಗ್ರೆಸ್ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ವೀಕ್ಷಕರಾಗಿ ಪಕ್ಷದ ಹಿರಿಯ ಮುಖಂಡರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕನ್ ಆಗಮಿಸಿದ್ದು ತಿರುವನಂತಪುರದ ಇಂದಿರಾ ಭವನದಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಅಲ್ಲದೆ, ಖಾಸಗಿ ಹೊಟೇಲ್ ನಲ್ಲಿಯೂ ಸಭೆ ನಡೆಸಿ ಅಭಿಪ್ರಾಯ ಕೇಳಿದ್ದಾರೆ. ಸಭೆಯಲ್ಲಿ ಸಿಎಂ ಆಯ್ಕೆ ನಿರ್ಧಾರವನ್ನು ಹೈಕಮಾಂಡ್ ನಾಯಕರಿಗೆ ವಹಿಸಿದ್ದಾರೆನ್ನುವ ಮಾಹಿತಿ ಇದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಜಯ್ ಮಾಕನ್, ನಾವು ಅಭಿಪ್ರಾಯ ಸಂಗ್ರಹಿಸಿದ್ದು ಇದರ ವರದಿಯನ್ನು ಎಐಸಿಸಿ ಅಧ್ಯಕ್ಷರಿಗೆ ಸಲ್ಲಿಸುತ್ತೇವೆ, ಒಂದೆರಡು ದಿನದಲ್ಲಿ ಹೊಸ ಸಿಎಂ ನಿರ್ಧಾರ ಆಗಲಿದೆ ಎಂದಿದ್ದಾರೆ.
ಇದೇ ವೇಳೆ, ಮೂವರು ನಾಯಕರ ಬೆಂಬಲಿಗರು ಸಿಎಂ ಸ್ಥಾನಕ್ಕಾಗಿ ತೀವ್ರ ಲಾಬಿ ಪ್ರಾರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನಾಯಕರ ಪರವಾಗಿ ಅಭಿಯಾನ ನಡೆಸಿದ್ದಾರೆ. ವಿ.ಡಿ. ಸತೀಶನ್ ಪರವಾಗಿ ಎರ್ನಾಕುಲಂ ಜಿಲ್ಲೆಯಲ್ಲಿ, ವೇಣುಗೋಪಾಲ್ ಪರವಾಗಿ ದೆಹಲಿಯಲ್ಲಿ ಬೆಂಬಲಿಗರು ಅಭಿನಂದನಾ ಸಮಾರಂಭಗಳನ್ನು ಆಯೋಜಿಸಿದ್ದಾರೆ.
ವಿಪಕ್ಷ ಮುಖಂಡರಾಗಿ ಪಕ್ಷದ ಸಾರಥ್ಯ ವಹಿಸಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ವಿಡಿ ಸತೀಶನ್ ಶ್ರಮಿಸಿದ್ದಾರೆ. ಕೇರಳದ ಮುಖ್ಯಮಂತ್ರಿ ಸ್ಥಾನಕ್ಕೆ ಅವರೇ ಅರ್ಹರು ಎಂದು ಅವರ ಬೆಂಬಲಿಗರು ವಾದಿಸುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಜನಪ್ರಿಯತೆ ಮತ್ತು ಜನಬೆಂಬಲ ಮಾತ್ರ ಮುಖ್ಯವಲ್ಲ, ಪಕ್ಷದ ಶಾಸಕರ ಬೆಂಬಲವೂ ನಿರ್ಣಾಯಕ ಎಂದು ವೇಣುಗೋಪಾಲ್ ಬೆಂಬಲಿಗರು ಹೇಳುತ್ತಿದ್ದಾರೆ.
ಕೆ.ಸಿ. ವೇಣುಗೋಪಾಲ್ ರಾಜ್ಯಸಭೆ ಸಂಸದರಾಗಿದ್ದು, ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಿಲ್ಲ. ಆದರೂ ರಾಹುಲ್ ಗಾಂಧಿ ಅವರ ಜತೆಗಿನ ಸಖ್ಯವು ಇವರನ್ನು ಸಿಎಂ ಗಾದಿಗೆ ಹತ್ತಿರವಾಗಿಸಿದೆ. ರಾಹುಲ್ ಅವರ ಕಟ್ಟಾ ನಿಷ್ಠಾವಂತರಲ್ಲಿ ವೇಣುಗೋಪಾಲ್ ಒಬ್ಬರಾಗಿದ್ದು ಮತ್ತು ಕ್ರಿಸ್ತಿಯನ್ ಸಮುದಾಯ ಆಗಿರುವುದರಿಂದ ಇವರ ಆಯ್ಕೆಗೆ ಪ್ರಬಲ ಲಾಬಿ ಕೇಳಿಬಂದಿದೆ. ಇದೇ ವೇಳೆ ವೇಣುಗೋಪಾಲ್ ದೆಹಲಿಯಲ್ಲಿ ಇರುವುದರಿಂದ ಹೊರಗಿನವರು, ಒಳಗಿನವರು ಎಂಬ ವಿಚಾರದಲ್ಲೂ ಹಗ್ಗಜಗ್ಗಾಟ ನಡೆಯುತ್ತಿದೆ.
ಒಂದ್ವೇಳೆ, ಸಿಎಂ ಸ್ಥಾನ ಸಿಗದೇ ಇದ್ದರೆ ತಾನು ಯಾವುದೇ ಮಂತ್ರಿ ಸ್ಥಾನವನ್ನೂ ಸ್ವೀಕರಿಸುವುದಿಲ್ಲ. ಕಾಂಗ್ರೆಸ್ ಶಾಸಕನಾಗಿಯೇ ಇರುತ್ತೇನೆ ಎಂದು ವಿಡಿ ಸತೀಶನ್ ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಎಐಸಿಸಿಗೆ ಶುಕ್ರವಾರದ ವೇಳೆಗೆ ವರದಿ ಸಲ್ಲಿಕೆಯಾದರೆ ಮೇ 10ರಂದು ಕೇರಳ ಸಿಎಂ ಘೋಷಣೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am