ಬ್ರೇಕಿಂಗ್ ನ್ಯೂಸ್
04-05-26 09:51 pm HK News Staffer ದೇಶ - ವಿದೇಶ
ಚೆನ್ನೈ, ಮೇ 4: ತಮಿಳುನಾಡಿನಲ್ಲಿ ನಟ ವಿಜಯ್ ಅವರ ಟಿವಿಕೆ ಬಿರುಗಾಳಿಗೆ ಹಾಲಿ ಸಿಎಂ ಎಂ.ಕೆ ಸ್ಟಾಲಿನ್ ಸೇರಿದಂತೆ ಘಟಾನುಘಟಿಗಳು ತರಗೆಲೆಯಂತೆ ತತ್ತರಿಸಿ ಬಿದ್ದಿದ್ದಾರೆ. ಒಂದು ಕಾಲದ ಡಿಎಂಕೆ ನಾಯಕನ ಎದುರಲ್ಲೇ ಸ್ಟಾಲಿನ್ ಸೋಲು ಕಂಡಿದ್ದು ವಿಶೇಷ.
ಟಿವಿಕೆ ಅಭ್ಯರ್ಥಿ, ಒಂದು ಕಾಲದ ಆಪ್ತನಾಗಿದ್ದ ವಿ.ಎಸ್ ಬಾಬು ಎದುರಲ್ಲಿ ಸಿಎಂ ಸ್ಟಾಲಿನ್ 9121 ಮತಗಳಿಂದ ಸೋತು ತೀವ್ರ ಮುಖಭಂಗ ಅನುಭವಿಸಿದ್ದಾರೆ. ಕೊಳತ್ತೂರು ಕ್ಷೇತ್ರವನ್ನು ಸ್ಟಾಲಿನ್ 2011ರಿಂದ ಮೂರು ಬಾರಿ ಪ್ರತಿನಿಧಿಸಿದ್ದರು. ಬಾಬು ಅವರು ಹಿಂದೆ ಡಿಎಂಕೆ ಪಕ್ಷದಲ್ಲಿ ಸಕ್ರಿಯನಾಗಿದ್ದು ಸ್ಟಾಲಿನ್ ಆಪ್ತನೂ ಆಗಿದ್ದ. ಉತ್ತರ ಚೆನ್ನೈ ವಿಭಾಗದಲ್ಲಿ ಡಿಎಂಕೆ ಜಿಲ್ಲಾ ಕಾರ್ಯದರ್ಶಿ ಆಗಿದ್ದರು. ಆನಂತರ, ಪಕ್ಷದಲ್ಲಿ ಮುನಿಸಿಕೊಂಡು ಎಐಎಡಿಎಂಕೆಯಲ್ಲಿ ಗುರುತಿಸಿಕೊಂಡಿದ್ದರು. 2026ರ ಚುನಾವಣೆಗೂ ಮೊದಲು ಬಾಬು ವಿಜಯ್ ಪಕ್ಷ ಸೇರಿದ್ದರು.
ಅಂದಹಾಗೆ, ಸ್ಟಾಲಿನ್ ಅಧಿಕಾರದಲ್ಲಿದ್ದಾಗಲೇ ಸೋತ ನಾಲ್ಕನೇ ಸಿಎಂ ಆಗಿದ್ದಾರೆ. ಈ ಹಿಂದೆ, ಪಿಎಸ್ ಕುಮಾರಸಾಮಿ, ಭಕ್ತವತ್ಸಲಂ ಮತ್ತು ಜಯಲಲಿತಾ ಅವರು ಕೂಡ ಸಿಎಂ ಆಗಿದ್ದಾಗಲೇ ಸೋಲನುಭವಿಸಿದ್ದರು. ವಿಶೇಷ ಅಂದರೆ 2011 ರ ಚುನಾವಣೆಯಲ್ಲಿ ಬಾಬು ಅವರೇ ಕೊಳತ್ತೂರು ಕ್ಷೇತ್ರದಲ್ಲಿ ಸ್ಟಾಲಿನ್ ಗೆಲ್ಲಿಸಲು ಕೆಲಸ ಮಾಡಿದ್ದರು. ಆನಂತರ, ತನ್ನ ಬದಲು ಪಿಕೆ ಸೇಕರ್ ಬಾಬು ಡಿಎಂಕೆಯಲ್ಲಿ ಪ್ರಾಬಲ್ಯಗೊಂಡಿದ್ದರಿಂದ ಬಾಬು ನೇಪಥ್ಯಕ್ಕೆ ಸರಿದಿದ್ದರು. ಈಗ ವಿಜಯ್ ಬ್ರಾಂಡಿನ ಲಾಭ ಪಡೆದು ಸಿಎಂ ಆಗಿದ್ದ ಸ್ಟಾಲಿನ್ ಅವರನ್ನೇ ಸೋಲಿಸಿ ದೇಶದ ಗಮನ ಸೆಳೆದಿದ್ದಾರೆ.
ಎರಡು ಕಡೆ ವಿಜಯ್ ಗೆಲುವು
ಪೆರುಂಬದೂರ್ ಹಿಂದಿನಿಂದಲೂ ಡಿಎಂಕೆ ಪ್ರಾಬಲ್ಯದ ಕ್ಷೇತ್ರ. ಆದರೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವಿಜಯ್ ಎರಡೂ ಕಡೆ ಭಾರೀ ಅಂತರದ ಗೆಲುವು ಸಾಧಿಸಿದ್ದಾರೆ. ಪೆರುಂಬದೂರಿನಲ್ಲಿ ಡಿಎಂಕೆಯ ಆರ್ ಡಿ ಸೇಕರ್ ವಿರುದ್ಧ 50 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದರೆ, ತಿರುಚಿರಾಪಳ್ಳಿ ಪೂರ್ವ ಕ್ಷೇತ್ರದಲ್ಲಿ ಡಿಎಂಕೆಯ ಇರುದಯರಾಜ್ ವಿರುದ್ಧ 23 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದಾರೆ.
ವಿಜಯ್ ಕಾರು ಚಾಲಕನ ಪುತ್ರ ಶಾಸಕ
ಇದರ ಮಧ್ಯೆ ಹೆಚ್ಚು ಗಮನ ಸೆಳೆದಿದ್ದು ಚೆನ್ನೈ ಪಕ್ಕದ ವಿರುಗಾಂಬಕ್ಕಂ ಕ್ಷೇತ್ರ. ಅಲ್ಲಿ ಟಿವಿಕೆ ಪಕ್ಷದಿಂದ ಗೆದ್ದಿದ್ದು ವಿಜಯ್ ಅವರ ಕಾರು ಚಾಲಕನ ಪುತ್ರ 30 ವರ್ಷದ ಆರ್.ಸಬರಿನಾಥನ್. 2016 ರಲ್ಲಿ ಎಐಡಿಎಂಕೆಯ ವಿರುಗ ರವಿ ಮತ್ತು 2021ರಲ್ಲಿ ಪ್ರಭಾಕರ ರಾಜಾ ಈ ಕ್ಷೇತ್ರವನ್ನು 22 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದರು.


49 ವರ್ಷಗಳ ಬಳಿಕ ಸಿನಿಮಾ ತಾರೆಯ ಮ್ಯಾಜಿಕ್
ತಮಿಳರ ನಾಡಿನಲ್ಲಿ ಸಿನಿಮಾ ನಟರಿಗೆ ಜನರು ಮತಧಾರೆ ನೀಡುವುದು ಹೊಸತಲ್ಲ. ಆದರೆ ವಿಜಯ್ ತಾನು ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಮ್ಯಾಜಿಕ್ ಮಾಡಿದ್ದಾರೆ. 49 ವರ್ಷಗಳ ಹಿಂದೆ ಅಂದರೆ 1977ರಲ್ಲಿ ಎಂಜಿಆರ್ ಕೂಡ ಇದೇ ರೀತಿ ಚಿತ್ರರಂಗದಿಂದ ನೇರವಾಗಿ ಚುನಾವಣಾ ಕಣಕ್ಕೆ ಧುಮುಕಿ ಯಶಸ್ಸು ಸಾಧಿಸಿದ್ದರು. ಹತ್ತು ವರ್ಷಗಳ ಕಾಲ ಆಡಳಿತ ನಡೆಸಿ 1987ರಲ್ಲಿ ಅಧಿಕಾರದಲ್ಲಿದ್ದಾಗಲೇ ಎಂಜಿಆರ್ ನಿಧನರಾಗಿದ್ದರು. ಎಂಜಿಆರ್ ಹಾದಿಯಲ್ಲೇ ವಿಜಯ್ ಯಶಸ್ಸು ಗಳಿಸಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am