ಬ್ರೇಕಿಂಗ್ ನ್ಯೂಸ್
04-01-21 11:54 pm Headline Karnataka News Network ದೇಶ - ವಿದೇಶ
Photo credits : Getty, file image
ಬೀಜಿಂಗ್, ಜ.4: ಜಗದ್ವಿಖ್ಯಾತ ಆನ್ ಲೈನ್ ದಿಗ್ಗಜ ಆಲಿಬಾಬಾ ಸಮೂಹ ಸಂಸ್ಥೆಗಳ ಸ್ಥಾಪಕ, ಚೀನಾದ ನಂಬರ್ ವನ್ ಶ್ರೀಮಂತನಾಗಿದ್ದ ಜ್ಯಾಕ್ ಮಾ ದಿಢೀರ್ ನಾಪತ್ತೆಯಾಗಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಜ್ಯಾಕ್ ಮಾ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎನ್ನಲಾಗುತ್ತಿದ್ದು, ಅವರನ್ನು ಉದ್ದೇಶಪೂರ್ವಕವಾಗಿ ಚೀನಾ ಸರಕಾರ ಅಡಗಿಸಿಟ್ಟಿದೆ ಎನ್ನುವ ಆರೋಪ ಕೇಳಿಬಂದಿದೆ. ಮೂರು ತಿಂಗಳ ಹಿಂದೆ ಜ್ಯಾಕ್ ಮಾ, ಚೀನಾದ ಕಮ್ಯುನಿಸ್ಟ್ ಸರಕಾರದ ವಿರುದ್ಧ ಮಾತನಾಡಿದ್ದರು. ಅಲ್ಲದೆ, ಅಧ್ಯಕ್ಷ ಕ್ಸಿ ಜಿನ್ ಪಿಂಗ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಈ ಘಟನೆಯ ಬೆನ್ನಿಗೇ ಜ್ಯಾಕ್ ಮಾ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ. ಆಲಿಬಾಬಾ ಸಮೂಹ ಸೇರಿದಂತೆ ಅದರ ಸೋದರ ಸಂಸ್ಥೆಗಳಾದ ಆಂಟ್ ಇನ್ನಿತರ ಕಂಪನಿಗಳನ್ನೂ ನಡೆಸುತ್ತಿದ್ದ ಜ್ಯಾಕ್ ಮಾ, ಎರಡು ತಿಂಗಳ ಹಿಂದೆ ಕಮ್ಯುನಿಸ್ಟ್ ಸರಕಾರ ಮತ್ತು ಅಲ್ಲಿನ ಯೂನಿಯನ್ ಬ್ಯಾಂಕ್ ಗಳ ವಿರುದ್ಧ ಕಿಡಿಕಾರಿದ್ದರು. ಇಂದಿನ ಹಣಕಾಸು ವ್ಯವಸ್ಥೆ ಕೈಗಾರಿಕಾ ಯುಗದ ಪಳೆಯುಳಿಕೆಯಾಗಿದೆ, ನಾವು ಇದನ್ನು ಹೊಸ ಜಮಾನಾದ ಯುವ ಜನಾಂಗಕ್ಕಾಗಿ ಬದಲಾವಣೆ ತರಬೇಕು. ಈಗಿನ ವ್ಯವಸ್ಥೆಯಲ್ಲಿ ಸುಧಾರಣೆ ತರಲೇಬೇಕು ಎಂದು ಹೇಳಿಕೆ ನೀಡಿದ್ದರು.

ಆಬಳಿಕ ಆಲಿಬಾಬ ಸಮೂಹ ಕಂಪೆನಿಗಳ ಏಕಸ್ವಾಮ್ಯ ನೀತಿ ವಿರುದ್ಧ ಕ್ಸಿ ಜಿನ್ ಪಿಂಗ್ ಆಡಳಿತ ದಂಡ ವಿಧಿಸಲು ಮುಂದಾಗಿತ್ತು. ಅಧ್ಯಕ್ಷರ ಸೂಚನೆಯಂತೆ, ಆಲಿಬಾಬ ಕಂಪನಿಯ ಏಂಟ್ ಗ್ರೂಪಿಗೆ ಸೇರಿದ 37 ಲಕ್ಷ ಡಾಲರ್ ಸಾರ್ವಜನಿಕ ಫಂಡಿಂಗ್ ಮೊತ್ತವನ್ನು ಅಮಾನತ್ತಿನಲ್ಲಿಡಲಾಗಿತ್ತು. ಇವೆಲ್ಲ ಬೆಳವಣಿಗೆ ಮಧ್ಯೆಯೇ ಆಲಿಬಾಬ ಕಂಪನಿಯಿಂದ ನಿರ್ವಹಿಸಲ್ಪಡುತ್ತಿದ್ದ ಟಿವಿ ಶೋ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಪಾಲ್ಗೊಳ್ಳಬೇಕಿದ್ದ ಜ್ಯಾಕ್ ಮಾ, ಅಲ್ಲಿ ಕಾಣಿಸಿಕೊಳ್ಳದೇ ಮಾಯವಾಗಿದ್ದರು. ಆಫ್ರಿಕಾ ಮೂಲದ ಉದ್ಯಮಿಗಳಿಗಾಗಿ ಆಯೋಜಿಸುತ್ತಿದ್ದ ಈ ಕಾರ್ಯಕ್ರಮದ ವಿಜೇತರಿಗೆ ಕಂಪನಿ ಕಡೆಯಿಂದ 1.5 ಮಿಲಿಯನ್ ಡಾಲರ್ ಬಹುಮಾನ ನೀಡಲಾಗುತ್ತಿತ್ತು. ನವೆಂಬರ್ ನಲ್ಲಿ ನಡೆದ ಫೈನಲ್ ಕಾರ್ಯಕ್ರಮದಲ್ಲಿ ಜ್ಯಾಕ್ ಬದಲಿಗೆ, ಆಲಿಬಾಬ ಕಂಪನಿಯ ಸಿಇಓ ಒಬ್ಬರನ್ನು ಕಳುಹಿಸಲಾಗಿತ್ತು. ಇದೇ ವೇಳೆ, ಆಲಿಬಾಬ ಸಮೂಹ ಕಂಪನಿಯ ವೆಬ್ ಸೈಟಿನಲ್ಲಿಯೂ ಜ್ಯಾಕ್ ಮಾ ಫೋಟೋ ಮಾಯವಾಗಿದೆ.
ವಿಶೇಷ ಅಂದ್ರೆ, ಆಂಟ್ ಕಂಪನಿಯಲ್ಲಾದ ನಷ್ಟದ ಬಳಿಕ ಚೀನಾದ ನಂಬರ್ ವನ್ ಶ್ರೀಮಂತ ಪಟ್ಟದಿಂದ ಜ್ಯಾಕ್ ಮಾ ಮೂರನೇ ಸ್ಥಾನಕ್ಕೆ ಜಾರಿದ್ದರು. ಬಜೆಟ್ ಇ- ಕಾಮರ್ಸ್ ಸ್ಥಾಪಕ ಪಿನ್ ಡುವು ಕಾಲಿನ್ ಹಾಂಗ್(63.1 ಬಿಲಿಯನ್ ಡಾಲರ್), ಟೆನ್ಸೆಂಟ್ ಹೋಲ್ಡಿಂಗ್ಸ್ ಕಂಪನಿಯ ಪೋನಿ ಮಾ ಹಾಟೆಂಗ್(56.4 ಬಿಲಿಯನ್ ಡಾಲ್) ಮತ್ತು ಜ್ಯಾಕ್ ಮಾ 50.6 ಬಿಲಿಯನ್ ಡಾಲರ್ ಶ್ರೀಮಂತಿಕೆಯೊಂದಿಗೆ ಮೂರನೇ ಸ್ಥಾನ ಹೊಂದಿದ್ದರು.
ಚೀನಾ ಸರಕಾರದ ನೀತಿಗಳ ಬಗ್ಗೆ ಯಾರು ಕೂಡ ಪ್ರಶ್ನೆ ಮಾಡದಂತೆ ಅಲ್ಲಿನ ಶ್ರೀಮಂತ ಉದ್ಯಮಿಗಳನ್ನೂ ಹಿಡಿದಿಟ್ಟಿದೆ ಎನ್ನುವುದಕ್ಕೆ ಈ ಬೆಳವಣಿಗೆ ಸಾಕ್ಷಿ. 56 ವರ್ಷದ ಜಗತ್ತಿನ ಪ್ರಭಾವಿ ರಾಷ್ಟ್ರದ ಅತ್ಯಂತ ಶ್ರೀಮಂತ ಉದ್ಯಮಿಯೇ ಎರಡು ತಿಂಗಳಿಂದ ನಾಪತ್ತೆಯಾಗುತ್ತಾರೆ ಎಂದರೆ ಅಲ್ಲಿನ ಸ್ಥಿತಿ ಹೇಗಿರಬಹುದು ಊಹಿಸಬಹುದು.
Jack Ma, the 56-year-old billionaire founder of Alibaba and Ant Group, hasn't been seen publicly in more than two months, Jessica Yun reported for Yahoo Finance on Sunday.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm